/newsfirstlive-kannada/media/post_attachments/wp-content/uploads/2024/08/KL_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 18ನೇ ಐಪಿಎಲ್ ಸೀಸನ್ಗೂ ಮುನ್ನ ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 10 ಐಪಿಎಲ್ ತಂಡಗಳು ಭಾಗಿಯಾಗಲಿದ್ದು, ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲಿವೆ.
ಐಪಿಎಲ್ ತಂಡಗಳು ರೀಟೈನ್ ಲಿಸ್ಟ್ ಸಲ್ಲಿಸಲು ಅಕ್ಟೋಬರ್ 31ನೇ ತಾರೀಕು ಕೊನೆಯ ದಿನವಾಗಿತ್ತು. ಈಗಾಗಲೇ 10 ಐಪಿಎಲ್ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಿವೆ. ಮಾಲೀಕರು ಅಳೆದು ತೂಗಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿದ್ದಾರೆ. ರಿಲೀಸ್ ಮಾಡಲಾದ ಆಟಗಾರರನ್ನು ಪಟ್ಟಿ ಮಾಡುವ ಕೆಲಸ ಬಿಸಿಸಿಐ ಮಾಡುತ್ತಿದೆ. ಈ ಸಲ ಮೆಗಾ ಹರಾಜು 24 ಮತ್ತು 25ನೇ ತಾರೀಕು ನಡೆಯುವ ಸಾಧ್ಯತೆ ಇದೆ.
ಹರಾಜಿಗೆ ರಿಜಿಸ್ಟರ್ ಮಾಡಿಸಿರೋ ಭಾರತೀಯ ಆಟಗಾರರ ಸಂಖ್ಯೆ ಎಷ್ಟು?
ಈ ಸಲ ಹರಾಜಿಗೆ ಸ್ಟಾರ್ ಆಟಗಾರರೇ ಎಂಟ್ರಿ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟ ರಿಷಬ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರ ಬಂದ ಕನ್ನಡಿಗ ಕೆ.ಎಲ್ ರಾಹುಲ್, ಕೆಕೆಆರ್ನಿಂದ ಹೊರಬಿದ್ದ ಶ್ರೇಯಸ್ ಅಯ್ಯರ್, ಮುಂಬೈ ಇಂಡಿಯನ್ಸ್ ಕೈ ಬಿಟ್ಟ ಇಶಾನ್ ಕಿಶನ್ ಸೇರಿ ಹಲವು ಸ್ಟಾರ್ ಆಟಗಾರರು ಮೆಗಾ ಹರಾಜಿಗೆ ಬಂದಿದ್ದಾರೆ. ಅನ್‌ಕ್ಯಾಪ್ಡ್ ಸೇರಿದಂತೆ ಬರೋಬ್ಬರಿ 1165 ಮಂದಿ ಭಾರತೀಯ ಆಟಗಾರರು ಐಪಿಎಲ್ ಹರಾಜಿಗೆ ರಿಜಿಸ್ಟರ್ ಮಾಡಿಸಿದ್ದಾರೆ. ಈ ಪಟ್ಟಿ 10 ಫ್ರಾಂಚೈಸಿಗಳಿಗೆ ನೀಡಿ ನಂತರ ಫೈನಲ್ ಲಿಸ್ಟ್ ರೆಡಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ವಿದೇಶಿ ಆಟಗಾರರ ಸಂಖ್ಯೆ ಎಷ್ಟು?
ಈ ಬಾರಿ ಹರಾಜಿನಲ್ಲಿ 16 ದೇಶಗಳ ಒಟ್ಟು 409 ಆಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರೋ 272 ಆಟಗಾರರು ಇದ್ದಾರೆ. 104 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ.
ಮೆಗಾ ಹರಾಜು ಈ ಸಲ ಭಾರೀ ಕುತೂಹಲದಿಂದ ಕೂಡಿದೆ. ಎಲ್ಲಾ ತಂಡಗಳು ಬಲಿಷ್ಠ ಟೀಮ್ ಕಟ್ಟಲು ಮುಂದಾಗಿವೆ. ಹಾಗಾಗಿ ಸಮರ್ಥ ಆಟಗಾರರಿಗೆ ಮಣೆ ಹಾಕಲು ತಯಾರಿ ನಡೆಸಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಬಲಿಷ್ಠ ಆಟಗಾರರನ್ನೇ ಖರೀದಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ:ಮೆಗಾ ಹರಾಜಿನಲ್ಲಿ ಈ ಮೂವರೇ ಆರ್ಸಿಬಿ ಟಾರ್ಗೆಟ್; ಕಪ್ ಗೆಲ್ಲಲು ಇವ್ರು ಬೇಕೇ ಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ