/newsfirstlive-kannada/media/post_attachments/wp-content/uploads/2025/01/Saif-Ali-Khan-News.jpg)
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಇತ್ತೀಚೆಗೆ ಮಾರಣಾಂತಿಕವಾಗಿ ಚಾಕುವಿನಿಂದ ಹಲ್ಲೆ ನಡೆದಿತ್ತು.ಚಾಕುವಿನ ಇರಿತದ ತೀವ್ರತೆ ಎಷ್ಟು ಇತ್ತೆಂದರೆ ಅವರ ಬೆನ್ನಿನಲ್ಲಿ ಎರಡು ಇಂಚುಗಳಷ್ಟು ಉದ್ದ ಚಾಕುವಿನ ತುಂಡು ಉಳಿದುಕೊಂಡಿತ್ತು. ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸೈಫ್ ವಾಪಸ್ ಮನೆಗೆ ಸೇರಿದ್ದಾರೆ. ಮತ್ತೊಂದು ಕಡೆ ಪೊಲೀಸರು ತಮ್ಮ ತನಿಖೆಯನ್ನು ಜಾರಿಯಲ್ಲಿಟ್ಟಿದ್ದಾರೆ. ಸದ್ಯ ಪೊಲೀಸರ ತನಿಖೆಯ ಪ್ರಕಾರ ಪ್ರಕರಣಕ್ಕೆ ಹೊಸ ತಿರುವುವೊಂದು ಸಿಕ್ಕಿದೆ. ಸೈಫ್ ಅಲಿ ಖಾನ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಒಬ್ಬರಲ್ಲ ಒಬ್ಬರಿಗಿಂತ ಹೆಚ್ಚು ಜನ ಪಾಲ್ಗೊಂಡಿದ್ದಾರೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಜನವರಿ 19 ರಂದು ಸೈಫ್ ಅಲಿಖಾನ್ ಮೇಲೆ ಭೀಕರವಾಗಿ ಚಾಕುವಿನಿಂದ ಹಲ್ಲೆಯಾಗಿತ್ತು. ಘಟನೆ ನಡೆದ ಮೂರು ದಿನಗಳ ಬಳಿಕ ಮುಂಬೈ ಪೊಲೀಸರು ಷರೀಫುಲ್ಲಾ ಇಸ್ಲಾಮ್​ ಶೆಹ್ಜಾದ್ ಮೊಹಮ್ಮದ್ ರೋಹಿಲ್ಲಾ ಅಮಿನ್ ಫಕೀರ್ ಅಲಿಯಾಸ್ ವಿಜಯ್ ದಾಸ್ ಎಂಬ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಿದ್ದರು. ಮಹಾರಾಷ್ಟ್ರದ ಠಾಣೆ ಕೋರ್ಟ್​ ಶರಿಫುಲ್​ನ ಪೊಲೀಸ್ ಕಸ್ಟಡಿಯನ್ನು ಜನವರಿ 29ರ ವರೆಗೆ ವಿಸ್ತರಿಸಿದೆ.
ಇದನ್ನೂ ಓದಿ:ಅಂದು ರಾತ್ರಿ ನಿಜಕ್ಕೂ ಆಗಿದ್ದೇನು? ಪೊಲೀಸರ ಮುಂದೆ ಅಸಲಿ ವಿಚಾರ ಹೇಳಿದ ಸೈಫ್..!
ಪೊಲೀಸ್ ಕಸ್ಟಡಿಯಲ್ಲಿರು ಆರೋಪಿ ಷರೀಫುಲ್ಲಾನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಒಂದು ಪ್ರಕರಣದಲ್ಲಿ ಈತ ಒಬ್ಬನೇ ಶಾಮೀಲಾಗಿಲ್ಲ. ಇನ್ನು ಹಲವು ಜನರು ಶಾಮೀಲಾಗಿರುವ ಸಂಭಾವ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಬಾಂಗ್ಲಾದೇಶಿ ನಿವಾಸಿಯಾದ ಆರೋಪಿ ಷರೀಫುಲ್ಲಾ ಪೊಲೀಸರ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಯಾವುದನ್ನೂ ಬಾಯಿ ಬಿಡುತ್ತಿಲ್ಲ ಎಂಬುದು ತಿಳಿದು ಬಂದಿದೆ. ತಾನು ಯಾವ ಅಂಗಡಿಯಿಂದ ಚಾಕುವನ್ನು ತೆಗೆದುಕೊಂಡು ಬಂದೆ ಎಂಬುದನ್ನು ಕೂಡ ಆತ ಬಾಯಿಬಿಡುತ್ತಿಲ್ಲವಂತೆ.
ಹೀಗೆ ತನಿಖೆಗೆ ಆತ ನೀಡುತ್ತಿರುವ ಅಸಹಕಾರ ಪೊಲೀಸರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಈ ಪ್ರಕರಣದಲ್ಲಿ ಷರೀಫುಲ್ಲಾ ಜೊತೆ ಮತ್ತೊಬ್ಬರು ಶಾಮೀಲಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದು. ಅದೇ ಆ್ಯಂಗಲ್​ನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us