newsfirstkannada.com

18 ವರ್ಷಗಳಲ್ಲೇ ತಡವಾಗಿ ಬಂದ ಮುಂಗಾರು; ಈ ಬಾರಿ ಕರ್ನಾಟಕದಲ್ಲಿ ಮಳೆ ಕೈ ಕೊಡುತ್ತಾ?

Share :

08-06-2023

    ಕೊನೆಗೂ ಕೇರಳಕ್ಕೆ ಇಂದು ಮುಂಗಾರು ಮಳೆಯ ಪ್ರವೇಶ

    ಈ ಬಾರಿ ಏಳು ದಿನ ವಿಳಂಬವಾಗಿ ಮಾನ್ಸೂನ್ ಆಗಮನ

    18 ವರ್ಷದಲ್ಲೇ ಇಷ್ಟು ತಡವಾಗಿ ಮುಂಗಾರು ಬಂದಿಲ್ಲ

ನವದೆಹಲಿ: ಕೊನೆಗೂ ಕೇರಳ ರಾಜ್ಯಕ್ಕೆ ಈ ವರ್ಷದ ಮುಂಗಾರು ಮಳೆಯ ಪ್ರವೇಶವಾಗಿದೆ. ಕೇರಳದ ಹವಾಮಾನ ಇಲಾಖೆ ಮಾನ್ಸೂನ್ ಮಳೆ ಎಂಟ್ರಿ ಕೊಟ್ಟಿರೋದನ್ನ ಅಧಿಕೃತವಾಗಿ ಖಚಿತಪಡಿಸಿದೆ. ಆದರೆ ಈ ಬಾರಿಯ ಮುಂಗಾರು ಮಾರುತ 7 ದಿನ ತಡವಾಗಿ ಆಗಮಿಸಿರೋದು ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರಂದೇ ಮಾನ್ಸೂನ್ ಮಳೆ ಕೇರಳ ರಾಜ್ಯವನ್ನ ಪ್ರವೇಶಿಸುತ್ತಿತ್ತು. ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿಗೆ ಏಳು ದಿನ ವಿಳಂಬವಾಗಿ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗಿದೆ. ಕಳೆದ 18 ವರ್ಷಗಳಲ್ಲಿ ಇದು ಬಾರಿ ವಿಳಂಬದ ಮಾನ್ಸೂನ್ ಪ್ರವೇಶ ಅನ್ನೋದು ಮತ್ತೊಂದು ಅಚ್ಚರಿಯ ವಿಷಯವಾಗಿದೆ.

ಇಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿರುವ ಹಿನ್ನೆಲೆ ಇನ್ನೂ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಎಂಟ್ರಿ ಕೊಡುವ ಸಾಧ್ಯತೆ ಇದೆ. ಮಾನ್ಸೂನ್ ಮಳೆಗಾಗಿಯೇ ಕರ್ನಾಟಕ ರಾಜ್ಯದ ರೈತರು ಕಾಯುತ್ತಿದ್ದಾರೆ. ಯಾಕಂದ್ರೆ ಮಾನ್ಸೂನ್ ಮಳೆಯ ಮೇಲೆ ಮುಂಗಾರು ಬಿತ್ತನೆ ಅವಲಂಬನೆಯಾಗಿದೆ. ಜೂನ್ 10ರಿಂದ 15ರವರೆಗೆ ಕರ್ನಾಟಕದಲ್ಲಿ ಭಾರೀ ಮುಂಗಾರು ಮಳೆಯಾಗುವ ಮುನ್ಸೂಚನೆ ಇದೆ.

2005 ರಿಂದ ಜೂನ್ 8 ಕ್ಕೂ ಮೊದಲೇ ಕೇರಳಕ್ಕೆ ಮಾನ್ಸೂನ್ ಪ್ರವೇಶ ಆಗುತ್ತಾ ಇತ್ತು. 2016, 2019ರಲ್ಲೂ ಜೂನ್ 8 ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗಿತ್ತು. ಕಳೆದ ನಾಲ್ಕೈದು ವರ್ಷ ಭಾರತದಲ್ಲಿ ಉತ್ತಮ ಮಾನ್ಸೂನ್ ಮಳೆಯಾಗಿದೆ. ಮಾನ್ಸೂನ್ ಪ್ರವೇಶದ ವಿಳಂಬಕ್ಕೂ ಮಳೆಯ ಪ್ರಮಾಣಕ್ಕೂ ಸಂಬಂಧ ಇಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಇನ್ನೊಂದು ವಾರದಲ್ಲಿ ಮುಂಗಾರಿನ ಮಳೆಯಾದ್ರೆ ರಾಜ್ಯದ ರೈತರು ನಿಟ್ಟುಸಿರು ಬಿಡೋದಂತೂ ಖಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

18 ವರ್ಷಗಳಲ್ಲೇ ತಡವಾಗಿ ಬಂದ ಮುಂಗಾರು; ಈ ಬಾರಿ ಕರ್ನಾಟಕದಲ್ಲಿ ಮಳೆ ಕೈ ಕೊಡುತ್ತಾ?

https://newsfirstlive.com/wp-content/uploads/2023/06/Mansoon.jpg

Load More