/newsfirstlive-kannada/media/post_attachments/wp-content/uploads/2025/05/Donald-Trump.jpg)
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಸದಾ ಸುದ್ದಿಯಲ್ಲಿರೋ ವಿಶ್ವದ ದೊಡ್ಡಣ್ಣ. ಅದರೆ ಏಲಕ್ಕಿ ನಾಡಲ್ಲಿ ಟ್ರಂಪ್ ಹೆಸರು ಬೇರೆಯದ್ದೇ ವಿಚಾರಕ್ಕೆ ಸುದ್ದಿಯಲ್ಲಿದೆ. ಸೈಬರ್ ಖದೀಮರು ಟ್ರಂಪ್ ಹೆಸರಲ್ಲಿ ಆ್ಯಪ್ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ನೂರಾರು ಜನರ ಹಣವನ್ನ ನುಂಗಿ ನೀರು ಕುಡಿದಿದ್ದಾರೆ.
ಇದನ್ನೂ ಓದಿ: Monsoon rain ಕರ್ನಾಟಕದಲ್ಲಿ ಮಾತ್ರ ಮಳೆನಾ.. ಪಕ್ಕದ ರಾಜ್ಯಗಳ ಪರಿಸ್ಥಿತಿಗಳು ಹೇಗಿವೆ..?
ಮೋಸ ಹೋಗೋರು ಎಲ್ಲಿವರೆಗೂ ಇರ್ತಾರೋ.. ಮೋಸ ಮಾಡೋರು ಅಲ್ಲಿವರೆಗೂ ಮಾಡ್ತಾನೆ ಇರ್ತಾರೆ. ಇದೀಗ ಮೋಸ ಮಾಡೋ ವಿಧಾನ ಕೂಡಾ ಬದಲಾಗಿದೆ. ಆನ್‌ಲೈನ್ ಮೂಲಕ ಜನರಿಗೆ ಟೋಪಿ ಹಾಕೋದು ಹೆಚ್ಚಾಗಿದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಬಳಸಿ ಜನರ ಹಣಕ್ಕೆ ಖದೀಮರು ಕನ್ನ ಹಾಕಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನೂ ಸೈಬರ್ ಕಳ್ಳರು ಬಿಟ್ಟಿಲ್ಲ. ಟ್ರಂಪ್ ಹೆಸರಿನಲ್ಲಿ ಹಲವಾರು ಜನರಿಗೆ ಸೈಬರ್ ಖದೀಮರು ಕೋಟ್ಯಾಂತರ ರುಪಾಯಿ ವಂಚನೆ ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೈಬರ್ ವಂಚಕರು ವಂಚನೆ ಮಾಡಿದ್ದಾರೆ. ಸದ್ಯ ಹಾವೇರಿ ಜಿಲ್ಲೆಯಲ್ಲಿಯೇ 15ಕ್ಕೂ ಅಧಿಕ ಜನರು ವಂಚನೆ ಒಳಗಾಗಿದ್ದಾರೆ.
ನಕಲಿ ‘ಟ್ರಂಪ್ ಆ್ಯಪ್’ ವಂಚನೆ
ಟ್ರಂಪ್ ಆ್ಯಪ್ ಕುರಿತ ಜಾಹೀರಾತನ್ನ ಸೈಬರ್ ಖದೀಮರು ಹರಿಬಿಟ್ಟಿದ್ರು. ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ಹಾಕಿ ಹಣದ ಆಮಿಷ ಒಡ್ಡಿದ್ದಾರೆ. ಸೈಬರ್ ಕಳ್ಳರು ಜಾಹೀರಾತಿನಲ್ಲಿ ನೀಡಿದ ನಂಬರ್‌ಗಳಿಗೆ ನೂರಾರು ಜನರು ಕರೆ ಮಾಡಿದ್ದಾರೆ. ಈ ವೇಳೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮೊದಲು ಟ್ರಂಪ್ ಆ್ಯಪ್‌ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ, ಬಡ್ಡಿ ಹಣ ನೀಡಿ ಸೈಬರ್ ವಂಚಕರು ನಂಬಿಕೆ ಗಳಿಸಿಕೊಂಡಿದ್ದರು. ಬಳಿಕ ಜನ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು ಕೋಟ್ಯಾಂತರ ರೂಪಾಯಿ ಹಣ ಹಾಕಿದ್ದೇ ತಡ ಸೈಬರ್ ಕಳ್ಳರು ಆ್ಯಪ್ ಲಾಕ್ ಮಾಡಿದ್ದಾರೆ. ವ್ಯಾಪಾರಸ್ಥರು, ವಕೀಲರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಸೈಬರ್ ವಂಚಕರು ಟೋಪಿಯಾಕಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣಗೆ ಮಾಜಿ ಕಾರು ಚಾಲಕನಿಂದ ಮತ್ತೆ ಸಂಕಷ್ಟ.. ಕೋರ್ಟ್ಗೆ ನೀಡಿದ ಹೇಳಿಕೆಯಲ್ಲಿ ಏನೇನಿದೆ..?
ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಒಂದು ಪ್ರಕರಣ ದಾಖಲಾಗಿದೆ. ಆನ್‌ಲೈನ್‌ನಲ್ಲಿ ನಕಲಿ ಆ್ಯಪ್‌ಗಳ ಮೂಲಕ ಹಣ ಲೂಟಿ ಮಾಡುವ ಖದೀಮರ ಸಂಖ್ಯೆ ಹೆಚ್ಚಾಗಿದೆ. ಇದ್ರಿಂದ ಜನರು ಸಹ ಜಾಗೃತರಾಗಬೇಕು. ಯಾವುದೇ ಆ್ಯಪ್ಗಳನ್ನು ಬಳಸುವ ಮುನ್ನ ಹುಷಾರಾಗಿರಬೇಕು ಅಂತ ಹಾವೇರಿ ಎಸ್‌ಪಿ ಅಂಶುಕುಮಾರ್ ಜಾಗೃತಿ ಮೂಡಿಸಿದ್ದಾರೆ. ಸದ್ಯ ಟ್ರಂಪ್ ಆ್ಯಪ್ ಬಂದ್ ಮಾಡಲಾಗಿದ್ದು, ನೊಂದುವರು ದೂರ ಕೊಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಅದೇನೆ ಇರಲಿ ಆನ್‌ಲೈನ್ ನಕಲಿ ಆ್ಯಪ್ ಬಳಸಿ ಹಣ ಹಾಕೋ ಮುನ್ನ ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ