/newsfirstlive-kannada/media/post_attachments/wp-content/uploads/2025/06/RCB-30.jpg)
ಅತ್ತ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಂಡಿದೆ. ಕಾರ್ಯದರ್ಶಿ ಎ.ಶಂಕರ್, ಖಜಾಂಚಿ E.S ಜೈರಾಮ್ ರಾಜೀನಾಮೆ ಕೊಟ್ಟಿದ್ದು ಸಂಚಲನ ಸೃಷ್ಟಿಸಿದೆ. ಈ ನಡುವೆ ಕೆಎಸ್ಸಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಅವರ ಮಕ್ಕಳಿಗೆ ಹೀಗಾಗಿದ್ರೆ ಫೋಟೋ ತೆಗೆಸಿಕೊಳ್ತಿದ್ರಾ? CM, DCM ವಿರುದ್ಧ ಭೂಮಿಕ್ ತಂದೆ ಆಕ್ರೋಶ
ರಾಜೀನಾಮೆ ವಾಪಸ್ಗೆ ಒತ್ತಡ
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ KSCAಗೆ ಕಾರ್ಯದರ್ಶಿ ಎ.ಶಂಕರ್ ಹಾಗೂ ಖಜಾಂಚಿ E.S ಜೈರಾಮ್ ರಾಜೀನಾಮೆ ನೀಡಿದ್ದಾರೆ. ಆದ್ರೆ ರಾಜೀನಾಮೆ ಹಿಂಪಡೆಯಲು KSCA ಮ್ಯಾನೇಜಿಂಗ್ ಕಮಿಟಿ ಒತ್ತಡ ಹಾಕ್ತಿದೆ. ಇಬ್ಬರ ರಾಜೀನಾಮೆಯನ್ನ ವಾಪಸ್ ತೆಗೆದುಕೊಳ್ಳಿ ಎಂದು ಒತ್ತಡ ಹೇರ್ತಿದೆ ಎನ್ನಲಾಗಿದೆ.
ಯಾಕಂದ್ರೆ ಇವರ ಸ್ಥಾನಕ್ಕೆ ಮತ್ತೊಬ್ರು ಬಂದ್ರೆ ತನಿಖೆ ಕಷ್ಟವಾಗಲಿದೆ. ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳಾಗುತ್ತವೆ. ನೀವು ಅದೇ ಸ್ಥಾನದಲ್ಲಿದ್ದು ತನಿಖೆಗೆ ಸಹಕರಿಸಿ ಎಂದು ಒತ್ತಡ ಹಾಕಲಾಗಿತ್ತು. ಆದ್ರೆ ಅದನ್ನು ಇಬ್ಬರು ನಿರಾಕರಿಸಿದ ಹಿನ್ನೆಲೆ ಕೆಎಸ್ಸಿಎ ಹಂಗಾಮಿ ಕಾರ್ಯದರ್ಶಿ ಹಾಗೂ ಖಜಾಂಜಿಯನ್ನು ನೇಮಕ ಮಾಡಿದ್ದಾರೆ. ಹಂಗಾಮಿ ಕಾರ್ಯದರ್ಶಿಯಾಗಿ MS ವಿನಯ್ ಹಾಗೂ ಹಂಗಾಮಿ ಖಜಾಂಜಿಯಾಗಿ ಕೆ.ವಿ ಮಂಜುನಾಥ್ ರಾಜು ನೇಮಕ ಮಾಡಲಾಗಿದೆ. KSCAನಲ್ಲಿ ನಡೆದ ಮ್ಯಾನೇಜಿಂಗ್ ಕಮಿಟಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಹೃದಯಗೆದ್ದ ಕನ್ನಡಿಗರು.. ಐಪಿಎಲ್ನಲ್ಲಿ ಕರ್ನಾಟಕ ಪ್ಲೇಯರ್ಗಳದ್ದೇ ಪರಾಕ್ರಮ..!
KSCAಗೆ ‘ದಂಡಂ ದಶಗುಣಂ’ ಶಾಕ್ ಕೊಟ್ಟ ಬಿಬಿಎಂಪಿ
ಈ ಮಧ್ಯೆ ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಮಾಡಿ ಜಾಹೀರಾತು ತೆರಿಗೆ ವಂಚನೆ ಮಾಡಿದ ಆರೋಪವೂ ಕೆಎಸ್ಸಿಎ ವಿರುದ್ಧ ಕೇಳಿಬಂದಿದೆ. ಬಿಬಿಎಂಪಿ ಕಾನೂನಿನ ಪ್ರಕಾರ ಕ್ರೀಡಾಂಗಣದ ಒಳಗೆ ಅಥವಾ ಹೊರಗೆ ಜಾಹೀರಾತು ಹಾಕಿದ್ರೆ ತೆರಿಗೆ ಕಟ್ಟಬೇಕು. ಆದ್ರೆ ಕೆಎಸ್ಸಿಎ ಕಳೆದ ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯುವಾಗ ಎಲ್‌ಇಡಿ ಸೇರಿ ಅನೇಕ ಜಾಹೀರಾತು ಬೋರ್ಡ್‌ಗಳನ್ನ ಅಳವಡಿಕೆ ಮಾಡಿತ್ತು. ಆದ್ರೆ ಪಾಲಿಕೆಯಿಂದ ಜಾಹೀರಾತು ಅಳವಡಿಕೆಗೆ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಜಾಹೀರಾತು ಶುಲ್ಕದ ಜೊತೆ ದಂಡದ ಎಚ್ಚರಿಕೆ ನೀಡಿತ್ತು. ಮೇ 13 ರಂದು ನೋಟಿಸ್ ನೀಡಿದ್ರೂ KSCA ಡೋಂಟ್ ಕೇರ್ ಎಂದಿದೆ. ಸದ್ಯ ಇದು ಕೂಡ ಉರುಳಾಗಲಿದೆ.
ಹೆಚ್ಚಿನ ಪರಿಹಾರಕ್ಕಾಗಿ ಮಾನವ ಹಕ್ಕುಗಳ ಆಯೋಗ ಶಿಫಾರಸು
ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ 11 ಜನ ಅಮಾಯಕರ ಸಾವಾಗಿದೆ. ಅಭಿಮಾನಿಗಳ ಸಾವಿಗೆ ಸರ್ಕಾರ ಜವಾಬ್ದಾರಿ ಹೊರಬೇಕಾಗತ್ತೆ. ಹೀಗಾಗಿ ಮೃತರ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಸಾಕಾಗಲ್ಲ, ಹೆಚ್ಚಿನ ಪರಿಹಾರಕ್ಕಾಗಿ ಶಿಫಾರಸು ಮಾಡಲು ಮಾನವ ಹಕ್ಕುಗಳ ಆಯೋಗ ಸಿದ್ಧವಾಗಿದೆ.
ಇದನ್ನೂ ಓದಿ: ಗೋಯೆಂಕ ಮತ್ತೆ ಗರಂ.. ಪಂತ್ ಒಬ್ಬರೇ ಅಲ್ಲ LSGಯಲ್ಲಿ ಮೂವರ ತಲೆದಂಡ ಪಕ್ಕಾ..!
₹20 ಲಕ್ಷ ಪರಿಹಾರಕ್ಕೆ ಶಿಫಾರಸು
ಮೃತರ ಕುಟುಂಬದ ಪರಿಹಾರ ಮೊತ್ತ 20 ಲಕ್ಷ ರೂಪಾಯಿಗೆ ಹೆಚ್ಚಿಸಲು ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಲು ಸಿದ್ಧತೆ ನಡೆಸಿದೆ. ಒಬ್ಬರೇ ಮಕ್ಕಳಿರುವ ಪೋಷಕರು ಮಕ್ಕಳನ್ನು ಕಳೆದುಕೊಂಡಿದ್ರೆ ಅಥವಾ ಮೃತಪಟ್ಟವರೇ ಆ ಕುಟುಂಬಕ್ಕೆ ಆಧಾರವಾಗಿದ್ದಲ್ಲಿ ಆಯೋಗ ಹೆಚ್ಚಿನ ಪರಿಹಾರಕ್ಕೆ ಶಿಫಾರಸು ಮಾಡಲಿದೆ. ಮೃತಪಟ್ಟವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ರೆ ಅಮಾಯಕ ಫ್ಯಾನ್ಸ್ ಸಾವಿಗೆ ಸರ್ಕಾರ ಜವಾಬ್ದಾರಿ ಹೊರಬೇಕಾಗುತ್ತದೆ. ಸದ್ಯ ಘಟನೆ ಸಂಬಂಧ ಸುಮೋಟೋ ಕೇಸ್ ದಾಖಲಿಸಿರುವ ಆಯೋಗ, ಆರೋಗ್ಯ ಇಲಾಖೆ ಸೆಕ್ರೆಟರಿ, ಕೆಎಸ್ಸಿಎ ಆಡಳಿತ ಮಂಡಳಿ, ಪೊಲೀಸ್ ಕಮಿಷನರ್ಗೆ ನೋಟಿಸ್ ನೀಡಿದೆ. ಮೃತಪಟ್ಟವರ ಕುಟುಂಬಸ್ಥರ ಹೇಳಿಕೆ, ಗಾಯಾಳುಗಳ ಹೇಳಿಕೆ, ತನಿಖಾಧಿಕಾರಿಗಳಿಂದ ಘಟನೆಯ ಬಗ್ಗೆ ವಿವರಣೆ ಪಡೆದು ಹೆಚ್ಚಿನ ಪರಿಹಾರಕ್ಕೆ ಶಿಫಾರಸು ಮಾಡಲಿದೆ.
ಒಟ್ಟಾರೆ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ ಅಂದ್ಮೇಲೆ ಅದಕ್ಕಾಗಿ ಸಕಸ ರೀತಿಯಲ್ಲಿ ಸಜ್ಜಾಗಬೇಕು. ಭದ್ರತೆ ಮೇಲೆ ಹೆಚ್ಚಿನ ನಿಗಾ ಇಡಬೇಕು. ಆದ್ರೆ ಕೆಎಸ್ಸಿಎ ಆಗಲಿ ರಾಜ್ಯ ಸರ್ಕಾರವಾಗಲಿ ಯಾವುದರ ಬಗ್ಗೆಯೂ ಗಮನ ಹರಿಸಿಲ್ಲ. ಇದೆಲ್ಲದರಿಂದ ಕಾಲ್ತುಳಿತ ದುರಂತ ನಡೆದುಹೋಗಿದೆ.
ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ರಾಮ್ ಗೋಪಾಲ್ ವರ್ಮಾ ಕನ್ನಡ ವಿರೋಧಿ ಹೇಳಿಕೆ; ಗೋಲ್ಡನ್ ಸ್ಟಾರ್ ಗಣೇಶ್ ತಿರುಗೇಟು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ