newsfirstkannada.com

10 ಸಾವಿರಕ್ಕೂ ಹೆಚ್ಚು ಸೀರೆ, ಡ್ರೆಸ್‌ ಪತ್ತೆ; ಮತದಾರರಿಗೆ ಹಂಚಲು ಡಿ.ಕೆ.ಸುರೇಶ್ ಇಟ್ಟಿದ್ದಾರೆ ಎಂದ JDS

Share :

Published March 20, 2024 at 7:24am

    ಸೀರೆ ಕವರ್ ಮೇಲೆ ಯಾವ ಸ್ಟಿಕ್ಕರ್ ಇಲ್ಲ, ಯಾರ ಹೆಸರೂ ಇಲ್ಲ

    ದ್ಯಾವರಸೇಗೌಡನ ದೊಡ್ಡಿ ಗೋಡೌನ್‌ನಲ್ಲಿ ದಾಖಲೆ ಇಲ್ಲದ ಸೀರೆ ಸಂಗ್ರಹ

    ಕಾಂಗ್ರೆಸ್​ ವಿರುದ್ಧ ಮತದಾರರಿಗೆ ಹಂಚಲು ಸೀರೆ ಸಂಗ್ರಹ ಆರೋಪ

ರಾಮನಗರ: 2024 ಲೋಕಸಭೆಗೆ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಲ್ಲಿದ್ರೂ ರಾಜಕೀಯ ಪಕ್ಷಗಳಿಂದ ಗಿಫ್ಟ್​ ಪಾಲಿಟಿಕ್ಸ್ ಜೋರಾಗಿದೆ. ಜಿದ್ದಾಜಿದ್ದಿನ ಕದನದ ಕಣವಾಗಿರೋ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಬ್ರದರ್ಸ್​ನ ಮಣಿಸಲು ಬಿಜೆಪಿ-ಜೆಡಿಎಸ್‌ ರಣತಂತ್ರ ರೂಪಿಸುತ್ತಿವೆ. ಇದರ ನಡುವೆ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ ಸುರೇಶ್​ರನ್ನು ಗೆಲ್ಲಿಸಿಕೊಳ್ಳಲು ಅಡ್ಡದಾರಿ ತುಳಿದು ಮಹಿಳಾ ಮಣಿಗಳ ಮನ ಸೆಳೆಯೋದಕ್ಕೆ ಗಿಫ್ಟ್​ಗಳು ರೆಡಿ ಮಾಡಿರೋ ಆರೋಪ ಕೇಳಿ ಬಂದಿವೆ.

ಆಗಿದ್ದೇನು..? 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ದ್ಯಾವರಸೇಗೌಡನ ದೊಡ್ಡಿ ಗೋಡೌನ್‌ನಲ್ಲಿ ಅಕ್ರಮವಾಗಿ ಮತದಾರರಿಗೆ ಹಂಚಲು ಸೀರೆ, ಡ್ರೆಸ್​ಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಗೋಡೌನ್​ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀರೆ ಹಾಗೂ ಡ್ರೆಸ್​ ಪೀಸ್​ಗಳನ್ನ ಸಂಗ್ರಹಿಸಿಡಲಾಗಿದೆ. ಇದು ಮತದಾರರಿಗೆ ಆಮೀಷವೊಡ್ಡಲು ತಂದಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಿಚಾರ ಗೊತ್ತಾದ ಕೂಡಲೇ ಜೆಡಿಎಸ್‌ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಗೋಡೌನ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಹೈಡ್ರಾಮಾ ನಡೆದು ಹೋಗಿದೆ. ಸೀರೆ ಹಾಗೂ ಡ್ರೆಸ್​ ಪೀಸ್​ಗಳನ್ನು ಕಾಂಗ್ರೆಸ್​ ನಾಯಕರು ಮತದಾರರಿಗೆ ಹಂಚಲು ಸಂಗ್ರಹಿಸಿದ್ರು ಎಂದು ಜೆಡಿಎಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

ಸೀರೆ ಕವರ್ ಮೇಲೆ ಯಾವ ಸ್ಟಿಕ್ಕರ್ ಇಲ್ಲ. ಯಾರ ಹೆಸರೂ ಇಲ್ಲ. ಹೀಗೆ ಆರೋಪ ಮಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿದೆ.

ಕೂಡಲೇ ಸ್ಥಳಕ್ಕೆ ಬಂದ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ, ಉಭಯ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಬಳಿಕ ಸೀರೆಗಳ ದಾಸ್ತಾನು ಬಗ್ಗೆ ಮಾಹಿತಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ. ಒಟ್ಟಾರೆ ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಘಾಟು ಜೋರಾಗಿದೆ. ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರೂ ಅಡ್ಡದಾರಿಯಲ್ಲಿ ಮತದಾರರ ಮನಗೆಲ್ಲುವ ಯತ್ನಗಳು ನಡೀತಿರೋದ ಬೆಳಕಿಗೆ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ಸಾವಿರಕ್ಕೂ ಹೆಚ್ಚು ಸೀರೆ, ಡ್ರೆಸ್‌ ಪತ್ತೆ; ಮತದಾರರಿಗೆ ಹಂಚಲು ಡಿ.ಕೆ.ಸುರೇಶ್ ಇಟ್ಟಿದ್ದಾರೆ ಎಂದ JDS

https://newsfirstlive.com/wp-content/uploads/2024/03/saree.jpg

Load More