/newsfirstlive-kannada/media/post_attachments/wp-content/uploads/2025/04/v-somanna.jpg)
ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವವರು ಮಂಗಳಸೂತ್ರ ಮತ್ತು ಜನಿವಾರ ತೆಗೆಯಬೇಕು ಎಂದು ಸೂಚಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಮಧ್ಯ ಪ್ರವೇಶಿಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ.. ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡ ಸಿಎಂ..!
ಅಲ್ಲದೇ ಪರೀಕ್ಷಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಹಾಗೂ ಮಂಗಳಸೂತ್ರವನ್ನು ತೆಗೆಯಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಅವರು ರೈಲ್ವೇ ಇಲಾಖೆ ಪರೀಕ್ಷೆಗೆ ಮಾಂಗಲ್ಯ ಮತ್ತು ಜನಿವಾರಕ್ಕೆ ಅನುಮತಿ ನೀಡುವಂತೆ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಪತ್ರ ಸಲ್ಲಿಸಿದ್ದರು.
ನವದೆಹಲಿಯಲ್ಲಿ ಈ ಬಗ್ಗೆ ಮಾತಾಡಿದ ರೈಲ್ವೆ ಸಚಿವ ವಿ. ಸೋಮಣ್ಣ ಅವರು 28-29-30 ರೈಲ್ವೇ ಇಲಾಖೆಯ ಪರೀಕ್ಷೆ ನಡೆಯುತ್ತಿದೆ. ಅನೇಕ ವರ್ಷಗಳ ಇದ್ದ ಪರೀಕ್ಷೆಗೆ ನಿಬಂಧನೆಗಳು ಇವೆ. ಇವತ್ತು ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಸಭೆ ಮಾಡಲಾಗಿದೆ. ಜನಿವಾರ ತೆಗೆಯದಂತೆ ಇಂದೇ ಆದೇಶ ಆಗಬೇಕು ಎಂದು ಮನವಿ ಮಾಡಿದೆ. ಮಾಂಗಲ್ಯ, ಜನಿವಾರ ತೆಗಿಯಬೇಕು ಎಂಬ ಆದೇಶ ಬದಲಿಸಲಾಗಿದೆ. ಮಾಂಗಲ್ಯ, ಜನಿವಾರ ತೆಗೆಯುವಂತಿಲ್ಲ, ಈ ಬಗ್ಗೆ ರೈಲ್ವೇ ಇಲಾಖೆಯಿಂದ ಆದೇಶ ಆಗಿದೆ. ಈ ಹಿಂದೆಯಿದ್ದ ಆದೇಶ ವಾಪಸ್ ಪಡೆಯಲಾಗಿದೆ. ದೇಶಾದ್ಯಂತ ಈ ನಿಯಮ ಅನ್ವಯವಾಗಲಿದೆ. ಅಭ್ಯರ್ಥಿಗಳಿಗೆ ಇದ್ದ ಗೊಂದಲ ನಿವಾರಣೆ ಆಗಿದೆ. ಸುಮಾರು ವರ್ಷದಿಂದ ಇದ್ದ ಕಟ್ಟುಪಾಡುಗಳನ್ನು ತೆಗದುಹಾಕಲಾಗಿದೆ. ಅಭ್ಯರ್ಥಿಗಳಿಗೆ ಅಪಚಾರ ಆಗಿದ್ದರೆ ಕ್ಷಮೆ ಕೇಳುತ್ತೇನೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷಾ ಕೇಂದ್ರಗಳಿಗೆ ಈ ಕೆಳಕಂಡ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ..
ಮೊಬೈಲ್ ಫೋನ್, ಪೇಜರ್, ಗಡಿಯಾರ, ಕ್ಯಾಲ್ಕುಲೇಟರ್, ಬುಕ್, ಇಯರ್‌ಫೋನ್, ಬ್ಲೂಟೂತ್ ಸಾಧನ, ಮೈಕ್, ಹ್ಯಾಂಡ್ ಬ್ಯಾಗ್, ಪರ್ಸ್, ಪೇನ್, ಪೆನ್ಸಿಲ್, ಇರೇಸರ್, ಪೌಚ್, ಸ್ಕೇಲ್, ಪೇಪರ್, ಕ್ಯಾಮೆರಾ, ವಾಟರ್ ಬಾಟಲ್, ಪ್ಯಾಕ್ ಆಹಾರ ವಸ್ತು, ಎಲೆಕ್ಟ್ರಾನಿಕ್ ಸಾಧನ
ಅನುಮತಿಸಲಾದ ವಸ್ತು..
ಇ-ಕಾಲ್ ಲೆಟರ್ ಮಾತ್ರ (ಪರೀಕ್ಷಾ ಕೇಂದ್ರದಲ್ಲಿ ಪೇನ್ ಒದಗಿಸಲಾಗುವುದು)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ