ಸೋಮವಾರದಿಂದ ರವಿವಾರದವರೆಗೂ ಈ ಡಯಟ್​ ಪಾಲಿಸಿ; ತಿಂಗಳಲ್ಲಿ 7 ಕೆಜಿ ತೂಕ ಕಳೆದುಕೊಳ್ಳಿ

author-image
Gopal Kulkarni
Updated On
ಸೋಮವಾರದಿಂದ ರವಿವಾರದವರೆಗೂ ಈ ಡಯಟ್​ ಪಾಲಿಸಿ; ತಿಂಗಳಲ್ಲಿ 7 ಕೆಜಿ ತೂಕ ಕಳೆದುಕೊಳ್ಳಿ
Advertisment
  • ದೇಹದ ತೂಕ ಕಳೆದುಕೊಳ್ಳಲು ಪರಿಹಾರ ಸಿಗದೇ ಪರದಾಡುತ್ತಿದ್ದೀರಾ?
  • ವಾರದ ಏಳು ದಿನ, ಏಳು ರೀತಿಯ ಆಹಾರ ಕ್ರಮ ನಿಮ್ಮದಾಗಿಸಿಕೊಳ್ಳಿ
  • ಒಂದೇ ತಿಂಗಳಲ್ಲಿ ನಿಮ್ಮ ದೇಹದ ತೂಕವನ್ನು 7 ಕೆಜಿ ಇಳಿಸಿಕೊಳ್ಳಿ

ನೀವು ತೂಕ ಇಳಿಸಲು ಅಂತ ನಿರ್ಧಾರ ಮಾಡಿದ್ದೀರಾ? ಆದರೂ ಕೂಡ ಅದನ್ನು ಕಾರ್ಯರೂಪಕ್ಕೆ ತರಲು, ಹೇಗೆ ಮಾಡಬೇಕು ಅಂತ ಗೊತ್ತಾಗದೇ ಒದ್ದಾಡುತ್ತಿದ್ದೀರಾ? ಹಾಗಿದ್ರೆ ನಿಮಗೆ ಒಂದು ಸರಿಯಾದ ಆಹಾರ ಕ್ರಮದ ಅಗತ್ಯ ಇದೆ ಅಂತಲೇ ಅರ್ಥ. ಇಲ್ಲಿ ನಾವು ಹೇಳುವ ಆಹಾರ ಪದ್ಧತಿಯನ್ನು ಸೋಮವಾರದಿಂದ ರವಿವಾರದವರೆಗೆ ತಪ್ಪದೇ ಪಾಲಿಸಿದಲ್ಲಿ ನೀವು ನಿಮ್ಮ ದೇಹದ ತೂಕವನ್ನು ಒಂದು ತಿಂಗಳಲ್ಲಿಯೇ ಸುಮಾರು 7 ಕೆಜಿಯಷ್ಟು ಇಳಿಸಬಹುದು. ಈ ಒಂದು ಡಯಟ್​ನನ್ನು ನೀವು ಪಾಲನೆ ಮಾಡಿದ್ದೇ ಆದಲ್ಲಿ ಇದು ನಿಮ್ಮ ಬದುಕಿನಲ್ಲ ಗೇಮ್​ ಚೆಂಜರ್ ಆಗಿ ಪರಿಣಮಿಸಲಿದೆ.
ರುಚಿಕರವಾದ ಆಹಾರವನ್ನು ಸೇವಿಸುತ್ತಲೇ ನೀವು ನಿಮ್ಮ ಡಯಟ್​ನನ್ನು ಮಾಡಬಹುದು. ಆದ್ರೆ ಒಂದು ತಿಂಗಳು ಮಾತ್ರ ಕಟ್ಟುನಿಟ್ಟಾಗಿ ಅದನ್ನು ಪಾಲಿಸಬೇಕು. ಇದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಒಂದು ಶಕ್ತಿ ಬರುತ್ತದೆ. ಇದರಿಂದ ನಿಮ್ಮ ತೂಕದಲ್ಲಿ ಇಳಿಕೆ ಕಾಣಬಹುದು.

publive-image

ಸೋಮವಾರ ಹೇಗಿರಬೇಕು ಡಯಟ್​

ಮುಂಜಾನೆಯ ಉಪಹಾರ
ಒಂದು ದೊಡ್ಡ ಬಟ್ಟಲಿನಲ್ಲಿ ಅವಲಕ್ಕಿ ಇಲ್ಲವೇ ಎರಡು ಇಡ್ಲಿಯನ್ನು ಕೆಲವು ತರಕಾರಿಯೊಂದಿಗೆ ತಿನ್ನಬೇಕು. ಇವು ಕಡಿಮೆ ಕ್ಯಾಲರೀಸ್​ಗಳನ್ನು ಹೊಂದಿದ ಆಹಾರವಾಗಿದ್ದು. ಫೈಬರ್ ಅಂಶ ಜಾಸ್ತಿ ಇರುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

ಮಧ್ಯಾಹ್ನದ ಊಟ
ಒಂದು ಚಪಾತಿ ಅಥವಾ ರೊಟ್ಟಿ, ಒಂದು ಬಟ್ಟಲು ದಾಲ್, ಒಂದು ಬಟ್ಟಲು ಗ್ರೀನ್ ಸಲಾಡ್ ಹಾಗೂ ಒಂದು ಬಟ್ಟಲು ಮೊಸರು. ಇಷ್ಟು ಆಹಾರ ಮಧ್ಯಾಹ್ನ ಸೇವಿಸಿದಾಗ ದಾಲ್​ನಲ್ಲಿ ಪೌಷ್ಠಿಕಾಂಶ, ಸಲಾಡ್ ಮೂಲಕ ಫೈಬರ್ ಅಂಶ ನಿಮ್ಮ ದೇಹ ಸೇರುತ್ತದೆ. ಮೊಸರು ನಿಮ್ಮ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.

ರಾತ್ರಿ ಊಟ
ಒಂದು ಬಟ್ಟಲು ತರಕಾರಿ ಸೂಪ್​, ಸಣ್ಣ ಪ್ರಮಾಣದಲ್ಲಿ ಕಿಚಡಿ ಹಾಗೂ ಜೊತೆಗೆ ಒಂದಿಷ್ಟು ಕ್ಯಾರೆಟ್ ಇಲ್ಲವೇ ಸವತೆಕಾಯಿಯ ಸ್ಟಿಕ್ಸ್. ರಾತ್ರಿ ಈ ರೀತಿಯಾಗಿ ಮಿತವಾದ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಸರಳವಾಗಿ ಆಗುತ್ತದೆ. ದೇಹಕ್ಕೆ ಬೇಕಾದ ಜೀವಸತ್ವಗಳು ಹಾಗೂ ಪೋಷಕಾಂಶಗಳು ಕೂಡ ಹೇರಳವಾಗಿ ದಕ್ಕತ್ತವೆ.

ಇದನ್ನೂ ಓದಿ:ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

publive-image

ಮಂಗಳವಾರದ ಡಯಟ್ ಹೇಗಿರಬೇಕು
ಮುಂಜಾನೆ ಉಪಹಾರ: ಒಂದು ಬಟ್ಟಲು ಉಪ್ಪಿಟ್ಟು ಜೊತೆಗೆ ಒಂದು ಮುಷ್ಟಿ ಡ್ರೈನಟ್ಸ್ ಇಲ್ಲವೇ ಒಂದು ಬೇಯಿಸಿದ ಮೊಟ್ಟೆ. ಉಪ್ಪಿಟ್ಟಿನಿಂದ ಸಂಕೀರ್ಣವಾದ ಕಾರ್ಬೊಹೈಡ್ರೆಟ್​ ಅಂಶ ದೇಹಕ್ಕೆ ಸೇರುತ್ತದೆ. ಹಾಗೂ ಮೊಟ್ಟೆ ಅಥವಾ ಡ್ರೈಫೂಡ್ಸ್​ನಿಂದ ದೇಹಕ್ಕೆ ಪ್ರೊಟೀನ್ ಅಂಶ ಸೇರುತ್ತದೆ. ಇದು ದಿನದ ಕಿಕ್​ಸ್ಟಾರ್ಟ್​​ಗೆ ಅದ್ಭುತ ಚೈತನ್ಯ ನೀಡುತ್ತದೆ.

ಮಧ್ಯಾಹ್ನ ಊಟ: ಚಪಾತಿ ಜೊತೆ ಒಂದು ಬಟ್ಟಲು ಗ್ರಿಲ್​ ಮಾಡಿದ ಪನ್ನೀರ್ ಹಾಗೂ ಒಂದು ಸಣ್ಣ ಬಟ್ಟಲಿನಲ್ಲಿ ದಾಲ್ ಹೈ ಪ್ರೊಟೀನ್ ಇರುವ ಪನ್ನೀರ್​ನಿಂದ ಹಸಿವನ್ನು ಬಹಳಷ್ಟು ಕಾಲ ತಡೆಯಬಹುದು. ಆಗಾಗ ಏನನ್ನಾದರೂ ತಿನ್ನುವ ಬಯಕೆ ಸೃಷ್ಟಿಯಾಗುವುದಿಲ್ಲ

ರಾತ್ರಿಯ ಊಟ: ಒಂದು ಚಪಾತಿಯೊಂದಿಗೆ ಎಲ್ಲ ತರಕಾರಿ ಮಿಕ್ಸ್ ಆಗಿರುವ ಒಂದು ಬೌಲ್ ಪಲ್ಯ

publive-image

ಬುಧವಾರದ ಡಯಟ್ ಹೇಗಿರಬೇಕು?
 ಬೆಳಗಿನ ಉಪಹಾರ:  ಪಾಲಕ್, ಬಾಳೆಹಣ್ಣು ಇಲ್ಲವೇ ಸೇಬುವನ್ನು ಸಕ್ಕರೆಯಿಲ್ಲದ ಬಾದಾಮ ಹಾಲಿನಲ್ಲಿ ಸ್ಮೂಥಿ ಮಾಡಿಕೊಂಡು ಕುಡಿಯಬೇಕು. ಪಾಲಕ್​ನಲ್ಲಿ ಹೆಚ್ಚು ಹೆಚ್ಚು ಪೋಷಕಾಂಶಗಳ ಜೊತೆಗೆ ಆ್ಯಂಟಿಆಕ್ಸಿಡೆಂಟ್ಸ್​ಗಳು ಕೂಡ ಇರುತ್ತವೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುವಲ್ಲಿ ಸಹಾಯಕವಾಗುತ್ತವೆ.

ಮಧ್ಯಾಹ್ನದ ಊಟ: ಒಂದು ಬಟ್ಟಲು ದಾಲ್​ನೊಂದಿಗೆ ಕೆಂಪಕ್ಕಿ ಅನ್ನ, ಮಿಕ್ಸಡ್ ವೆಜಿಟೇಬಲ್ ಪಲ್ಯ ಹಾಗೂ ಸಲಾಡ್​. ಕೆಂಪಕ್ಕಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ. ಇದು ದೇಹದಲ್ಲಿ ಗ್ಲುಕೋಸ್​ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮನ್ನು ಸದೃಢವಾಗಿಡುತ್ತದೆ.

ರಾತ್ರಿ ಊಟ: ಹಲವು ತರಕಾರಿಗಳೊಂದಿಗೆ ಪನ್ನೀರ್ ಸೇರಿಸಿ ಸರಿಯಾಗಿ ಫ್ರೈ ಮಾಡಿ ತಿನ್ನಬೇಕು. ಇದರಿಂದ ದೇಹಕ್ಕೆ ಕಡಿಮೆ ಕ್ಯಾಲರೀಸ್ ಇರುವ ಹಾಗೂ ಹೆಚ್ಚು ಫೈಬರ್ ಅಂಶವಿರುವ ಆಹಾರ ದೇಹಕ್ಕೆ ಸೇರುತ್ತದೆ. ಜೊತೆಗೆ ಪೌಷ್ಠಿಕಾಂಶವು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ದಕ್ಕತ್ತದೆ.

publive-image

ಗುರುವಾರ ಡಯಟ್ ಹೇಗಿರಬೇಕು?
ಬೆಳಗಿನ ಉಪಹಾರ: ಒಂದು ಚೀಯಾ ಬೀಜ ಅಥವಾ ಸಬ್ಜಾ ಬೀಜ ಹಾಗೂ ಒಂದಿಷ್ಟು ಬಾದಾಮಿಗಳೊಂದಿಗೆ ಬೆರೆಸಿದ ಓಟ್ಸ್

ಮಧ್ಯಾಹ್ನದ ಊಟ: ಒಂದು ಬೌಲ್ ಗೋಧಿ ನುಚ್ಚಿನ ಕಿಚಡಿ ಜೊತೆಗೆ ಒಂದಿಷ್ಟು ಸಲಾಡ್

ರಾತ್ರಿಯ ಊಟ: ಸಿರಿಧಾನ್ಯಗಳಿಂದ ಕೂಡಿದ ಒಂದು ಪಲಾವ್​
ಈ ಎಲ್ಲಾ ಆಹಾರಗಳು ಹೆಚ್ಚು ಹೆಚ್ಚು ಪ್ರೊಟೀನ್ ಹಾಗೂ ಜೀವಸತ್ವ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಸಬ್ಜಾ ಬೀಜಗಳು ದೇಹದಲ್ಲಿ ಕೇಲವ ಆರೋಗ್ಯಕರ ಬೊಜ್ಜನ್ನು ಮಾತ್ರ ಉಳಿಸುತ್ತೆ. ಈ ಆಹಾರ ಸೇವನೆಯಿಂದ ದೇಹದಲ್ಲಿ ಹೆಚ್ಚು ಫೈಬರ್ ಅಂಶ ಸೇರುವುದರಿಂದ ತೂಕ ಇಳಿಕೆಗೆ ಅನಕೂಲವಾಗುತ್ತದೆ.

publive-image

ಶುಕ್ರವಾರದ ಆಹಾರ ಪದ್ಧತಿ ಹೇಗಿರಬೇಕು ?
ಬೆಳಗಿನ ಉಪಹಾರ: ತಾಜಾ ಹಣ್ಣುಗಳೊಂದಿಗೆ ಒಂದಿಷ್ಟು ಡ್ರೈಫ್ರೂಟ್ಸ್ ಮತ್ತು ಒಂದು ಮುಷ್ಟಿ ಸಬ್ಜಾ ಬೀಜ ಸೇರಿಸಿ ತಿನ್ನಬೇಕು. ಹಣ್ಣುಗಳಲ್ಲಿ ಹೆಚ್ಚು ನ್ಯೂಟ್ರಿಷನ್ಸ್ ದೇಹಕ್ಕೆ ಸಿಗುತ್ತದೆ.

ಮಧ್ಯಾಹ್ನದ ಊಟ: ರಾಜ್​ಮಾ ಪಲ್ಯದೊಂದಿಗೆ ಒಂದು ಚಪಾತಿ ಒಂದಿಷ್ಟು ಸಲಾಡ್

ರಾತ್ರಿಯೂಟ: ಒಂದು ಬೌಲ್ ವೆಜಿಟೆಬಲ್ ಸೂಪ್ ( ಟೊಮಾಟೊ, ಕ್ಯಾರೆಟ್ ಹಾಗೂ ಬಿಟ್​ರೂಟ್​) ಒಂದಿಷ್ಟು ಮೊಳಕೆ ಕಾಳುಗಳು ಸೂಪ್​ ಆರೋಗ್ಯಕರ ಹಾಗೂ ಸರಳವಾಗಿ ಜೀರ್ಣವಾಗುವ ಆಹಾರ. ವೇಟ್ ಲಾಸ್​ಗೆ ಹೇಳಿ ಮಾಡಿಸಿದಂತಹ ಪದಾರ್ಥ

publive-image

ಶನಿವಾರದ ಡಯಟ್ ಹೇಗಿರಬೇಕು ?
ಬೆಳಗಿನ ಉಪಹಾರ: ಒಂದು ಬೊಟ್ಟಲು ಹುರಿದ ಮೊಟ್ಟೆ ಹಾಗೂ ಪಾಲಕ್
ಮಧ್ಯಾಹ್ನದ ಊಟ: ಮಿತವಾದ ಪ್ರಮಾಣದಲ್ಲಿ ಫಿಶ್​ ಕರಿಽ, ಒಂದು ಬಟ್ಟಲು ಕೆಂಪಕ್ಕಿ ಅನ್ನ ಹಾಗೂ ಸಲಾಡ್
ರಾತ್ರಿಯೂಟ: ಬಾರ್ಲಿಯೊಂದಿಗೆ ಸೇರಿದ ವೆಜಿಟೆಬಲ್ ಸ್ಟೀವ್ ಹಾಗೂ ಒಂದು ರೊಟ್ಟಿ

publive-image

ರವಿವಾರದ ಡಯಟ್ ಹೇಗಿರಬೇಕು?
ಬೆಳಗಿನ ಉಪಹಾರ: ಬೆರಿಽ, ಬಾಳೆಹಣ್ಣು ಹಾಗೂ ಒಂದು ಟೇಬಲ್ ಸ್ಪೂನ್​ನಷ್ಟು ಫ್ಲ್ಯಾಕ್ಸ್ ಸೀಡ್ಸ್ ಬಳಸಿ ಸ್ಮೂಥಿ ರೆಡಿ ಮಾಡಿ ಕುಡಿಯಬೇಕು
ಮಧ್ಯಾಹ್ನದ ಊಟ: ಮೂಂಗ್​ದಾಲ್​ ಕಿಚಡಿ ಹಾಗೂ ಒಂದಿಷ್ಟು ವೆಜಿಟೇಬಲ್ ಸಲಾಡ್​
ರಾತ್ರಿಯೂಟ: ಒಂದಿಷ್ಟು ಪನ್ನೀರ್ ಪೀಸ್​ಗಳ ಜೊತೆ ಗ್ರಿಲ್ಡ್​ ತರಕಾರಿಯನ್ನು ತಿನ್ನಬೇಕು
ಈ ಒಂದು ವಾರದ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ನೀವು ಪಾಲಿಸಿದರೆ ಒಂದೇ ಒಂದು ತಿಂಗಳಲ್ಲಿ 7 ಕೆಜಿ ತೂಕವನ್ನು ನೀವು ಇಳಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment