newsfirstkannada.com

Breaking News: ಇಸ್ರೇಲ್ ಸೇನೆಯಿಂದ ಘೋರ ಹತ್ಯಾಕಾಂಡ; 150ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ದಾರುಣ ಸಾವು

Share :

Published February 29, 2024 at 2:17pm

Update February 29, 2024 at 2:18pm

  ಇಸ್ರೇಲ್ ನಡೆಸಿದ ದಾಳಿಯಿಂದ 300ಕ್ಕೂ ಹೆಚ್ಚು ಮಂದಿ ಗಂಭೀರ

  ಸಾವು ನೋವುಗಳು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ

  ಗಾಜಾ ಸ್ಟ್ರಿಪ್​ನಲ್ಲಿ ಭಾರೀ ಬಿಕ್ಕಟ್ಟು, 2023, ಅಕ್ಟೋಬರ್​ನಿಂದ ಯುದ್ಧ

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧದ ಬಿಕ್ಕಟ್ಟು ಇನ್ನೊಂದು ಸ್ವರೂಪಕ್ಕೆ ತಿರುಗಿದೆ. ಗಾಜಾ ಸ್ಟ್ರಿಪ್​ನ ಅಲ್ ರಶೀದ್​ನಲ್ಲಿ ದೊಡ್ಡ ಹತ್ಯಾಖಂಡವೇ ನಡೆದಿದೆ ಎನ್ನಲಾಗಿದ್ದು, ಬರೋಬ್ಬರಿ 150 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಸ್ರೇಲ್​ನ ಭಯಾನಕ ದಾಳಿಯಿಂದ ಬರೋಬ್ಬರಿ 300ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ. ಮಾನವೀಯ ಸಹಾಯಕ್ಕಾಗಿ ಕಾಯುತ್ತಿದ್ದಾಗ ಇಸ್ರೇಲ್ ಸೇನೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ. ಘೋರ ದಾಳಿ ಹಿನ್ನೆಲೆಯಲ್ಲಿ ಗಾಜಾದಲ್ಲಿ ಭಾರೀ ಬಿಕ್ಕಟ್ಟು ಸಂಭವಿಸಿದೆ. ಸಾವು ನೋವುಗಳು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಗಾಜಾ ಸ್ಟ್ರಿಪ್​ನಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಅಕ್ಟೋಬರ್ 7, 2023ರಿಂದ ಯುದ್ಧ ಶುರುವಾಗಿದೆ. ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ಪರಿಣಾಮ ಎರಡೂ ದೇಶಗಳು ಪರಸ್ಪರ ಅಟ್ಯಾಕ್ ಮಾಡಿಕೊಳ್ತಿವೆ. ಭೀಕರ ಯುದ್ಧದ ಬಾಂಬ್ ದಾಳಿ, ವೈಮಾನಿಕ ದಾಳಿ, ನೇರ ದಾಳಿಯಿಂದಾಗಿ ಇಲ್ಲಿವರೆಗೆ 15,500 ಮಂದಿ ಸಾವನ್ನಪ್ಪಿದ್ದಾರೆ. ಲೆಕ್ಕಕ್ಕೆ ಸಿಗದ ಪ್ರಮಾಣದಲ್ಲಿ ಜೀವ ಹಾನಿ ಸೇರಿದಂತೆ ಸಾರ್ವಜನಿಕವಾಗಿ ನಷ್ಟ ಆಗಿದೆ. ಹೀಗಿದ್ದೂ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುತ್ತಲೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಇಸ್ರೇಲ್ ಸೇನೆಯಿಂದ ಘೋರ ಹತ್ಯಾಕಾಂಡ; 150ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ದಾರುಣ ಸಾವು

https://newsfirstlive.com/wp-content/uploads/2024/02/ISREL-7.jpg

Load More