ಬೆಂಗಳೂರಿಗೆ ಮತ್ತೆ ವರುಣನ ಎಂಟ್ರಿ.. ಇಂದಿನಿಂದ ಮುಂಗಾರು ಮಳೆಯ ಆರ್ಭಟ; ಅಲರ್ಟ್ ಏನು?

author-image
admin
Updated On
ಬೆಂಗಳೂರಿಗೆ ಮತ್ತೆ ವರುಣನ ಎಂಟ್ರಿ.. ಇಂದಿನಿಂದ ಮುಂಗಾರು ಮಳೆಯ ಆರ್ಭಟ; ಅಲರ್ಟ್ ಏನು?
Advertisment
  • ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣಾರ್ಭಟ ಮತ್ತೆ ಶುರು
  • ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರು ಇವತ್ತು ಫುಲ್ ಕೂಲ್‌!
  • ಜೂನ್ 11, ಜೂನ್ 12ಕ್ಕೆ ರಾಜ್ಯದ ಬಹುತೇಕ ಕಡೆ ಯೆಲ್ಲೋ ಅಲರ್ಟ್

ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣಾರ್ಭಟ ರಾಜ್ಯದಲ್ಲಿ ಮತ್ತೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಮಳೆಯ ಎಂಟ್ರಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮೇಖ್ರಿ ಸರ್ಕಲ್, ಪ್ಯಾಲೇಸ್ ರಸ್ತೆ, ಗಾಲ್ಫ್ ರಸ್ತೆ, ರಾಜಭವನ, ವಿಧಾನಸೌಧ, ಶಿವಾನಂದ ವೃತ್ತ, ವಸಂತ ನಗರ, ಹೆಬ್ಬಾಳ, ನಾಗವಾರ, ಕಲ್ಯಾಣ ನಗರ, ಮಾನ್ಯತಾ ಟೆಕ್ ಪಾರ್ಕ್ ಸುತ್ತಾಮುತ್ತಾ ಭರ್ಜರಿ ಮಳೆಯಾಗಿದೆ.

ಕಳೆದ ವಾರ ವರುಣ ಬಿಡುವು ಕೊಟ್ಟಿದ್ದರಿಂದ ತಾಪಮಾನದಲ್ಲೂ ಏರಿಕೆಯಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ 32 ಡಿಗ್ರಿವರೆಗೂ ಗರಿಷ್ಟ ಉಷ್ಣಾಂಶ ದಾಖಲಾಗಿತ್ತು. ಬಿಸಿಲಿನಿಂದ ಕೊಂಚ ಬಸವಳಿದಿದ್ದ ಬೆಂಗಳೂರು ಇವತ್ತು ಮತ್ತೆ ಫುಲ್ ಕೂಲ್ ಆಗಿದೆ.

publive-image

ಇಂದಿನಿಂದ ಮುಂಗಾರು ಮತ್ತೆ ಚುರುಕಾಗಿದ್ದು, ಜೂನ್ 13ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜೂನ್ 11, 12 ಹಾಗೂ 13 ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು OYO ರೂಂನಲ್ಲಿ ವಿವಾಹಿತ ಮಹಿಳೆ ದುರಂತ; ಹರಿಣಿ, ಯಶಸ್‌ ಮಧ್ಯೆ ಅಸಲಿಗೆ ಆಗಿದ್ದೇನು? 

ಜೂನ್ 11ರಂದು ಬಳ್ಳಾರಿ, ದಾವಣಗೆರೆ ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಇದೆ. ಜೂನ್ 12ಕ್ಕೆ ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲ್ಬುರ್ಗಿ, ಬೆಳಗಾವಿ, ಬಾಗಲಕೋಟೆ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಜೂನ್ 13ರವರೆಗೂ ರಾಜ್ಯಾದ್ಯಂತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment