newsfirstkannada.com

ತಡೆಯಲಾಗದ ಚಳಿ.. ಠಾಣೆಗೆ ಬಂದು ಹೀಟರ್​ ಮುಂದೆ ಕೂತ ಕೋತಿ..! ವಿಡಿಯೋ

Share :

Published January 19, 2024 at 7:42am

Update January 19, 2024 at 7:43am

    ಉತ್ತರ ಪ್ರದೇಶದ ಗಂಗಾ ಬಯಲು ಪ್ರದೇಶದಲ್ಲಿ ವಿಪರೀತ ಚಳಿ

    ಮನುಷ್ಯರ ಜೊತೆಗೆ ಪ್ರಾಣಿಗಳಿಗೂ ಚಳಿಗಾಲದ ದೊಡ್ಡ ಹೊಡೆತ

    ಪೇದೆ ಬಳಿ ಬಂದು ಚಳಿಗೆ ಮೈಬಿಸಿ ಮಾಡಿಕೊಂಡು ಹೋದ ಮಂಗ

ಚಳಿಯಿಂದ ತಪ್ಪಿಸಿಕೊಳ್ಳಲು ಕೋತಿಯೊಂದು ಪೊಲೀಸ್ ಠಾಣೆಗೆ ಬಂದ ಅಪರೂಪದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಚಳಿಯಿಂದಾಗಿ ಕಚೇರಿಯಲ್ಲಿ ಎಲೆಕ್ಟ್ರಿಕ್ ಹೀಟರ್‌ನಿಂದ ಹೆಡ್‌ಕಾನ್ಸ್‌ಟೇಬಲ್ ಅಶೋಕ್ ಬಿಸಿ ಮಾಡಿಕೊಳ್ಳುತ್ತಿದ್ದರು.

ಈ ವೇಳೆ ಕಚೇರಿಗೆ ಬಂದ ಕೋತಿ ಹೀಟರ್ ಮುಂದಿನ ಕುರ್ಚಿ ಮೇಲೆ ಕುಳಿತು ಬಿಸಿ ಮಾಡಿಕೊಂಡಿದೆ. ಆಗ ಅಲ್ಲೇ ಇದ್ದ ಅಶೋಕ್ ಹೆಡ್‌ಕಾನ್ಸ್‌ಟೇಬಲ್ ಚಳಿಯಿಂದ ನಡುಗುತ್ತಿದ್ದ ಕೋತಿಗೆ ಆರೈಕೆ ಮಾಡಿದ್ದಾರೆ. ಕಾನ್ಸುರ ಪೊಲೀಸ್ ಕಮಿಷನರೇಟ್‌ನ ಕ್ಯಾಂಪ್‌ನಲ್ಲಿರವ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಹೀಟರ್ ಮುಂದೆ ಕುಳಿತ ಕೋತಿಗೆ ಪೊಲೀಸ್‌ ಮುಖ್ಯಪೇದೆ ಆರೈಕೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಡ್‌ಕಾನ್ಸ್‌ಟೇಬಲ್ ತೋರಿಸಿದ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಯುಪಿಯ ಗಂಗಾ ಬಯಲು ಪ್ರದೇಶದಲ್ಲಿ ವಿಪರೀತ ಚಳಿ. ಮಲೆನಾಡಿನಲ್ಲಿ ಹಿಮಪಾತವಾಗುತ್ತಿದ್ದು, ಇಡೀ ಉತ್ತರ ಭಾರತ ಚಳಿಗಾಳಿಯ ಹಿಡಿತದಲ್ಲಿದೆ. ರಾತ್ರಿ ಮತ್ತು ಬೆಳಗ್ಗೆ ತಾಪಮಾನವು 5 ರಿಂದ 6 ಡಿಗ್ರಿಗಳವರೆಗೆ ಹೋಗುತ್ತದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನುಷ್ಯರ ಜೊತೆಗೆ ಪ್ರಾಣಿಗಳು ಕೂಡ ಚಳಿಗಾಲದ ಹೊಡೆತವನ್ನು ಎದುರಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಡೆಯಲಾಗದ ಚಳಿ.. ಠಾಣೆಗೆ ಬಂದು ಹೀಟರ್​ ಮುಂದೆ ಕೂತ ಕೋತಿ..! ವಿಡಿಯೋ

https://newsfirstlive.com/wp-content/uploads/2024/01/MONKEY.jpg

Load More