/newsfirstlive-kannada/media/post_attachments/wp-content/uploads/2025/05/RAIN-26.jpg)
ಕರ್ನಾಟಕ ಮಾತ್ರವಲ್ಲ ದೇಶದ ಅನೇಕ ರಾಜ್ಯಗಳಲ್ಲೂ ಮಾನ್ಸೂನ್ ಅತೀ ಬೇಗನೇ ಎಂಟ್ರಿ ಕೊಟ್ಟಿದೆ. ಮಹಾರಾಷ್ಟ್ರದ ಮುಂಬೈಗೆ 75 ವರ್ಷದ ಬಳಿಕ ಮುಂಗಾರು ಅವದಿಗೂ ಮುನ್ನವೇ ಬಂದಪ್ಪಳಿಸಿದೆ.
ಮುಂಬೈ ನಗರಕ್ಕೆ ನೈಋತ್ಯ ಮಾನ್ಸೂನ್ 16 ದಿನಗಳ ಮುಂಚಿತವಾಗಿಯೇ ಆಗಮಿಸಿ ಅವಾಂತರಗಳು ಸೃಷ್ಟಿ ಮಾಡಿದೆ. ನಗರದ ಕೊಲಾಬಾ ವೀಕ್ಷಣಾಲಯವು 295 ಮಿಲ್ಲಿ ಮೀಟರ್ ಮಳೆ ದಾಖಲಿಸುವುದರೊಂದಿಗೆ, ಮುಂಬೈ 107 ವರ್ಷಗಳ ಹಳೆಯ ದಾಖಲೆಯನ್ನ ಮುರಿದಿದೆ. 75 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಮಳೆಯಾಗಿದೆ.
ಉದ್ಘಾಟನೆಯಾಗಿ 2 ವಾರಕ್ಕೆ ಕೆರೆಯಂತಾದ ಮೆಟ್ರೋ
ಈ ಬಾರಿ ಭಾರತದಲ್ಲಿ ಬೇಗನೆ ಮಳೆಗಾಲ ಶುರುವಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಮೇ 10ರಂದು ಉದ್ಘಾಟನೆಯಾಗಿದ್ದ ವರ್ಲಿ ಮೆಟ್ರೋ ನಿಲ್ದಾಣದಲ್ಲಿ ಕೆರೆಯಂತಾಗಿದೆ. ಮೆಟ್ರೋ ಪ್ರಯಾಣಿಕರು ಓಡಾಡಲು ಭಯಪಡುವಂತಾಗಿದೆ. ಮೆಟ್ರೋ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ನೀರು ತುಂಬಿದೆ.
ನದಿಯಂತಾದ ಪುಣೆ-ಸೊಲ್ಹಾಪುರ ಹೆದ್ದಾರಿಯ ರಸ್ತೆ
ಪುಣೆ-ಸೊಲ್ಹಾಪುರ ಹೆದ್ದಾರಿಯಲ್ಲಿ ನದಿಯಂತೆ ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಕಾರು ಕೊಚ್ಚಿ ಹೋಗಿದೆ. ಕೊರೆಗಾಂವ್ ಉದ್ಯಾನವನದಲ್ಲಿ ಅದೇ ಪರಿಸ್ಥಿತಿ ಇದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಕಾರ್ಯನಿರ್ವಹಿಸದ ಪಂಪ್ ಹೌಸ್ ಮತ್ತು ಮುಚ್ಚಿಹೋಗಿರುವ ಚರಂಡಿಗಳಿಂದಾಗಿ ನವಿ ಮುಂಬೈನ ಸೆಕ್ಟರ್ 15 ಬೇಲಾಪುರ ತೀವ್ರ ಪ್ರವಾಹವನ್ನ ಎದುರಿಸುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಇನ್ನಷ್ಟು ಹದಗೆಡುತ್ತಿದೆ. ಇತ್ತ ಮಿಥಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಆತಂಕ.. ಜ್ವರ ಇದ್ದರೆ ಮಕ್ಕಳನ್ನು ಶಾಲೆಗೆ ಕಳಿಸದಂತೆ ಮಾರ್ಗಸೂಚಿ..!
ಕೇರಳ
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭಾರೀ ಮಳೆಯಾಗುತ್ತಿದೆ ನಿರಂತ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳ ಮೇಲೆ ಮರಗಳು ಧರೆಗುರುಳಿದ್ದು, ಮನೆಗಳ ಮುಂದೆ ಕರೆಯಂತಾಗಿ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ಇದೆ.
ತಮಿಳುನಾಡು
ತಮಿಳುನಾಡಿನ ಥೇಣಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಿದೆ. ಇತ್ತ ನಾಮಕ್ಕಲ್ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ.
ಕೋಲ್ಕತ್ತಾ
ಕೋಲ್ಕತ್ತಾ ನಗರದಲ್ಲಿ ಮಳೆ ಸುರಿಯುತ್ತಿದ್ದು, ಬಿಸಿಲಿನ ತಾಪದಿಂದ ಮುಕ್ತಿ ಸಿಕ್ಕಿದೆ. ಒಟ್ನಲ್ಲಿ ಯಾವ ರಾಜ್ಯಕ್ಕೂ ಬೇದಭಾವ ತೋರದೆ ಮಳೆರಾಯ ತನ್ನ ವಿಶ್ವರೂಪ ತೋರೋದಕ್ಕೆ ಶುರು ಮಾಡಿದ್ದಾನೆ. ಅಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದ್ರೂ.. ಜನ ಎಚ್ಚರದಿಂದಿರ ಬೇಕು ಅನ್ನೋದು ಅಧಿಕಾರಿಗಳ ಸೂಚನೆ.
ಇದನ್ನೂ ಓದಿ: RCB ಗೆಲ್ಲಲು ಈ ಫಾರ್ಮುಲಾ ಬೇಕೇಬೇಕು.. ಇವತ್ತು ಯಾರ ಕೊಡುಗೆ ತುಂಬಾನೇ ಮುಖ್ಯ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ