/newsfirstlive-kannada/media/post_attachments/wp-content/uploads/2024/05/Air-India.jpg)
ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಸುಮಾರು 70 ವಿಮಾನಗಳನ್ನು ರದ್ದುಗೊಳಿಸಿದೆ. ಇದಕ್ಕೆ ಸಿಬ್ಬಂದಿಗಳ ಸಾಮೂಹಿಕ ರಜೆ ಪ್ರಮುಖ ಕಾರಣವಾಗಿದೆ.
ಏರ್​ ಇಂಡಿಯಾ ವಕ್ತಾರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ನಮ್ಮ ಕ್ಯಾಬಿನ್​ ಸಿಬ್ಬಂದಿ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ. ಕಳೆದ ರಾತ್ರಿಯಿಂದ ವಿಮಾನ ವಿಳಂಬ ಮತ್ತು ರದ್ದತಿಗೆ ಇದು ಕಾರಣವಾಗಿದೆ. ಈ ಘಟನೆಯ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಂಡು ಸಿಬ್ಬಂದಿಯ ಜೊತೆಗಿದ್ದೇವೆ. ಅವರಿಗೆ ಉಂಟಾದ ಅನಾನುಕೂಲಯನ್ನು ಪರಿಹರಿಸುತ್ತೇವೆ’ ಎಂದು ಹೇಳಿದ್ದಾರೆ.
ಏಪ್ರಿಲ್​ ತಿಂಗಳ ಕೊನೆಯಲ್ಲಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಕ್ಯಾಬಿನ್​ ಸಿಬ್ಬಂದಿಯ ಒಂದು ವಿಭಾಗವು ಏರ್​ಲೈನ್ಸ್​ ಅನ್ನು ತಪ್ಪಾಗಿ ನಿರ್ವಹಿಸುತ್ತಿದೆ. ನೌಕರರನ್ನು ಸಮಾನವಾಗಿ ಕಾಣಲು ವಿಫಲವಾಗಿದೆ ಎಂದು ಹೇಳಿತ್ತು. ಇದೇ ಕಾರಣಕ್ಕೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಿದ್ದಾರೆ ಎನ್ನಲಾಗುತ್ತಿದೆ.
More than 70 #AirIndia flights,domestic and international,were cancelled from May 7 night and several others were delayed. Around 300 cabin crew members mostly seniors alleged that the airline is being mismanaged and there is a lack of equality in the staff. pic.twitter.com/JjthJhtUzJ
— Smriti Sharma (@SmritiSharma_)
More than 70 #AirIndia flights,domestic and international,were cancelled from May 7 night and several others were delayed. Around 300 cabin crew members mostly seniors alleged that the airline is being mismanaged and there is a lack of equality in the staff. pic.twitter.com/JjthJhtUzJ
— Smriti Sharma (@SmritiSharma_) May 8, 2024
">May 8, 2024
ಇನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​​ ಉದ್ಯೋಗಿಗಳ ಸಂಘ ‘ಸುಮಾರು 300 ಕ್ಯಾಬಿನ್​ ಸಿಬ್ಬಂದಿಯನ್ನು ಹೊಂದಿದೆ ಮತ್ತು ಮಾನ್ಯತೆ ಪಡೆದ ಒಕ್ಕೂಟವಾಗಿದೆ. ಆದರೆ ಇದರಲ್ಲಿ ಹೆಚ್ಚಿನವರು ಹಿರಿಯರಿದ್ದು ವ್ಯವಹಾರವನ್ನಯ ತಪ್ಪಾಗಿ ನಿರ್ವಹಿಸುತ್ತಿರುವುದು ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ.. ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ
@airindia@AAI_Official@aaikolairport@DGCAIndia Disgusting service by @AirIndiaX. Flight I5-554 CCU-BLR was scheduled for departure at 1615. It is now delayed to 2040. Reason for delay provided by ground staff - Hail storm in Imphal has dented the aircraft. #airindiapic.twitter.com/OWll16bvh7
— Akash Chaudhuri (@akash_chaudhuri)
@airindia@AAI_Official@aaikolairport@DGCAIndia Disgusting service by @AirIndiaX. Flight I5-554 CCU-BLR was scheduled for departure at 1615. It is now delayed to 2040. Reason for delay provided by ground staff - Hail storm in Imphal has dented the aircraft. #airindiapic.twitter.com/OWll16bvh7
— Akash Chaudhuri (@akash_chaudhuri) May 5, 2024
">May 5, 2024
ಅತ್ತ ವಿಮಾನ ಪ್ರಯಾಣಿಕರು ಕೂಡ ಈ ವಿಚಾರಕ್ಕೆ ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದಾರೆ. ‘ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ವಿಮಾನ ಪ್ರಯಾಣ ರದ್ದಾಗಿರುವ ಕಾರಣ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಅಥವಾ ಮತ್ತೊಂದು ದಿನಕ್ಕೆ ಮರು ಹೊಂದಿಕೆ ಮಾಡುವುದಾಗಿ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us