newsfirstkannada.com

Lok Sabha Polls; ಬಿಜೆಪಿ ಸಚಿವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ

Share :

Published March 31, 2024 at 8:29am

Update March 31, 2024 at 8:30am

    ಗ್ರಾಮವೊಂದರಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಅವಘಡ

    ಸುರಕ್ಷಿತವಾಗಿ ಸಚಿವರನ್ನು ಕರೆದುಕೊಂಡು ಬಂದ ಪೊಲೀಸರು

    ಸಚಿವರ ವಿರುದ್ಧ ಘೋಷಣೆ ಕೂಗುತ್ತ ವಿರೋಧ ವ್ಯಕ್ತಪಡಿಸಿದರು

ಲಕ್ನೋ: ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ 8 ರಿಂದ 10 ವಾಹನಗಳ ಗಾಜು ಒಡೆದು ಹೋಗಿರುವುದಾಗಿ ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖತೌಲಿಯಲ್ಲಿನ ಮಡ್ಕರಿಂಪುರ ಗ್ರಾಮದಲ್ಲಿ ಬಲ್ಯಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಗುಂಪೊಂದು ಅವರ ವಿರೋದ್ಧ ಘೋಷಣೆಗಳನ್ನ ಕೂಗಲು ಪ್ರಾರಂಭಿಸಿತು. ಇದಾದ ನಂತರ ಸಚಿವರು ಹಾಗೂ ಬೆಂಗಾವಲು ಕಾರುಗಳು ಹೋಗುತ್ತಿದ್ದವು. ಆಗ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ 8 ರಿಂದ 10 ಕಾರುಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ.

ಇನ್ನು ಘರ್ಷಣೆ ಹೆಚ್ಚಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಂಸದ ಸಂಜೀವ್ ಬಲ್ಯಾನ್ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಬರಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಸಾರ್ವಜನಿಕ ಸಭೆಯಲ್ಲಿ ಕೆಲ ಜನರು ಸಮಾಜ ವಿರೋಧಿಗಳು ಘೋಷಣೆ ಕೂಗಿದ್ದಾರೆ. ಇದಾದ ಬಳಿಕ ಸಚಿವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಜಾಫರ್ ನಗರ ಎಸ್​ಪಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Polls; ಬಿಜೆಪಿ ಸಚಿವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ

https://newsfirstlive.com/wp-content/uploads/2024/03/BJP.jpg

Load More