ಪ್ರಯಾಗರಾಜ್​ನ ಬಟ್ಟಲು ಕಂಗಳ ಸುಂದರಿಗೆ ಖುಲಾಯಿಸಿದ ಅದೃಷ್ಟ; ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!

author-image
Gopal Kulkarni
Updated On
ಪ್ರಯಾಗರಾಜ್​ನ ಬಟ್ಟಲು ಕಂಗಳ ಸುಂದರಿಗೆ ಖುಲಾಯಿಸಿದ ಅದೃಷ್ಟ; ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!
Advertisment
  • ಮಹಾಕುಂಭಮೇಳದ ಚಿಗರಿ ಕಂಗಳ ಚೆಲುವೆಗೆ ಖುಲಾಯಿಸಿದ ಅದೃಷ್ಟ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹುಡುಗಿಗೆ ಸಿನಿಮಾ ಆಫರ್​
  • ಯಾವ ಸಿನಿಮಾದಲ್ಲಿ ನಟಸಲಿದ್ದಾರೆ ಗೊತ್ತಾ ಮಧ್ಯಪ್ರದೇಶದ ಈ ಬೆಡಗಿ?

ಗಂಗೆಯ ತಟದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಚಿಗರಿಗಂಗಳ ಚೆಲುವೆ ರಾತ್ರೋ ರಾತ್ರಿ ಇಡಿ ಭಾರತದಲ್ಲಿಯೇ ಫೇಮಸ್ ಆದ್ರೂ. ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿನಂತೆ ಸಂಚರಿಸಲು ಶುರುವಾದವು. ಕೊಲ್ಮಿಂಚಿನ ಬಾಣದಂತ ಕಣ್ಣುಗಳಿಗೆ ಫಿದಾ ಆಗದವರೇ ಇಲ್ಲ. ಅಷ್ಟೊಂದು ಫೇಮಸ್ ಆದ ಮೋನಾಲಿಸಾ ಕೊನೆಗೆ ಕ್ಯಾಮರಾಗಳ ಕಾಟಕ್ಕೆ ಬೇಸತ್ತು ವಾಪಸ್ ಇಂದೋರ್​ಗೆ ಹೋಗಿಬಿಟ್ಟರು. ಇಂದೋರ್​ಗೆ ಹೋದರು ಮೋನಾಲಿಸಾರ ಜನಪ್ರಿಯತೆ ಕಡೆಮೆಯಾಗಿಲ್ಲ. ಅದೃಷ್ಟವೀಗ ಅವರನ್ನು ಹುಡುಕಿಕೊಂಡು ಅವರ ಮನೆಯ ಬಾಗಿಲಿಗೆನೇ ಬಂದಿದೆ. ಮೋನಾಲಿಸಾ ಇನ್ನೇನು ಕೆಲವೇ ದಿನಗಳಲ್ಲಿ ಬಾಲಿವುಡ್​ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದ್ದಾರೆ.

ಇದನ್ನೂ ಓದಿ:10 ದಿನಕ್ಕೆ ₹10 ಕೋಟಿ ಗಳಿಸಿದ್ರಾ ಮಹಾಕುಂಭಮೇಳದ ಮೊನಾಲಿಸಾ? ಏನಿದರ ಅಸಲಿಯತ್ತು?

16 ವರ್ಷದ ಹುಡುಗಿ ಮಧ್ಯಪ್ರದೇಶದ ಖಾರ್ಗೊನ್​ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಮತ್ತೆ ಸುದ್ದಿಗೆ ಬಂದಿರುವ ಮೋನಾಲಿಸಾ ಹಿಂದಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ. ದಿ ಡೈರಿ ಆಫ್​ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಿನಿಮಾರದ ರೈಟರ್ ಹಾಗೂ ಡೈರಕ್ಟರ್ ಸನೋಜ್ ಮಿಶ್ರಾ ಮೋನಾಲಿಸಾ ಮನೆಗೆ ಭೇಟಿ ಕೊಟ್ಟು ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರೆ. ಅದು ಮಾತ್ರವಲ್ಲ ಈ ವಿಷಯವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿಯೂ ಕೂಡ ಹಂಚಿಕೊಂಡಿದ್ದಾರೆ.

ನಾನು ಡೈರಿ ಆಫ್​ ಮಣಿಪುರ ಸಿನಿಮಾದಲ್ಲಿ ಮೋನಾಲಿಸಾಗೆ ಪಾತ್ರ ನೀಡುತ್ತಿದ್ದೇನೆ. ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಅವರನ್ನು ಹುಡುಕಿಕೊಂಡು ನಾನು ಪ್ರಯಾಗರಾಜ್​​ಗೂ ಕೂಡ ಹೋಗಿದ್ದೆ. ಈಗ ಅವರ ಗ್ರಾಮಕ್ಕೆ ಬಂದಿದ್ದೇನೆ. ಇಡೀ ಕುಟುಂಬವೇ ತುಂಬಾ ಮುದ್ಧ ಮನಸ್ಸಿನ ಕುಟುಂಬ. ಈ ಹುಡುಗಿಯನ್ನು ನಾವು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ.. ತಿಂಗಳ ಆದಾಯ ಬರೋಬ್ಬರಿ ₹10 ಲಕ್ಷ!

ಈ ಹಿಂದೆ ಈ ಮೋನಾಲಿಸಾ ಎಂಬ ಈ ಬಟ್ಟಲು ಕಂಗಳ 16 ವರ್ಷದ ಹುಡುಗಿ ಗೋದಾವರಿ ನದಿಯ ಕಿಲಾ ಘಾಟ್​ನಲ್ಲಿ ಹೂವು ಮತ್ತು ಹಾರವನ್ನು ಮಾರುತ್ತಿದ್ದರು. ಅದೇ ರೀತಿ ಮಹಾಕುಂಭಮೇಳಕ್ಕೆ ರುದ್ರಾಕ್ಷಿಯ ಹಾರ ಹಾಗೂ ಹೂವಿನ ಹಾರ ಮಾರಲು ಬಂದ ಹುಡುಗಿ ಶತಮಾನದ ಹಿಂದಿನ ಸುಂದರಿ ಮೋನಾಲಿಸಾ ಮರಳಿ ಬಂದಂತೆ ಫೇಮಸ್ ಆಗಿದ್ದು ಈಗ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದಾರೆ. ಅದೃಷ್ಟ ಅಂದ್ರೆ ಇದೇ ಅಲ್ವಾ. ಹೂ ಮಾರುವ ಹುಡುಗಿ ಈಗ ಹೀರೋಯಿನ್ ಆಗುವ ಮಟ್ಟಕ್ಕೆ ಹೋಗಿದ್ದು ನಿಜಕ್ಕೂ ಖುಷಿಯ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment