ಮಹಾಕುಂಭಮೇಳದಲ್ಲಿ ಇಷ್ಟು ದಿನ ಬಾಬಾಗಳ ಪವಾಡಗಳೇ ಸದ್ದು ಮಾಡ್ತಿದ್ವು. ಚಿತ್ರ ವಿಚಿತ್ರ ವೇಷತೊಟ್ಟ ಸಾಧು ಸಂತರು ವೈರಲ್ ಆಗ್ತಿದ್ರು. ಆದ್ರೀಗ, ದೇವ ಭೂಮಿಯಲ್ಲಿ ಜೇನುಗಣ್ಣಿನ ಸುಂದರಿ ಸೌಂಡ್ ಮಾಡ್ತಿದ್ದಾಳೆ. ಮೊನಾಲಿಸಾ ಅನ್ನೋ ಪರಮಸುಂದರಿಗೆ ಸೌಂದರ್ಯವೇ ಶಾಪವಾಗಿದೆ. ಸೈಲೆಂಟಾಗಿ ರುದ್ರಾಕ್ಷಿ ಮಾಲೆ ಮಾರಿಕೊಳ್ಳುತ್ತಿದ್ದ ಚೆಲುವೆ ಇದೀಗ ಏಕಾಏಕೀ ಮಹಾಕುಂಭಮೇಳದಿಂದ ಮರೆಯಾಗಿದ್ದಾಳೆ.
ಮಹಾಕುಂಭಮೇಳದಲ್ಲಿ ಕೈಯಲ್ಲಿ ರುದ್ರಾಕ್ಷಿ, ಜಪಮಾಲೆಗಳನ್ನ ಹಿಡಿದು ಮಾರಾಟ ಮಾಡ್ತಿದ್ದ ಚೆಲುವೆಗೆ ಅಂದವೇ ಶಾಪವಾದಂತೆ ಕಾಣುತ್ತಿದೆ.. ಯಾಕಂದ್ರೆ, ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ ಮೊನಾಲಿಸಾ ಬೀದಿಗೆ ಬಂದ್ರೆ ಸಾಕು ಕ್ಯಾಮರಾಗಳು ಬೆನ್ನಟ್ಟುತ್ತಿವೆ. ನನ್ನನ್ನ ಬಿಟ್ಟುಬಿಡ್ರೋ ಅಂದ್ರೂ ಬಿಡ್ತಿಲ್ಲ.. ಇಷ್ಟು ದಿನ ಹೊಟ್ಟೆಪಾಡಿಗಾಗಿ ಅಪ್ಪ ಅಮ್ಮನೊಂದಿಗೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಅಂದಗಾತಿಗೆ ಅಭಿಮಾನಿಗಳೇ ದೊಡ್ಡ ಸಮಸ್ಯೆ ಆಗ್ತಿದ್ದಾರೆ.. ಕಣ್ಣು ಹೊಡಯಾಕ ಮೊನ್ನೆ ಕಲಿತೀನಿ ಅಂದ್ರೂ ಬಿಡದೇ ಬೆನ್ನತ್ತುತ್ತಿದ್ದಾರೆ.
ಅಪ್ಪನಿಗೆ ಜೇನಗಣ್ಣ ಮಗಳನ್ನ ಜೋಪಾನ ಮಾಡೋ ಚಿಂತೆ!
ಅಮ್ಮನಿಗೆ "ಅತಿಯಾಯ್ತು" ಅನಿಸೋ ಬೇಸರ ಶುರುವಾಗಿದೆ!
ಮಧ್ಯ ಪ್ರದೇಶದ ಇಂದೋರ್ನ ಮೋನಾಲಿಸಾ ಮನೆಗೆ ಹಿರಿ ಮಗಳು.. ಅಚ್ಚರಿಯ ಸಂಗತಿ ಏನಂದ್ರೆ ಮೋನಾಲಿಸಾಳ ಇಡೀ ಕುಟುಂಬ ಒಂದೇ ರೀತಿ ಕಾಣುತ್ತದೆ.. ಎಲ್ಲರದ್ದು ಜೇನುಗಣ್ಣಿನ ಸೌಂದರ್ಯವೇ.. ಅದ್ರಲ್ಲೂ ಇವಳ ಅಣ್ಣ, ತಂಗಿ, ಅಜ್ಜಿ, ಅಮ್ಮ ಎಲ್ಲರ ಕಣ್ಣು ಒಂದೇ ರೀತಿ ಕಾಣುತ್ತದೆ.. ಆದರೇ, ಮೋನಾಲಿಸಾ ಅಪ್ಪನಿಗೆ ಇದೀಗ ಮಗಳನ್ನ ಜೋಪಾನ ಮಾಡೋದೇ ದೊಡ್ಡ ಸಮಸ್ಯೆ ಆಗಿಬಿಟ್ಟಿದೆ. ತೀರಾ ನ್ಯೂಸ್ ಚಾನಲ್ಗಳು, ಯುಟ್ಯೂಬರ್ಸ್ ಮೋನಾಲಿಸಾ ಕುಟುಂಬ ಪ್ರಯಾಗ್ ರಾಜ್ನಲ್ಲಿ ಹಾಕಿಕೊಂಡಿರೋ ತಾತ್ಕಾಲಿಕ ಟೆಂಟ್ಗೂ ನುಗ್ಗೋ ಪ್ರಯತ್ನ ಮಾಡ್ತಿದ್ದಾರೆ.. ಇದೇ ಕಾರಣಕ್ಕೇ, ಅತ್ಯಂತ ನಯ ನಾಜೂಕಿನಿಂದ್ಲೇ ಮೋನಾಲಿಸಾ ಅಪ್ಪ ಶಿವಂ ಮಾತಾಡ್ತಿದ್ದಾರೆ.
ಹುಡುಗಿಯನ್ನು ಜೋಪಾನ ಮಾಡ್ತಿದ್ದೀನಿ. ಅವಳು ನಾಲ್ಕು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳು. ಮೂರು ದಿನಗಳಿಂದ ಮಾಧ್ಯಮದವರು ಹಿಂದೆ ಬಿದ್ದಿದ್ದಾರೆ. ನಿಮಗೆ ಒಳ್ಳೆಯದಾಗಲಿ. ನೀವು ಹೊರಡಿ. ನಾಳೆ ಸಿಗೋಣ.
- ಶಿವಂ, ಮೊನಾಲಿಸಾ ತಂದೆ
ದಿನಕ್ಕೆ ರುದ್ರಾಕ್ಷಿ ಮಾರಿ ₹500, ₹1000 ದುಡೀತಿದ್ದ ಮಗಳು ಇದೀಗ ಬೀದಿಗೆ ಬರೋದಕ್ಕೂ ಸಾಧ್ಯವಾಗ್ತಿಲ್ಲ.. ಒಮ್ಮೆ ಕಾಲಿಟ್ಟರೆ, ಅಭಿಮಾನದ ಹೆಸರಿನಲ್ಲಿ ಆಕೆಯ ಬೆನ್ನು ಬೀಳ್ತಿರೋ ಮಂದಿ ಸೆಲ್ಫಿಗಾಗಿ ದುಂಬಾಲು ಬೀಳ್ತಿದ್ದಾರೆ. ರುದ್ರಾಕ್ಷಿ ಮಾಲೆ ತಗೊಳ್ರಿ ಅಂದ್ರೆ ತಗೊಳ್ಳೋದಿಲ್ಲ. ಬದಲಿಗೆ ಸೆಲ್ಫಿ ತಗೊಂಡು ಮೊನಾಲಿಸಾಳನ್ನ ಮಾತಾಡಿಸಿ ಅಲ್ಲಿಂದ ಕಾಲ್ಕಿಳ್ತಿದ್ದಾರೆ.. ಇದು ಮೊನಾಲಿಸಾ ತಾಯಿ ಜೀಜಾಗೂ ಕೂಡ ನೋವಿನ ಸಂಗತಿ ಆಗಿ ಕಾಣ್ತಿದೆ.
ಹೌದು, ನಾನು ಮೊನಾಲಿಸಾ ತಾಯಿ. ನೋಡಿ, ಜನ ಬರ್ತಾನೇ ಇದ್ದಾರೆ. ನಾವು ಬಡವರಿದ್ದೀವಿ. ರುದ್ರಾಕ್ಷಿ ಮಾಲೆ ಮಾರುತ್ತೇವೆ. ಅದಕ್ಕೂ ಇದೀಗ ಸಮಸ್ಯೆ ಆಗ್ತಿದೆ. ಮಗಳಿಗಂತೂ ತುಂಬಾನೇ ಸಮಸ್ಯೆ ಆಗ್ತಿದೆ. ಬೇಜಾರಿನಿಂದಾಗಿ ಅವಳು ಸರಿಯಾಗಿ ಊಟವನ್ನೇ ಮಾಡುತ್ತಿಲ್ಲ.
- ಜೀಜಾ, ಮೊನಾಲಿಸಾ ತಾಯಿ
ಮೊನಾಲಿಸಾ ಅಂದಗಾತಿ.. ಅದರಲ್ಲಿ ಎರಡು ಮಾತಿಲ್ಲ.. ಆಕೆ ಕಣ್ಣು ಲೋಡೆಡ್ ಗನ್ನು ಅನ್ನೋದು ಸಹ ಒಪ್ಪೋ ವಿಚಾರ.. ಆದರೆ, ಈ ಕಾಡು ಮಲ್ಲಿಗೆ ಹೊಟ್ಟೆಪಾಡಿಗಾಗಿ ರುದ್ರಾಕ್ಷಿ ಮಾರ್ತಿದ್ಳು.. ಆದ್ರೀಗ, ಆಕೆಯ ಸೌಂದರ್ಯವೇ ಆಕೆಯನ್ನು ಸಂಕಷ್ಟಕ್ಕೆ ದೂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗಿನಿಂದ ಆಕೆ ಬೀದಿಗೆ ಬಂದ್ರೆ ಸಾಕು ಫೋನ್ ಕ್ಯಾಮರಾಗಳನ್ನು ಆಕೆಯನ್ನು ಮುಕ್ಕಿ ತಿನ್ನೋದಕ್ಕೆ ಹಸಿದು ನಿಂತಂತೆ ಕಾಣ್ತಿವೆ.. ಅದ್ರಲ್ಲೂ, ಇದೊಂದು ದೃಶ್ಯ ಆಕೆಯನ್ನು ಜನಪ್ರಿಯತೆ ಎಷ್ಟರ ಮಟ್ಟಿಗೆ ಸಮಸ್ಯೆಗೆ ದೂಡಿದೆ ಅನ್ನೋ ಸಾಕ್ಷಿ ನುಡಿಯುತ್ತಿದೆ.
ಅಪ್ಪನ ಬೆಂಗಾವಲಿನಲ್ಲೇ ಓಡಾಡಬೇಕಾಯ್ತು ಮೊನಾಲಿಸಾ!
ಸಿಗೋದು ಒಂದೇ ಮಹಾಕುಂಭಮೇಳ ಅಲ್ಲೇ ಹೀಗಾದ್ರೆ ಹೇಗೆ?
ಕೊಲ್ಲೇ ನನ್ನನ್ನೇ.. ಕಡುಗಪ್ಪು ಕಣ್ಣಲ್ಲೇ ಕೊಲ್ಲು.. ಅನ್ನೋ ರೇಂಜ್ನಲ್ಲೇ ಅಂತ ಫ್ಯಾನ್ಸ್ ಮೋನಾಲಿಸಾಳನ್ನ ಹಿಂಬಾಲಿಸ್ತಿದ್ದಾರೆ.. ಇದೇ ಕಾರಣಕ್ಕೇ ನೋಡಿ, ಮೋನಾಲಿಸಾ ನೋಡುವಷ್ಟು ನೋಡಿ, ಕೊನೆಗೆ ಎದುರಿಗೆ ಫೋನ್ ಅಥವಾ ಕ್ಯಾಮರಾ ಹಿಡಿದು ಬಂದ್ರೆ ಅಂಥವರ ವಿರುದ್ಧ ಅಕ್ಷರಶಃ ರೊಚ್ಚಿಗೇಳ್ತಿದ್ದಾಳೆ.
">January 20, 2025
ಆರಂಭದಲ್ಲಿ ಖುಷಿಯಿಂದ್ಲೇ ಇಂಟರ್ವ್ಯೂಗಳನ್ನೂ ಕೊಟ್ಟಿದ್ಳು ಮೋನಾಲಿಸಾ.. ದೊಡ್ಡ ದೊಡ್ಡ ಸುದ್ದಿ ಸಂಸ್ಥೆಗಳಿಂದ ಹಿಡಿದು ಸಣ್ಣ ಪುಟ್ಟ ಯುಟ್ಯೂಬ್ ಚಾನಲ್ ತನಕ ಎಲ್ಲರಿಗೂ ನುಗುತ್ತಲೇ ಸಂದರ್ಶನ ನೀಡಿದ್ಳು.. ಯಾವುದೇ ಕ್ಯಾಮರಾ ಕಂಡ್ರೂ ನಗುತ್ತಲೇ ಪೋಸ್ ಕೊಟ್ಟಿದ್ಳು.. ಯಾವಾಗ ಯರ್ರಾಬಿರ್ರಿ ಟ್ರೋಲ್ ಆದ್ಳೋ.. ಯಾವಾಗ ಸಖತ್ ವೈರಲ್ ಆದ್ಳೋ.. ಆ ಕೂಡಲೇ ಸಮಸ್ಯೆ ಹೆಚ್ಚಾಯ್ತು.. ತೀರಾ ವಿಷಾಧನೀಯ ಸಂಗತಿ ಅಂದ್ರೆ ಸಂಜೆ ಬಳಿಕ ವಿಶ್ರಾಂತಿ ಪಡೆಯೋದಕ್ಕೆ ಅಂತ ಹಾಕಿಕೊಂಡಿದ್ದ ಟೆಂಟ್ ಬಳಿಗೂ ಕ್ಯಾಮರಾಗಳು ಸಾಲುಗಟ್ಟಿ ಹೋದವು.. ಇದೇ ಕಾರಣಕ್ಕೇ ಮೊದಲಿಗೆ ಬೇಸರಿಸಿಕೊಂಡು ನಗುತ್ತಲೇ ಹೇಳಿ ಕಳುಹಿಸಿದ್ದ ಮೋನಾಲಿಸಾಗೆ ಅದೇ ಕ್ಯಾಮರಾಗಳೇ ಬಲು ಕಿರಿಕಿರಿ ತರಿಸಿದ್ವು.. ಊಟ ಮಾಡದೇ ಎರಡು ದಿನ ಒದ್ದಾಡಿ ಹೋದ್ಳು.. ಆದ್ರೂ, ಕ್ಯಾಮರಾಗಳಿಗೆ ಅವಳ ಅದೇ ಜೇನುಗಣ್ಣಿನ ನಗು ಬೇಕಾಗಿತ್ತು.. ಇದೆಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದ ಅಪ್ಪ ಶಿವಂ ಕೊನೆಗೂ ಆಕೆಯನ್ನು ಮಹಾಕುಂಭಮೇಳದಿಂದ ಊರಿಗೆ ವಾಪಸ್ ಕಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ