/newsfirstlive-kannada/media/post_attachments/wp-content/uploads/2024/11/WAYANADU-LANDSLIDE.jpg)
ಕಳೆದ ಜುಲೈ 13 ರಂದು ಕೇರಳದ ವಯನಾಡಿನಲ್ಲಿ ದೇಶ ಹಿಂದೆಂದೂ ಕಂಡು ಕೇಳರಿಯದ ಭೀಕರ ಭೂಕುಸಿತ ಉಂಟಾಗಿತ್ತು. ಈ ಒಂದು ದುರ್ಘಟನೆಯಲ್ಲಿ ಸುಮಾರು 231 ಜನರು ದಾರುಣ ಅಂತ್ಯ ಕಂಡಿದ್ದರು. ಇಡೀ ದೇಶಕ್ಕೆ ದೇಶವೇ ವಯನಾಡಿನಲ್ಲಾದ ದುರಂತ ಕಂಡು ಮಮ್ಮಲ ಮರುಗಿತ್ತು. ಹಲವಾರು ಸೆಲೆಬ್ರೆಟಿಗಳು, ಉದ್ಯಮಿಗಳು ಕುಸಿದ ವಯನಾಡನ್ನು ಮತ್ತೆ ಕಟ್ಟಲು ಹೆಗಲಾಗಿ ನಿಂತಿದ್ದರು. ಕೇರಳ ಸರ್ಕಾರ ಈ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ದುರಂತ ನಡೆದು ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಸದ್ಯ ಕೇಂದ್ರ ಗೃಹ ಸಚಿವಾಲಯ ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
/newsfirstlive-kannada/media/post_attachments/wp-content/uploads/2024/08/Waynad-Landslide-4.jpg)
ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾದ ಕೆ.ವಿ.ಥಾಮಸ್​ ಪತ್ರ ಮುಖೇನ ಈ ವಿಚಾರವನ್ನು ಕೇರಳದ ಜನಪ್ರತಿನಿಧಿಗಳಿಗೆ ಸ್ಪಷ್ಟ ಪಡಿಸಿದ್ದಾರೆ. ವಯನಾಡಿನಲ್ಲಿ ನಡೆದ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಗುರುತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಒಂದು ಪತ್ರದಲ್ಲಿ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಅವರು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಹಾಗೂ ಕೇಂದ್ರ ವಿಪತ್ತು ಪ್ರತಿಕ್ರಿಯೆ ನಿಧಿಗಳ ಮಾರ್ಗಸೂಚಿಗಳ ಪ್ರಕಾರ, ಯಾವುದೇ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಅಧಿಕೃತವಾಗಿ ಘೋಷಿಸುವ ನಿಬಂಧನೆಗಳಿಲ್ಲ ಎಂದು ಹೇಳಿದ್ದಾರೆ. ರೈ ಅವರು ಹೇಳುವ ಪ್ರಕಾರ ವಿಪತ್ತನ್ನು ನಿರ್ವಹಿಸುವ ಪ್ರಥಮ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿರುತ್ತದೆ. ಕೇಂದ್ರ ಸರ್ಕಾರವು ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಹಾಗೂ ಹಣಕಾಸಿನ ನೆರವಿಗೆ ಬರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಪತ್ರದಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಕೇರಳ ಸರ್ಕಾರದ ಬೆಂಬಲಕ್ಕೆ ನಿಲ್ಲಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ, ಆದ್ರೆ ಈ ಒಂದು ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುವುದಿಲ್ಲ. ಸದ್ಯದ ವಿಪತ್ತು ನಿರ್ವಹಣಾ ಅಡಿಯಲ್ಲಿ ಈ ಒಂದು ದುರಂತ ರಾಷ್ಟ್ರೀಯ ವಿಪತ್ತನಡಿ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಇಬ್ಬರು ಭಾರತೀಯರಿಗೆ ಸೂಪರ್ ಪವರ್! ಇವರ ಹಿನ್ನೆಲೆ ಏನು?
ಗೃಹ ಇಲಾಖೆಯಿಂದ ನೀಡಲಾದ ಪತ್ರದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಉಲ್ಲೇಖಿಸಲಾಗಿದೆ. ಈಗಾಗಲೇ ಕೇರಳ ಸರ್ಕಾರ ಕೇಂದ್ರ ಸರ್ಕಾರದಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದೆ. ಸುಮಾರು 386 ಕೋಟಿ ರೂಪಾಯಿ( 291 ಕೋಟಿ ರೂಪಾಯಿ ಕೇಂದ್ರ ಹಾಗೂ 96.80 ಕೋಟಿ ರೂಪಾಯಿ ರಾಜ್ಯದ ಪಾಲು) ಪರಿಹಾರವಾಗಿ ನೀಡಲಾಗಿದೆ. ಕೇರಳದ ಎಸ್​ಡಿಆರ್​ಎಫ್​ ಜುಲೈ 31 2024-25 ರ ಸಾಲಿನನ್ವಯ ಮೊದಲ ಕಂತಾಗಿ ಸುಮಾರು 145.60 ಕೋಟಿ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಿದೆ. ಇವೆಲ್ಲವೂ ಕೂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹರಿದು ಬಂದ ಧನದ ಹೊರತಾಗಿ ನೀಡಲಾಗಿರುವ ಹಣಕಾಸಿನ ಸಹಾಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us