/newsfirstlive-kannada/media/post_attachments/wp-content/uploads/2024/07/Modi.jpg)
ಶಿವನ ಆರಾಧಿಸಲು ಹೋದ ಜಾಗದಲ್ಲಿ ಮಾರಣಹೋಮವೇ ನಡೆದುಹೋಗಿದೆ. ಭೋಲೇ ಬಾಬಾ ನೋಡಲು ಬಂದ ನೂರಾರು ಮಂದಿ ಸಾವಿನ ಕದ ತಟ್ಟಿದ್ದಾರೆ. ಈ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಆ ಬಾಬಾ ಯಾರು ಅನ್ನೋ ಕಥೆಯಂತೂ ಸಿನಿಮಾ ಸ್ಟೋರಿಗಿಂತ ರೋಚಕ.
ಆಸ್ಪತ್ರೆ ಮುಂದೆ ಮೃತದೇಹಗಳ ರಾಶಿ. ತಮ್ಮವರನ್ನ, ಮಕ್ಕಳನ್ನ ಕಳೆದುಕೊಂಡ ಜನರು ನರಳಾಟ. ಇಂಥಾ ನರಕದಂತ ದೃಶ್ಯ ಕಾಣಸಿಕ್ಕಿದ್ದು ಉತ್ತರ ಪ್ರದೇಶದ ಹತ್ರಾಸ್ನಲ್ಲಿ. ಹೀಗೆ ನರಕ ಕಂಡಿರೋರು ಹೋಗಿದ್ದು ಆ ಬಾಬಾ ನೋಡಲು. ಶಿವನನ್ನು ಆರಾಧಿಸಲು.
ಭೋಲೆ ಬಾಬಾ ನೋಡಬಂದ ಭಕ್ತರ ನಡುವೆ ಕಾಲ್ತುಳಿತ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಭೋಲೆ ಬಾಬಾನ ಸತ್ಸಂಗ ಹಮ್ಮಿಕೊಳ್ಳಲಾಗಿತ್ತು. ಪ್ರತೀ ಮಂಗಳವಾರ ನಡೆಯೋ ಶಿವನ ಆರಾಧಾನ ಕಾರ್ಯಕ್ರಮಕ್ಕೆ ಸುಮಾರು 12 ಸಾವಿರಾರು ಭಕ್ತರು ಆಗಮಿಸಿದ್ರು. ಬಯಲಿನಲ್ಲಿ ಹಾಕಲಾಗಿದ್ದ ಟೆಂಟ್ನೊಳಗೆ ಸತ್ಸಂಗ ನಡೀತಿತ್ತು. ಆದ್ರೆ ಈ ಟೆಂಟ್ನೊಳಗೆ ಜನ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ತಕ್ಷಣ ಹೊರಗೆ ಓಡೋಕೆ ಶುರುಮಾಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿತ್ತು. 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: VIDEO: ದರ್ಶನ್ ಬಗ್ಗೆ ಕೇಳುತ್ತಿದ್ದಂತೆ ಕೈ ಎತ್ತಿ ಮುಗಿದ ಮಾಲತಿ ಸುಧೀರ್; ಈ ಬಗ್ಗೆ ಏನಂದ್ರು?
ಈ ದುರಂತದಲ್ಲಿ ಹೃದಯ ವಿದ್ರಾವಕ ಘಟನೆ ಅಂದ್ರೆ, ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹಗಳ ರಾಶಿ ನೋಡಿದ ಪೊಲೀಸ್ ಸಿಬ್ಬಂದಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಮೋದಿ ಸಂತಾಪ.. 2 ಲಕ್ಷ ಪರಿಹಾರ ಘೋಷಣೆ
ಹತ್ರಾಸ್ ದುರಂತದಲ್ಲಿ ಸಾವನ್ನಪ್ಪಿದವ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಇನ್ನೊಂದೆಡೆ ಇಂದು ಹತ್ರಾಸ್ಗೆ ಭೇಟಿ ಕೊಡಲಿರೋ ಸಿಎಂ ಯೋಗಿ ಆದಿತ್ಯನಾಥ್ ಗಾಯಾಳುಗಳನ್ನ ಹಾಗೂ ಮೃತರ ಕುಟುಬಸ್ಥರನ್ನ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: ಫುಟ್ಬಾಲ್ ಮ್ಯಾಚ್ ನೋಡಲು ಅಂತ್ಯಕ್ರಿಯೆಯನ್ನೇ ನಿಲ್ಲಿಸಿದ ಕುಟುಂಬಸ್ಥರು; ವಿಡಿಯೋ ವೈರಲ್!
ಇನ್ನು, ಈ ಮಹಾದುರಂತಕ್ಕೆ ಕಾರಣವಾದ ಭೋಲೆ ಬಾಬಾ ಕಥೆಯೇ ರೋಚಕ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದವ ಜನರ ಆರಾಧ್ಯ ದೈವ ಆಗಿದ್ದೇ ಇಂಟ್ರೆಸ್ಟಿಂಗ್
ಬಾಬಾನ ಮೂಲ ಹೆಸರು ಸೂರಜ್ ಪಾಲ್
ಸದಾ ಬಿಳಿ ವಸ್ತವನ್ನ ಧರಿಸ್ತಿದ್ದ ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್. ಉತ್ತರ ಪ್ರದೇಶದ ಇತಾಹ್ ಜಿಲ್ಲೆಯಲ್ಲಿ ಹುಟ್ಟಿದ್ದ. ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ನಂತೆ. ಅಷ್ಟೇ ಅಲ್ಲದೇ ರಾಜ್ಯದ ಗುಪ್ತಚರ ಇಲಾಖೆಯಲ್ಲೂ ಈತ ಸೇವೆ ಸಲ್ಲಿಸಿದ್ನಂತೆ. ಸುಮಾರು 18 ವರ್ಷ ಕೆಲಸ ಮಾಡಿ ಸರ್ಕಾರಿ ಕೆಲಸ ತ್ಯಜಿಸಿದ್ದ ಸೂರಜ್ ಪಾಲ್, ಭೋಲೆ ಬಾಬಾ ಆಗಿ ಬದಲಾಗಿದ್ದ.
ಈತನಿಗೆ ಕೆಲ ರಾಜಕಾರಣಿಗಳೂ ಫಾಲೋವರ್ಸ್
ಸಾಕಾರ ವಿಶ್ವಹರಿ ಬಾಬಾ, ಭೋಲೆ ಬಾಬಾ ಅನ್ನೋ ಹೆಸರಲ್ಲಿ ಈತ ಫೇಮಸ್ ಆಗ ತೊಡಗಿದ. ಕೊರೊನಾ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತ ಈ ಬಾಬಾ, ನನಗೆ ಯಾವುದೇ ಗುರುಗಳು ಇಲ್ಲ ಅಂತಿದ್ದ. ನಾನು ನಾನಾಗಿಯೇ ಈ ಜ್ಞಾನ ಸಂಪಾದಿಸಿದ್ದೇನೆ. ದೇವರೇ ನನ್ನೆದುರು ಪ್ರತ್ಯಕ್ಷವಾಗಿ ಆಧ್ಯಾತ್ಮಿಕತೆಯ ದಾರಿ ತೋರಿದ್ದಾನೆ ಅಂತಾ ಕಥೆ ಕಟ್ಟಿ ಭಕ್ತರಿಗೆ ಯಾಮಾರಿಸ್ತಿದ್ದ. ಸ್ವಯಂಪ್ರೇರಿತ ದೇವಮಾನವನಾಗಿ ಬದಲಾಗಿ ಸಾವಿರಾರು ಜನರನ್ನ ಮರಳು ಮಾಡಿದ್ದ. ಪತ್ನಿಯನ್ನೂ ಪಕ್ಕದಲ್ಲೇ ಕೂರಿಸಿಕೊಂಡು ಸತ್ಸಂಗ ನಡೆಸ್ತಿದ್ದ ಈತನಿಗೆ ಕೆಲ ರಾಜಕಾರಣಿಗಳೂ ಫಾಲೋವರ್ಸ್ ಆಗಿದ್ರಂತೆ.
ಇದನ್ನೂ ಓದಿ: 45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದ್ರೂ ಬದುಕಿದ ಯುವಕ.. ಶಾಕ್ ಆದ ವೈದ್ಯರು!
ಸದ್ಯ, ಈ ಬಾಬಾನ ಚೆಲ್ಲಾಟ ನೂರಾರು ಮಂದಿಯ ಜೀವಕ್ಕೆ ಪ್ರಾಣಸಂಕಟ ತಂದಿಟ್ಟಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಲೇ ಇದೆ. ಹೀಗೆ ಅಮಾಯಕರ ಸಾವಿಗೆ ಪರೋಕ್ಷ ಕಾರಣ ಈ ಬಾಬಾ. ಮತ್ತು ಕೆಲವು ಟೊಳ್ಳು ನಂಬಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ