newsfirstkannada.com

ಅರಣ್ಯ ಸಚಿವರ ತವರಲ್ಲೇ ಕೋತಿ ದಾಳಿ; 8ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ‌

Share :

Published March 21, 2024 at 5:38pm

    ಅರಣ್ಯ ಇಲಾಖೆ ಸಿಬ್ಬಂದಿ ಉಡಾಫೆ ಉತ್ತರಕ್ಕೆ ಸ್ಥಳೀಯರ ಆಕ್ರೋಶ

    ವಿದ್ಯಾನಗರದಲ್ಲಿ ಬೇಕಾಬಿಟ್ಟಿಯಾಗಿ ದಾಳಿ ಮಾಡುತ್ತಿರೋ ಕೋತಿ‌

    ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ 5 ಜನ ಗಾಯಾಳುಗಳು

ಬೀದರ್: ಅರಣ್ಯ ಸಚಿವರ ತವರಲ್ಲೇ ಕೋತಿ ದಾಳಿಯಿಂದ 8ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯ‌ಗೊಂಡಿರೋ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಮಕ್ಕಳು, ವೃದ್ದರು, ವಯಸ್ಕರು ಎಲ್ಲರ ಮೇಲೂ ಕೋತಿಗಳು ಬೇಕಾಬಿಟ್ಟಿಯಾಗಿ ದಾಳಿ ಮಾಡುತ್ತಿವೆ.
ಇನ್ನು, ಏಕಾಏಕಿ ಕೋತಿಯ ದಾಳಿಯಿಂದಾಗಿ ವಿದ್ಯಾನಗರ ನಿವಾಸಿಗಳು ಆತಂಕಗೊಂಡಿದ್ದಾರೆ.

ಇದನ್ನು ಓದಿ: BREAKING: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅನಾಹುತ; METRO ಬರ್ತಿದ್ದಾಗ ಹಳಿಗೆ ಜಿಗಿದು ವ್ಯಕ್ತಿ ಸಾವು

ಇಂದು ಬೆಳಿಗ್ಗೆಯಿಂದಲೇ 5 ಜನರ ಮೇಲೆ ಕೋತಿ ದಾಳಿ ಮಾಡಿದೆ. ಆದಿತ್ಯ ಮೋರೆ (16), ವಿಜಯಲಕ್ಷ್ಮಿ ಮಡಿವಾಳರ (37), ದೀಪಿಕಾ ಯನಗುಂದೆ (32), ಮಲ್ಲಿಕಾರ್ಜುನ (65), ಸುನೀತಾ (38) ಗಾಯಾಳುಗಳು. ಸದ್ಯ ಕೋತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರನ್ನು ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ಕೋತಿ ಓರ್ವನಿಗೆ ಕಚ್ಚಿದಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.

ಬಳಿಕ ಕೋತಿಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಕೋತಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕೂಡ ಯಾವುದೇ ರೀತಿಯಲ್ಲಿ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಿಲ್ಲ. ಜತೆಗೆ ಮೆಡಿಕಲ್ ಬಿಲ್ ಪಾವತಿ ಮಾಡ್ತೇನೆ ಅಂತಾ ಡಿಎಪ್ಓ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹಿಡಿತದಲ್ಲಿ ಏನೂ ಇಲ್ಲಾ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರಣ್ಯ ಸಚಿವರ ತವರಲ್ಲೇ ಕೋತಿ ದಾಳಿ; 8ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ‌

https://newsfirstlive.com/wp-content/uploads/2023/11/Monkey-1.jpg

Load More