/newsfirstlive-kannada/media/post_attachments/wp-content/uploads/2025/07/BYRATHI-BASAVARAJ.jpg)
ರೌಡಿಶೀಟರ್​​ ಬಿಕ್ಲು ಶಿವನ ಪ್ರಕರಣದ ತನಿಖೆ ಚುರುಕು ಪಡೆದಿದೆ. ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜ್​​ ಬುಡಕ್ಕೆ ಸದ್ಯ ಈ ಪ್ರಕರಣ ಬೆಂಕಿ ಹಾಕಿದೆ. ಅದ್ಯಾವಾಗ ಎಫ್​​ಐಆರ್​​​ನಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್​ ಹೆಸರು ಪ್ರಿಂಟ್​ ಆಯ್ತೋ ಸದ್ಯ ಪ್ರಕರಣಕ್ಕೆ ನೆಕ್ಸ್ಟ್​ ಲೆವೆಲ್​​ನಲ್ಲಿ ಸುದ್ದಿಯಾಗಿದೆ.
ಹೈಕೋರ್ಟ್​ ಸೂಚನೆಯಂತೆ ಶಾಸಕ ಬೈರತಿ ಬಸವರಾಜ್​, ಬಿಕ್ಲು ಕೇಸ್​ ಸಂಬಂಧ ಪೊಲೀಸರ ವಿಚಾರಣೆಗೆ ಹಾಜರಾದ್ರು.. ತನಿಖಾಧಿಕಾರಿಯು ಬೈರತಿ ಬಸವರಾಜ್​ರನ್ನು ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ರು. ಈ ವೇಳೆ ತನಿಖಾಧಿಕಾರಿಯು ಹತ್ತಾರು ಪ್ರಶ್ನೆಗಳು ಕೇಳಿ, ಶಾಸಕರಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಹಸಿ ಬೆಳ್ಳುಳ್ಳಿ ತಿನ್ನುವವರೇ ಎಚ್ಚರ.. ನೀವು ಒಂದು ದಿನಕ್ಕೆ ಎಷ್ಟು ಗಾರ್ಲಿಕ್​ ತಿನ್ನಬಹುದು..?
‘ಬೈರತಿ’ಗೆ ಪೊಲೀಸರ ಪ್ರಶ್ನಾವಳಿ!
- ಈ ಹಿಂದೆ ಬಿಕ್ಲು ಶಿವ ನಿಮ್ಮ ಮೇಲೆ ದೂರು ಕೊಟ್ಟಿದ್ದು ಯಾಕೆ?
- ಆತನಿಗೂ ನಿಮಗೂ ಭೂ ವಿವಾದ ಬಗ್ಗೆ ಮಾತುಕತೆ ಆಗಿತ್ತಾ?
- ನೀವು ಆತನಿಗೆ ಹೆದರಿಸಲು ನಿಮ್ಮ ಆಪ್ತ ಜಗ್ಗನಿಗೆ ಹೇಳಿದ್ರಾ?
- ಅಟ್ಯಾಕ್ ಮಾಡುವ ಮುನ್ನ ನಿಮ್ಮನ್ನ ಭೇಟಿಯಾಗಿದ್ರಾ?
- A1 ಜಗ್ಗ ಯಾವಾಗಿನಿಂದ ಗೊತ್ತು? ಆತನ ಜೊತೆ ಏನು ಸಂಬಂಧ?
- 5 ತಿಂಗಳ ಹಿಂದೆ ನಿಮ್ಮ, ಜಗ್ಗನ ಮೇಲೆ ಶಿವ ಸುಮ್ಮನೆ ದೂರು ಕೊಟ್ನಾ?
- ನೀವು ನಿಮ್ಮ ಬೆಂಬಲಿಗರಿಗೆ ಶಿವನನ್ನು ಹೆದರಿಸಲು ಹೇಳಿದ್ರಾ?
- ಜಗ್ಗ ನಿಮ್ಮ ಅತ್ಯಾಪ್ತ ಬಳಗದಲ್ಲಿ ಎಷ್ಟು ವರ್ಷದಿಂದ ಇದ್ದಾನೆ?
ನನ್ನದು ಯಾವುದೇ ಪಾತ್ರವಿಲ್ಲ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ
ಮೂರು ಗಂಟೆಗಳ ಕಾಲ, ವಿಚಾರಣೆ ಎದುರಿಸಿ.. ತನಿಖಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿ ಹೊರ ಬಂದ ಬೈರತಿ ಬಸವರಾಜ್​​, ಈ ಕೇಸ್​ನಲ್ಲಿ ನನ್ನದು ಯಾವುದೇ ಪಾತ್ರವಿಲ್ಲ, ಏನೆಲ್ಲಾ ಪ್ರಶ್ನೆ ಕೇಳಿದ್ರು ಅದಕ್ಕೆ ಉತ್ತರಿಸಿದ್ದೇನೆ. ನನಗೆ ಯಾವ ಜಗದೀಶ್ ಕೂಡ ಪರಿಚಯ ಇಲ್ಲ ಎಂದು ಮತ್ತೆ ಬುಧವಾರ ವಿಚಾರಣೆಗೆ ಬರಲು ಹೇಳಿದ್ದು, ಮತ್ತೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಬೈರತಿ ಬಸವರಾಜ್​ ಸ್ಟಪನೆ ನೀಡಿದ್ರು.
ಒಟ್ಟಾರೆ ಆರೋಪಿಗಳು ಕೊಟ್ಟಿರುವ ಮಾಹಿತಿ ಹಾಗೂ ಲಭ್ಯವಿರುವ ತಾಂತ್ರಿಕ ಸಾಕ್ಷ್ಯ, ಸಿಡಿಆರ್, ಟವರ್ ಡಂಪ್ ಆಧರಿಸಿ ಪೊಲೀಸರು ಬೈರತಿ ಬಸವರಾಜ್​ಗೆ ಪ್ರಶ್ನೆ ಮಾಡಿದ್ದಾರೆ. ನಾಪತ್ತೆ ಆಗಿರುವ ಎ1 ಆರೋಪಿ ಜಗ್ಗನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ