Advertisment

ಮಗು ಅಲ್ಲಾಡುತ್ತಿದೆ.. ಆಸ್ಪತ್ರೆಗೆ ಓಡೋಡಿ ಬಂದ ಪೋಷಕರು; ಮಂಡ್ಯದಲ್ಲಿ ಮನಮಿಡಿಯುವ ದೃಶ್ಯಗಳು!

author-image
Veena Gangani
Updated On
ಮಗು ಅಲ್ಲಾಡುತ್ತಿದೆ.. ಆಸ್ಪತ್ರೆಗೆ ಓಡೋಡಿ ಬಂದ ಪೋಷಕರು; ಮಂಡ್ಯದಲ್ಲಿ ಮನಮಿಡಿಯುವ ದೃಶ್ಯಗಳು!
Advertisment
  • ಪ್ರತಿಭಟನೆ ಬಳಿಕ ಶವಗಾರಕ್ಕೆ ಸಾಗಿಸುವಾಗ ಅಲ್ಲಾಡಿದ ಮಗು ಕೈ!
  • ಪ್ರತಿಭಟನೆ ಬಳಿಕ ಶವಾಗಾರಕ್ಕೆ ರವಾನಿಸಲಾಗ್ತಿದ್ದ ಮಗುವಿನ ಮೃತದೇಹ
  • ಮಗು ಬದುಕಿದೆ ಎಂದು ತಪಾಸಣೆಗೆ ಎತ್ತುಕೊಂಡು ಓಡಿದ ಪೋಷಕರು

ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗು ಬಲಿಯಾಗಿದೆ. ಹೃತೀಕ್ಷ ಮೃತ ಮಗು. ವಾಣಿ-ಅಶೋಕ್ ಎಂಬ ದಂಪತಿಗೆ ಸೇರಿದ ಮೂರೂವರೆ ವರ್ಷದ ಹೃತೀಕ್ಷ ಮೃತಪಟ್ಟಿದ್ದಾಳೆ. ದಂಪತಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊರವನಹಳ್ಳಿಯ ನಿವಾಸಿ.

Advertisment

ಇದನ್ನೂ ಓದಿ: ಮಗುಗೆ ಕಚ್ಚಿದ್ದ ನಾಯಿ.. ಆಸ್ಪತ್ರೆಗೆ ಹೋಗುವಾಗ ಬೈಕ್ ಅಡ್ಡಗಟ್ಟಿದ್ದಕ್ಕೆ ದುರಂತ

publive-image

ವಾಣಿ-ಅಶೋಕ್ ಪುತ್ರಿ ಹೃತೀಕ್ಷಗೆ ನಾಯಿ ಕಚ್ಚಿತ್ತು. ಹೀಗಾಗಿ ಆ ಕೂಡಲೇ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಟ್ರಾಫಿಕ್​ ಪೊಲೀಸರು ಹೆಲ್ಮೆಟ್ ತಪಾಸಣೆಗೆಂದು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್​ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಹೃತೀಕ್ಷಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ.

publive-image

ಇನ್ನೂ, ಮುದ್ದಾದ ಮಗುವನ್ನು ಕಳೆದುಕೊಂಡು ಪೋಷಕರು ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಶವವಿಟ್ಟು ಅಳುತ್ತಿದ್ದರು. ಅಲ್ಲದೇ ಪೊಲೀಸರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಇದಾದ ಬಳಿಕ ಪ್ರತಿಭಟನೆಯನ್ನು ಕೈ ಬಿಟ್ಟ ಪೋಷಕರು ಮರಣೋತ್ತರ ಪರೀಕ್ಷೆಗೆಂದು ಮಗುವಿನ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಮಗು ಕೈ ಅಲ್ಲಾಡಿಸಿದೆಯಂತೆ. ಆ ಕೂಡಲೇ ತಡ ಮಾಡದೇ ಓಡಿ ಓಡಿ ಹೋಗಿ ಮತ್ತೆ ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಮತ್ತೆ ಚಿಕಿತ್ಸೆ ನಡೆಸಿದ ಬಳಿಕ ಮಗು ಮೃತಪಟ್ಟಿದ್ದು ದೃಢವಾಗಿದೆ. ಹೀಗಾಗಿ ಮತ್ತೆ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment