newsfirstkannada.com

ಫ್ರೂಟಿ ಜ್ಯೂಸ್​ಗಾಗಿ ಐಫೋನ್ ಡೀಲ್​ ಮಾಡಿದ ಮಂಗಣ್ಣ; ಅರೆ, ಇದು ಹೇಗಾಯ್ತು ಗೊತ್ತಾ?

Share :

Published January 18, 2024 at 5:40pm

Update January 18, 2024 at 5:41pm

    ದೇವರ ದರ್ಶನಕ್ಕೆ ಬಂದಿದ್ದ ಭಕ್ತನಿಗೆ ಕಿಟಲೇ ಕೊಟ್ಟ ಕೋತಿ

    ದೇವಾಲಯದ ಕಾಂಪೌಂಡ್​ ಮೇಲೆ ಕುಳಿತ ಮಂಗಗಳ ಗ್ಯಾಂಗ್

    ಫ್ರೂಟಿ ಜ್ಯೂಸ್ ಕೊಡುವರೆಗೂ ಭಕ್ತರನ್ನ ಕಾಡಿದ ಮಂಗಗಳು

ಲಕ್ನೋ: ತಮಗೆ ಇಷ್ಟ ಬಂದಂತೆ ಇರುವವು ಎಂದರೆ ಅವು ಪ್ರಾಣಿಗಳು. ಅದರಲ್ಲಿ ಕೋತಿಗಳು ಎಂದರೆ ಎಲ್ಲ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಕಿಟಲೇ ಮಾಡಿಕೊಂಡುತ್ತವೆ. ಯಾರು ಹೇಳಿದ್ದನ್ನ ಕೇಳದೇ ಮರದಿಂದ ಮರಕ್ಕೆ, ಮನೆಯಿಂದ ಮನೆಗೆ ನೆಗೆದಾಡುತ್ತವೆ. ದೇವಾಲಯಗಳಲ್ಲೂ ಈ ಮಂಗಗಳ ಹಾವಳಿ ಕಡಿಮೆಯೇನು ಇಲ್ಲ. ದೇವರ ದರ್ಶನ ಪಡೆಯಲೆಂದು ದೇವಸ್ಥಾನಕ್ಕೆ ಹೋಗಿದ್ದ ಭಕ್ತನೊಬ್ಬನ ಐಪೋನ್ ಅನ್ನು ಕೋತಿಗಳು ಕಸಿದು ಫುಲ್ ಕಿಟಲೇ ಕೊಟ್ಟಿವೆ.

ಉತ್ತರಪ್ರದೇಶದ ವೃಂದಾವನದ ರಂಗನಾಥ ದೇವಾಲಯಕ್ಕೆ ಭಕ್ತರೊಬ್ಬರು ಭೇಟಿ ನೀಡಿದ್ದರು. ಈ ವೇಳೆ ದೇವಾಲಯವನ್ನು ಸುತ್ತಾಡಿ ವೀಕ್ಷಣೆ ಮಾಡುವಾಗ ಕೋತಿಗಳು ಐಫೋನ್ ಕಸಿದುಕೊಂಡು ಹೋಗಿವೆ. ಬಳಿಕ ಗುಡಿಯ ಎತ್ತರದ ಕಾಂಪೌಂಡ್​ ಮೇಲೆ ಎರಡ್ಮೂರು ಕೋತಿಗಳು ಐಫೋನ್ ಹಿಡಿದು ಕುಳಿತುಕೊಂಡಿವೆ. ಆಗ ಜನರು ಐಫೋನ್​ಗಾಗಿ ಸಾಕಷ್ಟು ಸರ್ಕಸ್ ಮಾಡಿದರು ಕೋತಿ ಫೋನ್ ಅನ್ನು ಕೊಟ್ಟೇ ಇಲ್ಲ.

View this post on Instagram

A post shared by Vikas🧿 (@sevak_of_krsna)

ಕೊನೆಗೆ ಫ್ರೂಟಿ ಜ್ಯೂಸ್​ಗೆ ಡೀಲ್ ಮಾಡಿಕೊಂಡಿದೆ. ಕೆಳಗಿನಿಂದ ವ್ಯಕ್ತಿಯೊಬ್ಬರು ಮೊದಲು ಫ್ರೂಟಿ ಜ್ಯೂಸ್​ ಒಂದನ್ನು ಮೇಲಕ್ಕೆ ಎಸೆದರು. ಅದು ಕೋತಿ ಕೈಗೆ ಸಿಗಲಿಲ್ಲ. 2ನೇ ಬಾರಿ ಎಸೆಯುತ್ತಿದ್ದಂತೆ ಫ್ರೂಟಿ ಜ್ಯೂಸ್​ ಅನ್ನು ಕ್ಯಾಚ್ ಮಾಡಿದ ಕೋತಿ ತಕ್ಷಣ ಐಫೋನ್ ಬಿಸಾಕಿ ಹೋಗಿದೆ. ಐಫೋನ್ ಮೇಲಿಂದ ಬೀಳುತ್ತಿದ್ದಂತೆ ಕೆಳಗಿದ್ದವರು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿದಿದ್ದಾರೆ. ಸದ್ಯ ಈ ವಿಡಿಯೋವನ್ನು ಇನ್​ಸ್ಟಾದಲ್ಲಿ ವಿಕಾಸ್ ಎನ್ನುವರು ಶೇರ್ ಮಾಡಿಕೊಂಡು ವೃಂದಾವನ ಸಿಟಿಯ ಮಂಗ, ಫ್ರೂಟಿಗಾಗಿ ಐಫೋನ್ ಮಾರಾಟ ಮಾಡಿತು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೂಟಿ ಜ್ಯೂಸ್​ಗಾಗಿ ಐಫೋನ್ ಡೀಲ್​ ಮಾಡಿದ ಮಂಗಣ್ಣ; ಅರೆ, ಇದು ಹೇಗಾಯ್ತು ಗೊತ್ತಾ?

https://newsfirstlive.com/wp-content/uploads/2024/01/UP_MONKEYS_IPHONE.jpg

Load More