newsfirstkannada.com

ಅಯೋಧ್ಯೆಯಲ್ಲಿ ನೂರಾರು ಮಂಗಗಳ ವಾಸ; ಅಲ್ಲಿರುವ ಸೂರ್ಯಕುಂಡದ ವಿಶೇಷತೆ ಏನು?

Share :

Published January 20, 2024 at 6:14am

    ರಾಮಾಯಣಕ್ಕೆ ಸಾಕ್ಷಿಯಾಗಿರೋ 108 ಸೂರ್ಯಕುಂಡಗಳು

    ಆಂಜನೇಯ ಸೂರ್ಯನನ್ನು ನುಂಗಲು ಹೋದ ಕಥೆಯ ರಚನೆ

    ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯ ಸಮಾಗಮ!

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮೋತ್ಸವ ಸಂಭ್ರಮ, ಸಡಗರ ಮನೆ ಮಾಡಿದೆ. ಅಯೋಧ್ಯೆಯಲ್ಲಿರುವ ಒಂದೊಂದು ಜಾಗಗಳು ಒಂದೊಂದು ವಿಶೇಷತೆಯನ್ನು ಹೊಂದಿವೆ. ಸರಯೂ ನದಿ ತೀರದಿಂದ ನ್ಯೂಸ್ ಫಸ್ಟ್​​ ಮತ್ತಷ್ಟು ಎಕ್ಸ್​​ಕ್ಲೂಸಿವ್ ಸುದ್ದಿಗಳನ್ನು ಹೊತ್ತು ತಂದಿದೆ.

ಮರಳಿನಲ್ಲಿ ಅರಳಿದ ಸೀತಾರಾಮ, ಲಕ್ಷ್ಮಣ, ಸೂರ್ಯ!

ಸದ್ಯ ಅಯೋಧ್ಯೆಯಲ್ಲಿ ನಡೆಯುತ್ತಿರುವ ಒಂದೊಂದೂ ಸಂಗತಿಯೂ ವಿಶೇಷವೇ ಆಗಿದೆ. ರಾಮೋತ್ಸವದಲ್ಲಿ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡಲಾಗಿದ್ದು, ನಾಟಕ, ಸಂಗೀತದ ಜೊತೆ ಕಲೆಗಳಿಗೂ ಮನ್ನಣೆ ನೀಡಲಾಗಿದೆ. ಗುಪ್ತರ್ ಘಾಟ್ ಹಾಗೂ ಸೂರ್ಯ ಕುಂಡದಲ್ಲಿ ಮರಳಿನಲ್ಲಿ ಸೀತಾರಾಮ, ಲಕ್ಷ್ಮಣ, ಸೂರ್ಯನನ್ನು ಚಿತ್ರಿಸಲಾಗಿದೆ.

ಅಯೋಧ್ಯೆಯಲ್ಲಿರುವ ಸೂರ್ಯಕುಂಡದ ವಿಶೇಷತೆ ಏನು?

ಇನ್ನು, ರಾಮಜನ್ಮಭೂಮಿ ಅಯೋಧ್ಯೆಯ ಪ್ರತಿಯೊಂದು ಸ್ಥಳವೂ ರಾಮಾಯಣದ ವೈಭವತೆಯನ್ನ ಸಾರಿ ಹೇಳುತ್ತಿವೆ. ಅಯೋಧ್ಯೆಯಲ್ಲಿರೋ 108 ಕುಂಡಗಳು ಸಹ ರಾಮಾಯಣಕ್ಕೆ ಸಾಕ್ಷ್ಯಗಳು ಇವೆ. ಈ ಕುಂಡಗಳ ಪೈಕಿ ಸೂರ್ಯಕುಂಡ ಪ್ರಮುಖವಾಗಿದ್ದು ರಾಮ ಜನಿಸಿದ ವೇಳೆ ಸೂರ್ಯ ಇಳಿದಿದ್ದ ಜಾಗದಲ್ಲಿ ಈ ಕುಂಡ ನಿರ್ಮಿಸಲಾಗಿದೆ. ಇಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ವಾಸಿಯಾಗುತ್ತೆ ಎಂಬ ನಂಬಿಕೆ ಇದೆ. ಚರ್ಮರೋಗದಿಂದ ಗುಣಮುಖನಾದ ರಾಜನೋರ್ವ ಸೂರ್ಯ ದೇವಾಲಯ ನಿರ್ಮಾಣ ಮಾಡಿದ್ದಾನೆ ಎನ್ನಲಾಗಿದೆ.

ರಾಮಭಕ್ತ ಹನುಮನಿ​ಗೆ ಬೇಸಿನ್ ಲಾಡು ನೈವೇದ್ಯ!

ಅಯೋಧ್ಯೆ ರಾಮೋತ್ಸವದಲ್ಲಿ ಹನುಮನ ನೈವೇದ್ಯಕ್ಕೆ ನೂರಾರು ಕೆ.ಜಿ ಲಡ್ಡು ತಯಾರಾಗಿದೆ. ಭಗವಾನ್​ ಶ್ರೀ ಹನುಮಂತನಿಗೆ ಈ ಬೇಸಿನ್ ಲಡ್ಡು ಅತಿ ಪ್ರಿಯವಾಗಿದ್ದು ಬೇಸನ್​ ಲಡ್ಡು ನೈವೇದ್ಯ ಮಾಡಿ ಭಕ್ತರಿಗೆ ಹಂಚಲಾಗುತ್ತೆ. ಹೀಗಾಗಿ ಅಯೋಧ್ಯೆಯಲ್ಲಿ ಬೇಸಿನ್​ ಲಾಡಿಗೆ ಬಹಳ ಡಿಮ್ಯಾಂಡ್ ಇದ್ದು ಲಡ್ಡು ಪಡೆಯಲು ಭಕ್ತಾದಿಗಳು ಮುಗಿಬೀಳುತ್ತಿದ್ದಾರೆ. ಇನ್ನು ರಾಮಲಲ್ಲಾ ನೋಡಲು ಬರ್ತಿರುವ ಭಕ್ತರಿಗಾಗಿ ಯೋಧ್ಯೆಯ ಮೂಲೆ ಮೂಲೆಗಳಲ್ಲೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಊಟ, ತಿಂಡಿಯ ವ್ಯವಸ್ಥೆ ಜೊತೆಗೆ ಟೀ-ಕಾಫಿ ವ್ಯವಸ್ಥೆ ಮಾಡಲಾಗಿದೆ. ಗುಜರಾತ್​ನಿಂದ ಬಂದಿರೋ ಸುಮಾರು 200 ಭಕ್ತರು, ತಮ್ಮ ಖರ್ಚಿನಲ್ಲಿ ಭೋಜನದ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ.

ಅಯೋಧ್ಯೆಯಲ್ಲಿ ನೂರಾರು ಮಂಗಗಳ ವಾಸ!

ಇನ್ನು, ಅಯೋಧ್ಯೆಯಲ್ಲಿ ಎಲ್ಲಿ ನೋಡಿದ್ರೂ ಮಂಗಗಳು ಕಾಣ ಸಿಗುತ್ತವೆ. ರಾಮಜನ್ಮಭೂಮಿ ಜೊತೆಗೆ ಮಂಗಗಳು ಕೂಡ ಸಂಬಂಧ ಬೆಸೆದುಕೊಂಡಿವೆ. ಅಯೋಧ್ಯೆಯ ಎಲ್ಲೆಂದರಲ್ಲಿ ಕಾಣಸಿಗುವ ಮಂಗಗಳು ಮನುಷ್ಯರಿಗೆ ಮಾತ್ರ ತೊಂದರೆ ಕೊಡಲ್ಲ. ರಾಮಲಲ್ಲಾ ಪೂಜೆ ಮಾಡುವ ಮುಖ್ಯ ಅರ್ಚಕರ ಮನೆಯಲ್ಲಿ ಸಂಜೆ 5 ಗಂಟೆ ಆಯ್ತು ಅಂದ್ರೆ ಸಾಕು ಪ್ರತಿದಿನ 100-150 ಮಂಕಿಗಳು ಸೇರುತ್ತವೆ. ಕಳೆದ 40 ವರ್ಷಗಳಿಂದ ಮುಖ್ಯ ಅರ್ಚಕರು ಅವುಗಳಿಗೆ ಆಹಾರ ವಿತರಣೆ ಮಾಡ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ವೇಳೆ ಬಾಬ್ರಿ ಮಸೀದಿ ಹೋರಾಟಗಾರ ಆಸೀಮ್ ಪುತ್ರ ಇಕ್ಬಾಲ್ ಮನೆಗೆ ವಿಹೆಚ್​ಪಿ ಮುಖಂಡರು ಭೇಟಿ ನೀಡಿದ್ದಾರೆ. ಕರ್ನಾಟಕದ ರಾಮನಗರದಲ್ಲಿ ತಯಾರಿಸಲಾಗಿದ್ದ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ನೂರಾರು ಮಂಗಗಳ ವಾಸ; ಅಲ್ಲಿರುವ ಸೂರ್ಯಕುಂಡದ ವಿಶೇಷತೆ ಏನು?

https://newsfirstlive.com/wp-content/uploads/2024/01/monkey-sri-rama.jpg

Load More