/newsfirstlive-kannada/media/post_attachments/wp-content/uploads/2024/04/RINKU-SINGH.jpg)
ರಿಂಕು ಸಿಂಗ್ ಅಂದರೆ ಬೌಲರ್ಸ್​ಗೆ ಭಯ.. ಕ್ರಿಕೆಟ್ ಆಡುವಾಗ ಕ್ರೀಸ್​ನಲ್ಲಿದ್ದರೆ ಯಾವಾಗ ಎಷ್ಟೊತ್ತಿಗೆ ದೊಡ್ಡ ಹೊಡೆತ ಬಾರಿಸಿಬಿಡ್ತಾರೋ ಎಂಬ ಆತಂಕ ಕಾಡುತ್ತ ಇರುತ್ತದೆ. ಅಷ್ಟರಮಟ್ಟಿಗೆ ರಿಂಕು ಸಿಂಗ್ ಹವಾ ಕ್ರಿಕೆಟ್ ಲೋಕದಲ್ಲಿದೆ. ಹೀಗಿರುವ ರಿಂಕು ಸಿಂಗ್ ಕೂಡ ಭಯ ಪಡ್ತಾರಂತೆ. ಅದು ಯಾವ ವಿಚಾರಕ್ಕೆ ಅಂದ್ಕೊಂಡ್ರಾ?
/newsfirstlive-kannada/media/post_attachments/wp-content/uploads/2023/12/RINKU-SINGH-1-2.jpg)
Cyrus Broacha ಶೋನಲ್ಲಿ ಮಾತನಾಡಿರುವ ರಿಂಕು ಸಿಂಗ್ ತಮ್ಮ ಬದುಕಿನಲ್ಲಿ ಆಗಿರುವ ಕೆಲವು ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ. ಮೈದಾನದಲ್ಲಿ ಬೌಲರ್ಸ್​ಗೆ ನಡುಕ ಇಟ್ಟಿರುವ ಅವರಿಗೆ ದೆವ್ವಗಳು ಅಂದರೆ ಭಯವಂತೆ. ದೆವ್ವಗಳ ವಿಚಾರಗಳು ಬಂದಾಗಲೆಲ್ಲ ತುಂಬಾನೇ ಭಯ ಪಟ್ಟುಕೊಳ್ತೀನಿ. ಚಿಕ್ಕವನಿದ್ದಾಗ ದೆವ್ವದ ವಿಚಾರಗಳು ಯಾರಾದರೂ ಮಾತನಾಡಿದ್ದರೆ ನಾನು ಮಲಗುತ್ತಿರಲ್ಲ. ಕೆಲವರು ಬೇಕು ಅಂತಲೇ ದೆವ್ವದ ಬಗ್ಗೆ ಮಾತನಾಡುತ್ತಿದ್ದರು, ಆಗ ನಾನು ಅವರ ಮಾತನ್ನು ಕೇಳಿಸಿಕೊಳ್ಳದೇ ಬೇರೆ ರೂಮಿಗೆ ಹೋಗಿ ಮಲಗುತ್ತಿದ್ದೆ.
ಈಗಲೂ ಕೂಡ ನಾನು ಒಬ್ಬನೇ ಮಲಗುವಾಗ ಲೈಟ್ ಹಾಕಿಕೊಂಡೇ ಮಲಗುತ್ತೇನೆ. ಕತ್ತಲೆಯಲ್ಲಿ ಯಾವತ್ತೂ ಮಲಗುವುದಿಲ್ಲ ಎಂದಿದ್ದಾರೆ.
ನಾನು ಮಂಗನಿಂದ ದಾಳಿಗೆ ಒಳಗಾಗಿದ್ದೇನೆ. ಅದು ಒಂದು ಬಾರಿಯಲ್ಲ, ಬರೋಬ್ಬರಿ ಆರು ಬಾರಿ ಕಚ್ಚಿದೆ. ನನ್ನ ಎಡಗೈಯನ್ನು ಕಚ್ಚಿ ಗಾಯಮಾಡಿತ್ತು ಎಂದು ಹೇಳಿದ್ದಾರೆ. ಆ ಮಂಗ ನನ್ನನ್ನು ಲವ್ ಮಾಡುತ್ತಿತ್ತು. ಅದಕ್ಕೆ ದಾಳಿ ಮಾಡಿತ್ತು ಅಂತಾ ತಮಾಷೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us