ಕರ್ನಾಟಕದಲ್ಲಿ ಮುಂಗಾರು ಬಿರುಸು.. ಭರ್ಜರಿ ಮಳೆಗೆ ಆಗುತ್ತಿರುವ ಅನಾಹುತ ಅಷ್ಟಿಷ್ಟಲ್ಲ..!

author-image
Ganesh
Updated On
ಕರ್ನಾಟಕದಲ್ಲಿ ಮುಂಗಾರು ಬಿರುಸು.. ಭರ್ಜರಿ ಮಳೆಗೆ ಆಗುತ್ತಿರುವ ಅನಾಹುತ ಅಷ್ಟಿಷ್ಟಲ್ಲ..!
Advertisment
  • ಉಕ್ಕಿ ಹರಿಯುತ್ತಿರೋ ಹಳ್ಳ.. ಗ್ರಾಮಕ್ಕೆ ಗ್ರಾಮವೇ ಪರದಾಟ
  • ಹಲವು ಮನೆಗಳಿಗೆ ನುಗ್ಗಿದ ಮಳೆ ನೀರು.. ಜನರ ಪರದಾಟ
  • ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್

ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಮುಂಗಾರಿನ ಜೊತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಆದ ವೈಪರೀತ್ಯದ ತೀವ್ರತೆಯಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಅಂತ ಬಂದ್ಮೇಲೆ ಅದರಿಂದಾಗೋ ಅನಾಹುತಗಳು ಒಂದೊಂದಲ್ಲ..

ಉತ್ತರ ಕರ್ನಾಟಕದ ಭಾಗದಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಉತ್ತರದ ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರಲ್ಲಿ ನೆರೆ ಆತಂಕ ಮನೆ ಮಾಡಿದೆ.

ಉಕ್ಕಿ ಹರಿಯುತ್ತಿರೋ ಹಳ್ಳ.. ಗ್ರಾಮಕ್ಕೆ ಗ್ರಾಮವೇ ಪರದಾಟ

ನಿನ್ನೆ ಸುರಿದ ಮಳೆಗೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮಣಶಿ ಗ್ರಾಮದಲ್ಲಿ ನೆರೆ ಭೀತಿ ಶುರುವಾಗಿದೆ. ಊರು ಮುಂದಿರೋ ಹಳ್ಳ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಇದರಿಂದ ಕೆಎಸ್​ಆರ್​ಟಿಸಿ ಬಸ್​ ಚಾಲಕ, ಮಕ್ಕಳನ್ನು ಹಳ್ಳದ ದಡಲ್ಲೇ ಬಿಟ್ಟು ಹೋಗಿದ್ದಾನೆ. ಬಸ್ ಸಿಬ್ಬಂದಿ ನಡೆಗೆ ರೋಸಿ ಹೋದ ಗ್ರಾಮಸ್ಥರು ಮಕ್ಕಳ ಕೂಗಾಟ, ಚೀರಾಟದ ನಡುವೆಯೇ ಸುರಕ್ಷಿತವಾಗಿ ಹಳ್ಳ ದಾಟಿಸಿದ್ದಾರೆ.

ಇದನ್ನೂ ಓದಿ: ವಿಮಾನ ದುರಂತದಲ್ಲಿ ಬೆಂಗಳೂರಿನ ಟೆಕ್ಕಿ ಸಾವು.. ಪತಿಗೆ ಬರ್ತ್​​ಡೇ ಸರ್ಪ್ರೈಸ್ ಕೊಡಲು ಹೊರಟಿದ್ದರು..

publive-image

ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್

ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿಯೇ ಬಸ್ ಸಂಚಾರ ಮಾಡುವಾಗ ಕೆಟ್ಟು ನಿಂತ ಘಟನೆ ಬಾಗಲಕೋಟೆ ಜಿಲ್ಲೆಯ ಜಾಲಕಮಲದಿನ್ನಿ-ಕರಡಿ ಗ್ರಾಮಕ್ಕೆ ಕಲ್ಪಿಸುವ ಸೇತುವೆ ಬಳಿ ನಡೆದಿದೆ. ಇನ್ನೂ ಕೆಟ್ಟು ನಿಂದ ಬಸ್​ ಅನ್ನ ಟ್ರ್ಯಾಕ್ಟರ್ ಸಹಾಯದಿಂದ ಎಳೆದು ಸ್ಥಳೀಯರು ದಡ ಸೇರಿಸಿದ್ದಾರೆ. ಇತ್ತ ಗುಳೇದಗುಡ್ಡ ಪಟ್ಟಣದ ಪೆಟ್ರೋಲ್ ಬಂಕ್​ ಕೂಡ ಮಳೆ ನೀರು ಕೆರೆಯನ್ನುಂಟುಮಾಡಿದೆ.

ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಏಕೆ..? ಮತ್ತೆ ಮಧ್ಯಪ್ರಾಚ್ಯದಲ್ಲಿ ಆಗ್ತಿರೋದು ಏನು..?

publive-image

ಸುರಿದ ಮಳೆಗೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಲಕ್ಷ್ಮೀ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಮಳೆ ನೀರಲ್ಲಿ ಪರದಾಡುತ್ತಿದ್ದ ವೃದ್ಧೆ ಗೌರವ್ವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮಳೆಗೆ ಮನೆಯ ಗೋಡೆ ಕುಸಿತ.. ತಪ್ಪಿದ ಭಾರೀ ಅನಾಹುತ

ಬಿಟ್ಟು ಬಿಡದೆ ಸುರಿದ ಮಳೆಗೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಬತ್ತಿಕೊಪ್ಪ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಕೆಎಸ್‌ಆರ್‌ಟಿಸಿ ಬಸ್​ನ ಮೇಲ್ಚಾವಣಿ ಸೋರುತ್ತಿದ್ದು ವೃದ್ಧ ದಂಪತಿ.. ಪ್ರಯಾಣಿಕರು ಪರದಾಡ್ತಿದ್ದಾರೆ.

ಇದನ್ನೂ ಓದಿ: 28 ಗಂಟೆಗಳ ಬಳಿಕ ಸಿಕ್ಕ ಕಪ್ಪು ಪೆಟ್ಟಿಗೆಯಲ್ಲಿ ಏನಿದೆ..? ಸಂಪೂರ್ಣ ಪರಿಶೀಲನೆಗೆ ಎಷ್ಟು ದಿನ ಬೇಕು ಗೊತ್ತಾ..?

publive-image

ಕಾಫಿನಾಡಲ್ಲಿ ಮಳೆ ಅಬ್ಬರ.. ಸೇತುವೆ ಇಲ್ಲದೆ ಪರದಾಟ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ.. ಪಶ್ಚಿಮ ಘಟ್ಟದ ಸಾಲಿನಲ್ಲಿ ಧಾರಾಕಾರ ಮಳೆ ಸುರಿತ್ತಿರುವುದರಿಂದ ಕಳಸ ತಾಲೂಕಿನಲ್ಲಿ ಹರಿಯುವ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಇದರಿಂಧಾಗಿ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮಕ್ಕೆ ಇರೋ ಸೇತುವೆ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ಮಾರ್ಕ್ರಾಮ್ ಭರ್ಜರಿ ಶತಕ.. ವಿಶ್ವ ಟೆಸ್ಟ್ ಚಾಂಪಿಯನ್‌ ಆಗಲು ತುದಿಗಾಲಲ್ಲಿ ನಿಂತ ದಕ್ಷಿಣ ಆಫ್ರಿಕಾ

publive-image

ಸುರಿದ ಭಾರೀ ಮಳೆಗೆ ನೂರಾರು ಎಕರೆಯ ಬೆಳೆ ಜಲಾವೃತ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ರಾಯರ ಕೆರೆ ಪ್ರದೇಶದಲ್ಲಿ ಜಂಬುನಾಥ ಹಳ್ಳಿಯಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿರೋ ಕಬ್ಬು ಬೆಳೆ ಜಲಾವೃತವಾಗಿದೆ.

ಇದನ್ನೂ ಓದಿ: ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!

publive-image

ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಸವಾರನ ರಕ್ಷಣೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹಳ್ಳದ ಸೇತುವೆ ಮೇಲ್ಭಾಗದಲ್ಲಿ ನೀರು ತುಂಬಿ ಹರಿಯುತ್ತಿದೆ. ಜೀವದ ಹಂಗು ತೊರೆದು ಹಳ್ಳದಲ್ಲೇ ಪ್ರಯಾಣಿಸಲು ವಾಹನ ಸವಾರರ ಯತ್ನಿಸಿದ್ದಾನೆ. ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ವ್ಯಕ್ತಿಯನ್ನು ಜನ ರಕ್ಷಿಸಿದ್ದಾರೆ.

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಚಿತಾ ರಾಮ್​ ಗರಂ.. ಅಷ್ಟಕ್ಕೂ ಹುಲಿ ಕಾರ್ತಿಕ್ ಮಾಡಿದ್ದೇನು?

publive-image

ಒಟ್ಟಾರೆ.. ಅವಧಿಗೂ ಮೊದಲೇ ಕರುನಾಡಿಗೆ ಕಾಲಿಟ್ಟ ಮುಂಗಾರು, ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ. ಇವತ್ತು ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment