newsfirstkannada.com

ಕನ್ನಡಿಗರಿಗೆ ಗುಡ್​ನ್ಯೂಸ್​​.. ಒಟಿಟಿಗೆ ಬಂತು ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ!

Share :

Published January 12, 2024 at 9:06pm

Update January 12, 2024 at 9:17pm

    ಸ್ಯಾಂಡಲ್​ವುಡ್​ ಕಂಡ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಿನಿಮಾ ’19.20.21

    ಇಂದಿನಿಂದ ಒಟಿಟಿಯಲ್ಲೂ ‘19.20.21’ ಸಿನಿಮಾ ನೋಡಬಹುದು!

ಸ್ಯಾಂಡಲ್​ವುಡ್​ ಕಂಡ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ. ಇವರು ಕೇವಲ ಪ್ರತಿಭಾವಂತ ನಿರ್ದೇಶಕರು ಮಾತ್ರವಲ್ಲ ಜೀವಪರ ವ್ಯಕ್ತಿ ಕೂಡ ಹೌದು. ಹಾಗಾಗಿ ಮಂಸೋರೆ ಪ್ರತೀ ಸಿನಿಮಾದಲ್ಲೂ ಒಂದು ವಿಭಿನ್ನ ಕಥೆ ಇರುತ್ತದೆ. ಇವರ ಸಿನಿಮಾಗಳು ಸದಾ ನಾಗರೀಕ ಸಮಾಜದಲ್ಲಿ ನಡೆಯೋ ಅನಾಗರೀಕತೆ ಬಗ್ಗೆ ಮಾತಾಡುತ್ತವೆ. ಇಂಥದ್ದೇ ಸಾಮಾಜಿಕ ಕಳಕಳಿ ಕಥೆ ಆಧಾರಿತ ಸಿನಿಮಾವೊಂದು ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ರಿಲೀಸ್​ ಆಗಿತ್ತು. ಅದರ ಹೆಸರು ‘19.20.21’. ನೈಜ ಘಟನೆ ಆಧಾರಿತ ಈ ಸಿನಿಮಾವೀಗ ಒಟಿಟಿಯಲ್ಲಿ ರಿಲೀಸ್​ ಆಗಿದೆ.

ಈ ಸಂಬಂಧ ಟ್ವೀಟ್​ ಮಾಡಿರೋ ನಿರ್ದೇಶಕ ಮಂಸೋರೆ, ‘ನಿಮ್ಮ ಅಂಗೈಯಲ್ಲಿ ನಮ್ಮ ಸಿನಿಮಾ. ಹಲವು ವಿಘ್ನಗಳನ್ನು ದಾಟಿ ನಿಮ್ಮ ಬಳಿಗೆ ನಮ್ಮ ಸಿನಿಮಾ ಬಂದಿದೆ. ನಮ್ಮದೇ ನೆಲದ ಪುಟ್ಟ ಸಮುದಾಯ ಮಲೆಕುಡಿಯರ ಸ್ಫೂರ್ತಿದಾಯಕ ಕತೆಯನ್ನು ಎಲ್ಲರಿಗೂ ತಲುಪಿಸಬೇಕೆಂಬ ಕನಸು ನನಸಾಗಿದೆ. ಜೊತೆಗೆ ನಮ್ಮ ಇನ್ನೊಂದು ಸಿನಿಮಾ ಕೂಡ ಇದೆ. ನೋಡಿ, ಹಂಚಿ, ಪ್ರೋತ್ಸಾಹಿಸಿ’ ಎಂದು ಬರೆದುಕೊಂಡಿದ್ದಾರೆ.

ಎಲ್ಲೆಲ್ಲಿ ಲಭ್ಯವಿದೆ ಸಿನಿಮಾ..?

ಥೀಯೇಟ್​ರನಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾಗೆ ಕನ್ನಡಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದಿನಿಂದ ಒಟಿಟಿಯಲ್ಲೂ ‘19.20.21’ ಸಿನಿಮಾ ನೋಡಬಹುದಾಗಿದೆ. ‘Bcineet’ ಒಟಿಟಿ ಮೂಲಕ ಹಲವು ಪ್ಲಾಟ್​ಫಾರ್ಮ್​ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಅಮೇಜಾನ್​ ಪ್ರೈಂ ವಿಡಿಯೋ, ಏರ್​ಟೆಲ್​ ಎಕ್ಸ್​ಸ್ಟ್ರೀಮ್​, ಒನ್​ಪ್ಲಸ್​ ಟಿವಿ, ಹಂಗಾಮಾ ಪ್ಲೇ, ಮೂವೀಫ್ಲೆಕ್ಸ್​, ಜಸ್ಟ್​ ವಾಚ್​, ಎಬಿಸಿ ಟಾಕೀಸ್​ ಹಲವು ಪ್ಲಾಟ್​ಫಾರ್ಮ್​ಗಳಲ್ಲಿ ನೋಡಬಹುದಾಗಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ’19.20.21’ ಸಿನಿಮಾದ ನಿರ್ದೇಶಕ. ಸಮಾಜದ ಮತ್ತೊಂದು ಮುಖ ಅನಾವರಣಗೊಳಿಸೋ ಈ ಸಿನಿಮಾ ಕನ್ನಡ ನೆಲದ ಕಥೆ ಹೊಂದಿದೆ. ಸಿನಿಮಾಟೋಗ್ರಫಿ, ಮ್ಯೂಸಿಕ್, ಪಾತ್ರಗಳ ಆಯ್ಕೆ ಹಾಗೂ ಚಿತ್ರಕಥೆ ಎಲ್ಲವೂ ಅದ್ಭುತವಾಗಿದೆ.

ಸಿನಿಮಾ ತಾರ ಬಳಗ ಹೀಗಿದೆ..!

ಸಿನಿಮಾದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಳೆ, ಸಂಪತ್ ಮೈತ್ರೇಯಾ, ಶೃಂಗ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ನಾತಿಚರಾಮಿ ಸಿನಿಮಾಗೆ ಕೆಲಸ ಮಾಡಿದ್ದ ಬಿಂದು ಮಾಲಿನಿ ಅವರೇ ಈ ಸಿನಿಮಾಗೂ ಸಂಗೀತ ನೀಡಿದ್ದಾರೆ.

ಮಂಸೋರೆ ಅವರೊಂದಿಗೆ ವೀರೇಂದ್ರ ಮಲ್ಲಣ್ಣ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ, ಶಿವು ಕುಮಾರ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಇದೆ. ದೇವರಾಜ್ ಆರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರಿಗೆ ಗುಡ್​ನ್ಯೂಸ್​​.. ಒಟಿಟಿಗೆ ಬಂತು ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ!

https://newsfirstlive.com/wp-content/uploads/2024/01/Mansore.jpg

Load More