/newsfirstlive-kannada/media/post_attachments/wp-content/uploads/2023/10/Farmer.jpg)
ದೇಶದ ಹಲವೆಡೆ ಈ ಬಾರಿಯು ಉತ್ತಮ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ಇಂದು ರೈತರಿಗೆ ಖುಷಿ ಸುದ್ದಿಯೊಂದನ್ನ ಕೊಟ್ಟಿದೆ. 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳದಿಂದ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದೆ. ಬಳಿಕ ಜೂನ್ ಮೊದಲ ವಾರ ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಆರಂಭವಾಗಲಿದೆ.
ದೇಶಾದ್ಯಂತ 4 ತಿಂಗಳು ಮಳೆಗಾಲ!
ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ದೇಶದಲ್ಲಿ ಮಾನ್ಸೂನ್ ಮಳೆ ಆಗಲಿದೆ. ಸೆಪ್ಟೆಂಬರ್ ಬಳಿಕ ಹಿಂಗಾರು ಮಳೆ ಶುರುವಾಗಲಿದೆ.
ಇದನ್ನೂ ಓದಿ: Rain effect: ರಾಜ್ಯದಲ್ಲಿ ಮಳೆ ರಗಳೆ, ಇನ್ನೂ ಎಷ್ಟು ದಿನ ಮಳೆ ಬೀಳಲಿದೆ..?
ಏಪ್ರಿಲ್, ಮೇ ತಿಂಗಳಲ್ಲಿ ದೇಶದ ಹಲವೆಡೆ ಬಿಸಿಲಿನ ವಾತಾವರಣ ಇದೆ. ಆದರೂ ಜೂನ್‌ನಿಂದ ಮುಂದಿನ 4 ತಿಂಗಳ ಕಾಲ ಈ ವರ್ಷ ಶೇಕಡಾ 105ರಷ್ಟು ಮಾನ್ಸೂನ್ ಮಳೆ ಆಗಲಿದೆ ಎಂದ ಐಎಂಡಿ ಹೇಳಿದೆ. ದೇಶಾದ್ಯಂತ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ