50 ಕೋಟಿ ರೂಪಾಯಿ ವಸೂಲಿ ಆರೋಪ; ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಬಂಧನ ಸಾಧ್ಯತೆ

author-image
Gopal Kulkarni
Updated On
ಹೆಚ್‌.ಡಿ ಕುಮಾರಸ್ವಾಮಿಗೆ ಬಿಗ್ ಶಾಕ್.. FIR ಬಳಿಕ ದಳಪತಿಗೆ ಬಂಧನದ ಭೀತಿ; ಮುಂದೇನು?
Advertisment
  • H.D. ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು
  • ಬಂಧನಕ್ಕೊಳಗಾಗುತ್ತಾರಾ ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್​ಡಿಕೆ ?
  • ಆರೋಪ ಮಾಡಿದ ವಿಜಯ್​ ಟಾಟಾಗೆ ಹೆಚ್​ಡಿಕೆ ಹಾಕಿದ ಸವಾಲೇನು?

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ಸಂಕಷ್ಟ ಶುರುವಾಗಿದೆ. ಜೆಡಿಎಸ್​ ಕಾರ್ಯಕರ್ತನೇ ಹಾಕಿದ ಕೇಸ್​ ದಳಪತಿಯ ತಲೆನೋವಿಗೆ ಕಾರಣವಾಗಿದೆ. aದರಲ್ಲೂ ಆ ಒಂದು ಸೆಕ್ಷನ್​ನಿಂದ ಭಾರೀ ದೊಡ್ಡ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ:50 ಕೋಟಿ ಸುಲಿಗೆ ಆರೋಪ ಕೇಸ್​​; ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್

ರಾಜ್ಯ ರಾಜ್ಯಕಾರಣದಲ್ಲಿ ಸದ್ಯ ಆರೋಪ-ಪ್ರತ್ಯಾರೋಪ, ಎಫ್​ಐಆರ್​, ಇವುಗಳದ್ದೇ ಕಾರುಬಾರು. ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೂ ಸಂಕಷ್ಟ ಎದುರಾಗಿದೆ. ಚನ್ನಪಟ್ಟಣ ಚುನಾವಣೆಗಾಗಿ 50 ಕೋಟಿ ಹಣಕ್ಕೆ ಬೆದರಿಕೆ ಹಾಕಿದ್ದರು ಅಂತ ಉದ್ಯಮಿ ವಿಜಯ್ ಟಾಟಾ ಮೊನ್ನೆ ಬಾಂಬ್ ಹಾಕಿದ್ದರು. ಜೆಡಿಎಸ್ ಮಾಜಿ ಎಂಎಲ್​ಸಿ ರಮೇಶ್​ಗೌಡ ಕೂಡ ದೇವಸ್ಥಾನಕ್ಕಾಗಿ 5 ಕೋಟಿಗೆ ಡಿಮ್ಯಾಂಡ್ ಮಾಡಿದ್ದರು ಅಂತ ಶಾಕ್ ಕೊಟ್ಟಿದ್ರು. ಸಾಲದ್ದಕ್ಕೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ಎಫ್‌ಐಆರ್​ ದಾಖಲಾಗಿದ್ದು ಇದರಲ್ಲಿ ಆ ಒಂದು ಕೇಸ್ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

publive-image

ಜಾಮೀನು ರಹಿತ ಸೆಕ್ಷನ್, ಹೆಚ್​ಡಿಕೆಗೆ ಬಂಧನ ಭೀತಿ
ಅಮೃತಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಎ1 ಆಗಿ ರಮೇಶ್ ಗೌಡ, ಎ2 ಹೆಚ್ ಡಿ ಕುಮಾರಸ್ವಾಮಿ ಆಗಿದ್ದಾರೆ. ಹಾಕಿರುವ ಸೆಕ್ಷನ್​ನಲ್ಲಿ ಕುಮಾರಸ್ವಾಮಿ ಬಂಧನದ ಸಾಧ್ಯತೆ ಇದೆ. 308 ಬಿಎನ್ಎಸ್ ಅಡಿ ಸುಲಿಗೆ ಕೇಸ್ ಹಾಕಲಾಗಿದ್ದು 7 ವರ್ಷದ ತನಕ ಶಿಕ್ಷೆ ನೀಡಬಹುದಾಗಿದೆ. ಇದು ಜಾಮೀನು ರಹಿತ ಸೆಕ್ಷನ್ ಆಗಿರೋದ್ರಿಂದ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಬಂಧನ ಭೀತಿ ಹಿನ್ನೆಲೆ ಜಾಮೀನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇನ್ನು 351 ಕ್ರಿಮಿನಲ್ ಬೆದರಿಕೆ ಆರೋಪ ಕೇಸ್ ಬೆಲಬಲ್ ಸೆಕ್ಷನ್ ಆಗಿದೆ.

ಇದನ್ನೂ ಓದಿ:ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ -ದಸರಾ ಕಾರ್ಯಕ್ರಮದಲ್ಲಿ ಸಿದ್ದು ಕೌಂಟರ್

publive-image

ಹೆಚ್​ಡಿಕೆಗೆ ದೂರುದಾರ ವಿಜಯ್ ಟಾಟಾ ಸವಾಲು
ಹೆಚ್​ಡಿಕೆ ವಿರುದ್ಧ ಎಫ್​​ಐಆರ್ ದಾಖಲಾದ ಬೆನ್ನಲ್ಲೇ ದೂರುದಾರ ಹಾಗೂ ಉದ್ಯಮಿ ವಿಜಯ್ ಟಾಟಾ ಸಂತಸ ವ್ಯಕ್ತಪಡಿಸಿದ್ದಾರೆ. ಎಫ್ಐಆರ್ ಆದ ಮೇಲೆ ಅವರು ದೂರು ಕೊಟ್ಟಿದ್ದಾರೆ. ಮೊದಲು ಯಾರೂ ಅಂಥ ಗೊತ್ತಿಲ್ಲ ಅಂದ್ರು. ಈಗ ಯಾರು ಅಂತ ಗೊತ್ತಿದೆ ಅನ್ನೋದು ಪ್ರೂವ್ ಆಯ್ತು ಎಂದಿದ್ದಾರೆ. ಅಲ್ಲದೆ ನಾನು ನೂರು ಕೋಟಿ ರೂಪಾಯಿ ಕೇಳಿದ್ದೀನಿ ಅನ್ನೋ ಆರೋಪ ಮಾಡಿದ್ದು ಅದಕ್ಕೆ ದಾಖಲೆ ಕೊಡಲಿ ಅಂತ ಸವಾಲಾಕಿದ್ದಾರೆ.ಒಟ್ಟಾರೆ ಹೆಚ್​ಡಿಕೆಗೆ ಒಂದಲ್ಲ ಎರಡೆರಡು ಸಂಕಷ್ಟಗಳು ತಲೆನೋವಿಗೆ ಕಾರಣವಾಗಿವೆ. ಅದರಲ್ಲೂ ಒಂದರಲ್ಲಿ ಜಾಮೀನು ರಹಿತ ಸೆಕ್ಷನ್ ಹಾಕಿರುವ ಹಿನ್ನೆಲೆ ಬಂಧನ ಭೀತಿ ಇದೆ. ಇದರಿಂದ ಜಾಮೀನು ತೆಗೆದುಕೊಳ್ಳುವ ಅವಶ್ಯಕತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment