ಮುರುಕು ಮಂಟಪದಂತಾದ ಮಯನ್ಮಾರ್​, ಥೈಲ್ಯಾಂಡ್​! ಭೀಕರ ಭೂಕಂಪಕ್ಕೆ 1700ಕ್ಕೂ ಹೆಚ್ಚು ಬಲಿ

author-image
Gopal Kulkarni
Updated On
ಮುರುಕು ಮಂಟಪದಂತಾದ ಮಯನ್ಮಾರ್​, ಥೈಲ್ಯಾಂಡ್​! ಭೀಕರ ಭೂಕಂಪಕ್ಕೆ 1700ಕ್ಕೂ ಹೆಚ್ಚು ಬಲಿ
Advertisment
  • ಯಮರೂಪಿ ಭೂಕಂಪಕ್ಕೆ 1700ಕ್ಕೂ ಅಧಿಕ ಬಲಿ
  • ಮಯನ್ಮಾರ್​ನಲ್ಲಿ ಕಟ್ಟಡದಲ್ಲಿ ಸಿಲುಕಿದ್ದ ಗರ್ಭಿಣಿ ರಕ್ಷಣೆ
  • ಮಯನ್ಮಾರ್‌ ಭೂಕಂಪದ ಬಗ್ಗೆ ಅಮೆರಿಕ ಶಾಕಿಂಗ್​ ವರದಿ

ಭೂಲೋಕದ ಸ್ವರ್ಗದಂತಿದ್ದ ಬ್ಯಾಂಕಾಕ್​ ಭೂಕಂಪದ ಹೊಡೆತಕ್ಕೆ ಸಾವಿನ ಮನೆಯಾಗಿದೆ.. ಮಾಯಾನಗರಿ ಮಯನ್ಮಾರ್​ನಲ್ಲಿ ಮಸಣದ ಮೌನ ಆವರಿಸಿದೆ. ಥೈಲ್ಯಾಂಡ್​ ಸಹ ಭೂಕಂಪದ ಹೊಡೆತಕ್ಕೆ ತಣ್ಣಗಾಗಿದೆ. ಕೆದಕಿದಷ್ಟು ಮೃತದೇಹಗಳು ಪತ್ತೆಯಾಗ್ತಿದ್ದು ರಕ್ಷಣಾ ಕಾರ್ಯ ಮುಗಿಯದ ಕತೆಯಾಗಿದೆ.

ಮಯನ್ಮಾರ್‌ನಲ್ಲಿ ಸಂಭವಿಸಿರುವ ಭೂಕಂಪ ಜನರನ್ನ ಅಕ್ಷರಶಃ ಆತಂಕಕ್ಕೆ ದೂಡಿದೆ. ಬೃಹತ್ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವುಗಳ ನೋವು ಸಾವಿರಾರು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭೂಲೋಕದ ಸ್ವರ್ಗದಂತಿದ್ದ ಬ್ಯಾಕಾಂಕ್​, ಮಯನ್ಮಾರ್​, ಥೈಲ್ಯಾಂಡ್ ನರಕವಾಗಿ ಸಾವು-ನೋವಿನ ಕೂಪವಾಗಿದೆ. ಯಮರೂಪಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಲೇ ಇದೆ.

ಇದನ್ನೂ ಓದಿ:ಪ್ರಬಲ ಭೂಕಂಪಕ್ಕೆ ಬೆದರಿದ ಮ್ಯಾನ್ಮಾರ್, ಥೈಲ್ಯಾಂಡ್​! 1,650ಕ್ಕೂ ಹೆಚ್ಚು ಸಾವು, 3,400ಕ್ಕೂ ಹೆಚ್ಚು ಮಂದಿಗೆ ಗಾಯ

ಮಯನ್ಮಾರ್‌ ಮತ್ತು ಥೈಲ್ಯಾಂಡ್​ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಏರಿಕೆಯಾಗ್ತಲೇ ಇದೆ. ನಿನ್ನೆಗೆ 1500ರ ಗಡಿದಾಟಿದ್ದ ಸಾವಿನ ಸಂಖ್ಯೆ, ಸದ್ಯ 1700ರ ಗಡಿಯನ್ನೂ ದಾಟಿದೆ. ಇನ್ನೂ ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಭೂಕಂಪದಲ್ಲಿ ಸುಮಾರು 3,400ಕ್ಕೂ ಅಧಿಕ ಜನರು ಗಾಯಗೊಂಡಿದ್ದರೆ, 300ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

publive-image

ಬ್ಯಾಂಕಾಕ್‌ನಲ್ಲಿಯೂ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ
ಬ್ಯಾಂಕಾಕ್‌ನಲ್ಲಿಯೂ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿದೆ..ಬ್ಯಾಂಕಾಕ್ ಮೆಟ್ರೋಪಾಲಿಟನ್ ಪ್ರಾಧಿಕಾರ, ಭೂಕಂಪದಲ್ಲಿ 32 ಜನರು ಗಾಯಗೊಂಡಿದ್ದು ಮತ್ತು 82 ಜನರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ ಅಂತ ತಿಳಿಸಿದೆ. ಭೂಕಂಪದ ವೇಳೆ ಮಯನ್ಮಾರ್​ನ ಕಟ್ಟಡವೊಂದರಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಯೋರ್ವಳನ್ನ ರಕ್ಷಣಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.. ಭೂಕಂಪದ ಬಳಿಕ ಕಳೆದ ಎರಡು ದಿನಗಳಿಂದ ಕಟ್ಟಡಲ್ಲಿ ಸಿಲುಕಿಕೊಂಡಿದ್ದ ಮಹಿಳೆ ರಕ್ಷಣಾ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾಳೆ. ನಿನ್ನೆ ಮಯನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ಬಳಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರು ಆತಂಕ್ಕೀಡಾಗಿದ್ದಾರೆ.. ಮಾರ್ಚ್ 28ರ ಶುಕ್ರವಾರದಂದು ಸಂಭವಿಸಿದೆ

ಮಯನ್ಮಾರ್​ನಲ್ಲಿ ಮತ್ತೆ ಕಂಪಿಸಿದ ಭೂಮಿ

7.7 ತೀವ್ರತೆಯ ಭೂಕಂಪದ ಬೆನ್ನಲ್ಲೇ ಮತ್ತೆ ನಿನ್ನೆ ಭೂಮಿ ಕಂಪಿಸಿರೋದು ಮಂಡಲೆ ಜನರ ಮಂಡೆಯನ್ನ ಬಿಸಿಯಾಗಿಸಿದೆ.ಮಯನ್ಮಾರ್‌ ಭೂಕಂಪದ ಬಗ್ಗೆ ಅಮೆರಿಕ ಭೂವೈಜ್ಞಾನಿಗಳು ಶಾಕಿಂಗ್ ವರದಿಯೊಂದನ್ನ ನೀಡಿದ್ದಾರೆ.. ಮಯನ್ಮಾರ್​ನಲ್ಲಿ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 10,000ಕ್ಕೆ ಏರಬಹುದು ಎಂದು ಅಮೆರಿಕಾ ವಿಜ್ಞಾನಿಗಳು ಅಂದಾಜಿಸಿದ್ದಾರೆ.. ಇನ್ನೂ ಮಯನ್ಮಾರ್‌ ಭೂಕಂಪದ ಬಗ್ಗೆ ಚೀನಾ ಭೂವಿಜ್ಞಾನಿಗಳ ತಂಡ ಸಹ ಅನ್ವೇಷಣೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ.. BBMP ಕಸದ ಲಾರಿಗೆ ಬೆಂಕಿ; ತಂದೆ-ಮಗನ ಘೋರ ದುರಂತ!

publive-image

ಮಯನ್ಮಾರ್​ಗೆ ಜಗತ್ತಿನೆಲ್ಲೆಡೆಯಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಭಾರತದಿಂದ ಮಯನ್ಮಾರ್‌ಗೆ ಎರಡು ಸಿ-17 ವಿಮಾನಗಳ ಮೂಲಕ ಆಹಾರ ಸಾಮಗ್ರಿ ಮತ್ತು ರಕ್ಷಣಾ ವಸ್ತುಗಳನ್ನ ತಲುಪಿಸಲಾಗಿದೆ.. ಭಾರತ, ಚೀನಾ, ಅಮೆರಿಕ ಸೇರಿದಂತೆ ಇತರೆ ದೊಡ್ಡ ದೇಶಗಳು ಬ್ಯಾಂಕಾಕ್​ಗೆ ಸಹಾಯಹಸ್ತ ನೀಡಲು ಮುಂದಾಗಿವೆ. ಸೂತಕದ ಮನೆಯಾಗಿರೋ ಬ್ಯಾಕಾಂಕ್​, ಮಯನ್ಮಾರ್​, ಥೈಲ್ಯಾಂಡ್​ನಲ್ಲಿ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ.. ಸಾವು-ನೋವಿಗೆ ಇನ್ನಾದ್ರೂ ಇತಿಶ್ರೀ ಹಾಡು ದೇವರೇ ಅಂತ ಇಡೀ ವಿಶ್ವವೇ ಪ್ರಾರ್ಥಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment