ವಾಯು ವಿಹಾರ ಮಾಡಲು ಕೂಡ ಕಟ್ಟಬೇಕು ಕಾಸು.. ಈ ಹೈಟೆಕ್​ ಕ್ರೀಡಾಂಗಣದಲ್ಲಿ ಈಗ ಹೊಸ ರೂಲ್ಸ್!

author-image
Gopal Kulkarni
Updated On
ವಾಯು ವಿಹಾರ ಮಾಡಲು ಕೂಡ ಕಟ್ಟಬೇಕು ಕಾಸು.. ಈ ಹೈಟೆಕ್​ ಕ್ರೀಡಾಂಗಣದಲ್ಲಿ ಈಗ ಹೊಸ ರೂಲ್ಸ್!
Advertisment
  • ರಾಜ್ಯದ ಖಜಾನೆ ತುಂಬಿಸಲು ಸರ್ಕಾರದ ನಾನಾ ಕಸರತ್ತು
  • ವಾಯುವಿಹಾರಿಗಳ ಮೇಲೆಯೂ ಬಿತ್ತು ಸರ್ಕಾರದ ಕಣ್ಣು!
  • ಈ ಕ್ರೀಡಾಂಗಣದಲ್ಲಿ ವಾಕಿಂಗ್​ ಮಾಡಲು ಕಟ್ಟಬೇಕು ಫೀಸು!

ಅದ್ಯಾಕೋ ಏನೋ ಸರ್ಕಾರ ಖಜಾನೆ ಕಾಲಿ ಆಗ್ಬಿಟ್ಟಿದ್ಯಾ? ಅನ್ನೋ ಪ್ರಶ್ನೆ ಮೂಡ್ತಿದೆ.. ಯಾಕಂದ್ರೆ, ಬೆಲೆ ಏರಿಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಸರ್ಕಾರ ಈಗ ಮತ್ತೊಂದು ಹಂತಕ್ಕೆ ಹೋಗಿದೆ.. ಉಸಿರಾಡುವ ಬೆಲೆ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದು, ಸಾರ್ವಜನಿಕರು ಫುಲ್ ರಾಂಗ್ ಆಗಿದ್ದಾರೆ.ರಾಜ್ಯ ಸರ್ಕಾರ ಮಾತ್ರ ಖಜಾನೆ ತುಂಬಿಸಲು ನಾನಾ ಕಸರತ್ತು ಮಾಡುತ್ತಿದೆ.

ರಾಜ್ಯದಲ್ಲಿ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಯದ್ವಾ ತದ್ವಾ ತೆರಿಗೆ ಹಾಕ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರಿಗೆ, ಶುಲ್ಕ ಅಂತೇಳಿ ಜನರ ಜೇಬಿಗೆ ಕೈ ಹಾಕುತ್ತಿರುವ ಸರ್ಕಾರ ಇದೀಗ ಮತ್ತಷ್ಟು ತೀರಾ ಕೆಳಮಟ್ಟಕ್ಕೆ ಇಳಿದಿದೆ. ಜನರ ತೆರಿಗೆ ದುಡ್ಡಲ್ಲೇ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿ, ಇದೀಗ ಅದರ ನಿರ್ವಹಣೆಗೂ ಜನರ ಬಳಿಯೇ ವಸೂಲಿಗೆ ಸರ್ಕಾರ ಮುಂದಾಗಿದೆ.

publive-image

ತುಮಕೂರಿನ ಹೈಟೆಕ್​ ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳಿಗೂ ಹಾಗೂ ಕ್ರೀಡಾಪಟುಗಳಿಗೂ ತೆರಿಗೆ ಹಾಕಲು ಹೊರಟಿದೆ. ಈ ನಿಯಮ ಇಂದಿನಿಂದಲೇ ಜಾರಿಯಾಗಲಿದೆ. ವಿಶೇಷವಾಗಿ ತುಮಕೂರು ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣವನ್ನು ವಿಶ್ವ ದರ್ಜೆಯ ಸ್ಥಾನಕ್ಕೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಾಕ್ಟಿಸ್ ಮಾಡುವ ಪ್ರತಿ ಕ್ರೀಡಾಪಟುಗಳಿಗೂ ವಾಕಿಂಗ್ ಮಾಡೋರಿಗೂ ಶುಲ್ಕ ವಿಧಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ:ಕಾಂತಾರ ನಟ ರಿಷಬ್ ಶೆಟ್ಟಿ ಮೇಲೆ ವಾಟಾಳ್ ನಾಗರಾಜ್ ಫುಲ್ ಗರಂ; ಕಾರಣವೇನು?

publive-image

ಅತ್ತ, ತಮ್ಮ ಆರೋಗ್ಯ ರಕ್ಷಣೆಗಾಗಿ ವಾಕ್ ಮಾಡುವ ವಯೋ ವೃದ್ದರಿಗೆ ತಿಂಗಳಿಗೆ 300 ರೂ ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಿದೆ. ಇನ್ನು, ಸೆಟಲ್ ಕಾಕ್ ಆಡೋರಿಗೆ ಪ್ರತಿ ಗಂಟೆಗೆ 200 ರೂ ಶುಲ್ಕ, ಈಜುಪಟುಗಳಿಗೆ ಗಂಟೆಗೆ 100 ರೂ, ಟೆನ್ನಿಸ್ ಆಡೋರಿಗೆ‌ ಗಂಟೆಗೆ 40 ರೂ, ಕಬ್ಬಡ್ಡಿ, ವಾಲಿಬಾಲ್ ಖೋ ಖೋ ಅಂಕಣಕ್ಕೆ ಮಾಸಿಕ 500 ರೂ ಹೀಗೆ ಪ್ರತಿ ಕ್ರೀಡೆಗೂ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ತಂದ ಕ್ರೀಡಾಪಟುಗಳಿಗೂ ಉಚಿತ ತರಬೇತಿ ಇಲ್ಲಿ ಸಿಗೋದಿಲ್ಲ.

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ; ಭೀಕರ ಅಪಘಾತ

ಕ್ರೀಡಾಂಗಣ ನಿರ್ವಹಣೆ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಉಚಿತವಾಗಿ ತರಬೇತಿ ಕೊಡಬೇಕಾದ ಸರ್ಕಾರವೇ ಶುಲ್ಕ ವಿಧಿಸಲು ಮುಂದಾಗಿರೋದಕ್ಕೆ ವಿರೋಧ ವ್ಯಕ್ತವಾಗಿದೆ.

publive-image

ಇಡೀ ರಾಜ್ಯಾದ್ಯಂತ ಇವತ್ತಿನಿಂದ ಈ ಶುಲ್ಕ ಜಾರಿಯಾಗಲಿದೆ. ವಾಯು ವಿಹಾರಿಗಳು ಸ್ವಚ್ಛಂದವಾಗಿ ವಿಹರಿಸಿ ತಂಪು ಗಾಳಿ ಸೇವನೆ ಮಾಡಲೂ ಈ ಸರ್ಕಾರಕ್ಕೆ ಶುಲ್ಕ ಕೊಡುವ ಪರಿಸ್ಥಿತಿ ಬಂತಲ್ಲಾ ಎಂದು ಹಿಡಿಶಾಪ ಹಾಕುತಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment