ಪಾಕ್​​ ಮಾಜಿ ಕೋಚ್​​ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್​ ಆಗಿದ್ದು ಹೇಗೆ? ಕಾರಣವೇನು?​​

author-image
Ganesh Nachikethu
Updated On
ಪಾಕ್​​ ಮಾಜಿ ಕೋಚ್​​ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್​ ಆಗಿದ್ದು ಹೇಗೆ? ಕಾರಣವೇನು?​​
Advertisment
  • ಟೀಮ್​ ಇಂಡಿಯಾಗೆ ಈಗ ಮೋರ್ನೆ ಮೊರ್ಕೆಲ್ ಬೌಲಿಂಗ್​ ಕೋಚ್​​
  • ಸದ್ಯದಲ್ಲೇ ಬಿಸಿಸಿಐನಿಂದ ಬೌಲಿಂಗ್​ ಕೋಚ್​​ ಬಗ್ಗೆ ಅಧಿಕೃತ ಘೋಷಣೆ
  • ಮೋನೆ ಮೊರ್ಕೆಲ್​​ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿದ್ದರು..!

ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್ ಅವರು ಅಧಿಕಾರ ವಹಿಸಿಕೊಂಡರು. ಈಗಾಗಲೇ ಮುಖ್ಯ ಕೋಚ್​ ಗೌತಮ್​​ ಗಂಭೀರ್​ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ರು. ಈ ನಡುವೆ ಗೌತಮ್​ ಗಂಭೀರ್​​ ಟೀಮ್​ ಸೇರಲು ಫಾರಿನ್​​ ಬೌಲರ್​​ ಮುಂದಾಗಿದ್ದಾರೆ. ಇವರು ಟೀಮ್ ಇಂಡಿಯಾ ಬೌಲಿಂಗ್​ ಕೋಚ್​ ಆಗಲಿದ್ದಾರೆ.

ನೂತನ ಬೌಲಿಂಗ್ ಕೋಚ್ ಯಾರು?

ಸೌತ್​ ಆಫ್ರಿಕಾದ ದಿಗ್ಗಜ ಬೌಲರ್ ಮೋರ್ನೆ ಮೊರ್ಕೆಲ್ ಈಗ ಭಾರತದ ಹೊಸ ಬೌಲಿಂಗ್ ಕೋಚ್ ಆಗಲಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಕೂಡ ಮಾಡಲಿದೆ. ಮೊರ್ಕೆಲ್‌ ಟೀಮ್​ ಇಂಡಿಯಾ ಹೊಸ ಬೌಲಿಂಗ್​ ಕೋಚ್​​ ಶೀಘ್ರದಲ್ಲಿ ಅಧಿಕಾರಿ ಸ್ವೀಕರಿಸಲಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ.

ಮೋರ್ನೆ ಮೊರ್ಕೆಲ್ ಸೆಪ್ಟೆಂಬರ್ 1ನೇ ತಾರೀಕಿನಿಂದ ಟೀಮ್​ ಇಂಡಿಯಾ ಬೌಲಿಂಗ್​ ಕೆಲಸ ಶುರು ಮಾಡಲಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟ್ರೈನಿಂಗ್​ ನೀಡಿರೋ ಅನುಭವ ಹೊಂದಿದ್ದಾರೆ. ಮೊರ್ಕೆಲ್​​ ಪಾಕ್‌ ತಂಡದ ಬೌಲಿಂಗ್ ಕೋಚ್ ಆಗಿದ್ದರು.

ಮೋರ್ನೆ ಮೊರ್ಕೆಲ್ ಕರಿಯರ್​ ಹೇಗಿತ್ತು?

ಮೋರ್ನೆ ಮೊರ್ಕೆಲ್ ಸೌತ್​ ಆಫ್ರಿಕಾದ ಸ್ಟಾರ್ ಬೌಲರ್​ ಆಗಿದ್ದರು. ತಾನು ಆಡಿರೋ 86 ಟೆಸ್ಟ್ ಪಂದ್ಯಗಳಲ್ಲಿ ಮೊರ್ಕೆಲ್​ 309 ವಿಕೆಟ್‌ ಕಬಳಿಸಿದ್ದಾರೆ. ಇನ್ನು 117 ಏಕದಿನ ಪಂದ್ಯಗಳನ್ನು ಆಡಿದ್ದು, 188 ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment