/newsfirstlive-kannada/media/post_attachments/wp-content/uploads/2024/08/BeFunky-design-3.jpg)
ಚಂದ್ರ ಆಗಸದಲ್ಲಿ ಸದಾ ಭೂಮಿಯೊಂದಿಗೆ ಒಂದು ನಂಟು ಇಟ್ಟುಕೊಂಡಿರುವ ಗ್ರಹ. ಚಂದ್ರನೆಂದರೆ ಕವಿಗಳಿಗೆ ಕವನಕ್ಕೆ ಸ್ಫೂರ್ತಿ, ಭಾರತದ ಪುಟ್ಟ ಪುಟ್ಟ ಮಕ್ಕಳಿಗೆ ಅವನು ಚಂದಮಾಮ, ಚಂದಮಾಮನನ್ನು ಕರೆದೇ ಭಾರತದ ಅಮ್ಮಂದಿರು ತಮ್ಮ ಮಕ್ಕಳಿಗೆ ಊಟ ಮಾಡಿಸುವ ರೂಢಿ ಶತಮಾನಗಳಿಂದಲೂ ಹರಿದು ಬಂದಿದೆ. ಅಂತಹ ಚಂದ್ರ ಈಗ ಭೂಮಿಯಿಂದ ಇಂಚಿಂಚು ದೂರ ಸರಿಯುತ್ತಿದ್ದಾನೆ. ವಸುಂಧರೆಯಿಂದ ವರ್ಷದಿಂದ ವರ್ಷಕ್ಕೆ ದೂರ ಸರಿಯುತ್ತಿದ್ದಾನೆ ಅನ್ನೋ ಖಗೋಳದ ರಹಸ್ಯ ವರದಿಯೊಂದು ಬಹಿರಂಗವಾಗಿದೆ.
/newsfirstlive-kannada/media/post_attachments/wp-content/uploads/2023/10/MOON_1.jpg)
ಇದನ್ನೂ ಓದಿ:AR15: ಟ್ರಂಪ್​ ಹತ್ಯೆಗೆ ಯತ್ನಿಸಿದ್ದ ರೈಫಲ್​ನ ರಕ್ತಸಿಕ್ತ ಇತಿಹಾಸವಿದು!
ವೈಜ್ಞಾನಿಕ ಅನೇಕ ಅವಲೋಕನಗಳು ಹಾಗೂ ಹಲವು ವಿಶ್ಲೇಷಣೆಗಳು ಇಂತಹದೊಂದು ಗಮನಾರ್ಹ ವಿಷಯವನ್ನು ಜಗತ್ತಿನ ಮುಂದಿಟ್ಟಿದೆ. ವಿಲ್ಕನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲದ ಒಂದು ತಂಡ ಚಂದ್ರನು ಭೂಮಿಯಿಂದ ವರ್ಷದಿಂದ ವರ್ಷಕ್ಕೆ ಇಷ್ಟಿಷ್ಟೇ ದೂರ ಸರಿಯುತ್ತಿದ್ದಾನೆ ಎಂದು ಹೇಳಿದೆ. ಸುಮಾರು 9 ಕೋಟಿ ವರ್ಷದಿಂದಲೂ ಈ ಒಂದು ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿಯೇ ಭೂಮಿಯ ಮೇಲಿನ ಒಂದು ದಿನದ ಸಮಯ ಇಂತಿಷ್ಟು ವರ್ಷಗಳಿಗೆ ಹೆಚ್ಚಾಗುತ್ತಲೇ ಸಾಗುತ್ತಿದೆ ಎಂದು ಈ ತಂಡ ಹೇಳಿದೆ.
ದಿನಕ್ಕೆ 24 ಗಂಟೆಯಲ್ಲ 25 ಗಂಟೆಗೆ ಏರಿಕೆ!
ವಿಲ್ಕನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ತಂಡದ ಅಧ್ಯಯನದ ಪ್ರಕಾರ ಚಂದ್ರನು ಭೂಮಿಯಿಂದ ಪ್ರತಿವರ್ಷ 3.3ಸೆಂಟಿ ಮೀಟರ್​​ನಷ್ಟು ದೂರ ಸರಿಯತ್ತಿದ್ದಾನಂತೆ. ಇದು ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ದಿನದ ಗಣನೆಗೆ ತೆಗೆದುಕೊಳ್ಳು ಗಂಟೆ ಅಂದ್ರೆ ಸಮಯದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ. ಮುಂದಿನ 20 ಕೋಟಿ ವರ್ಷದ ಬಳಿಕ ಭೂಮಿಯಲ್ಲಿ ಒಂದು ದಿನದ ಸಮಯ 25 ಗಂಟೆಗೆ ಏರಿಕೆಯಾಗಲಿದೆ ಎಂದು ಈ ತಂಡದ ಅಧ್ಯಯನ ಹೇಳಿದೆ.
ವಿಶ್ವವಿದ್ಯಾಲಯ ತಂಡದ ಅಧ್ಯಯನವು ಮತ್ತೊಂದು ವಿಷಯವನ್ನು ರಿವೀಲ್ ಮಾಡಿದೆ. 100 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಒಂದು ದಿನಕ್ಕೆ 18 ತಾಸುಗಳು ಮಾತ್ರ ಇದ್ದವು. ಈಗ 24 ತಾಸುಗಳಾಗಿವೆ. ಇದಕ್ಕೆ ಕಾರಣ ಚಂದ್ರನು ಭೂಮಿಯಿಂದ ದೂರವಾಗುತ್ತಿರುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us