ಭಾರತದ ಅತಿ ಸುಂದರ ಮಹಾರಾಣಿ ಯಾರು ಗೊತ್ತಾ? ಇವರ ಸ್ಟೈಲ್​ನ್ನು ಐಶ್ವರ್ಯ ರೈ ಕೂಡ ಕಾಪಿ ಮಾಡಿದ್ದರು..

author-image
Gopal Kulkarni
Updated On
ಭಾರತದ ಅತಿ ಸುಂದರ ಮಹಾರಾಣಿ ಯಾರು ಗೊತ್ತಾ? ಇವರ ಸ್ಟೈಲ್​ನ್ನು ಐಶ್ವರ್ಯ ರೈ ಕೂಡ ಕಾಪಿ ಮಾಡಿದ್ದರು..
Advertisment
  • ಜೈಪುರದ ಈ ಮಹಾರಾಣಿ ಭಾರತ ಕಂಡ ಅತ್ಯಂತ ಸುಂದರ ರಾಣಿ
  • ಇವರನ್ನು ಕಾಪಿ ಮಾಡಲು ಹೋಗಿ ಫೇಲ್ ಆಗಿದ್ದು ಹೇಗೆ ಐಶ್ವರ್ಯ ?
  • ಅತ್ಯಂತ ಸರಳ ವಿರಳ ಸುಂದರಿಯ ಲೈಫ್​ಸ್ಟೈಲ್ ಹೇಗಿತ್ತು ಗೊತ್ತಾ?

ಹೆಣ್ಣಿಗೆ ಇನ್ನೊಂದು ಹೆಸರೇ ಸೌಂದರ್ಯ. ಅವರ ಕೋಪದಿಂದ ಹಿಡಿದು ಕಿರುನಗೆ, ಕಿರು ನೋಟವೂ ಕೂಡ ಅವರ ಸೌಂದರ್ಯ ರಾಶಿಗೆ ಮತ್ತಷ್ಟು ಮೆರಗು ಕೊಡುತ್ತದೆ. ಹೆಣ್ಣು ಮುರಿದ ಮೂಗ ತಿರುವಿನಲ್ಲಿ ಕೋಟಿ ಅಪ್ಸರೆಯರು ಕಾಣುತ್ತಾರೆ  ಎಂದು ಹೆಣ್ಣಿನ ಸೌಂದರ್ಯವನ್ನು ವರ್ಣಿಸುತ್ತಾನೆ ಕವಿ. ಸೌಂದರ್ಯದ ವಿಷಯದಲ್ಲಿ ಅವರಿಗಾಗಿ ವಿಶ್ವದಾದ್ಯಂತ ಸ್ಪರ್ಧೆಗಳೇ ನಡೆಯುತ್ತವೆ. ವರ್ಷದ ಭುವನ ಸುಂದರಿ, ವಿಶ್ವ ಸುಂದರಿ ಎಂಬ ಪ್ರಶಸ್ತಿಗಳನ್ನು ಸೌಂದರ್ಯ ರಾಶಿಯನ್ನೇ ತಮ್ಮದಾಗಿಸಿಕೊಂಡ ಯುವತಿಯರು ಬಾಚಿಕೊಳ್ಳುತ್ತಾರೆ.

ಇದನ್ನೂ ಓದಿ:VIDEO:ನ್ಯೂಸ್​ಪೇಪರೇ ಸಾರಿಯಾಯ್ತು..! ನಾಲ್ಕು ಗಂಟೆಗಳಲ್ಲಿ ದಿನಪತ್ರಿಕೆಯನ್ನು ಸೀರೆ ಮಾಡಿದ ಯುವತಿ

ಹೆಣ್ಣಿನ ಸೌಂದರ್ದದ ಬಗ್ಗೆ ಕವಿತೆಗಳಿಂದ ಹಿಡಿದು ಕಲಾಕೃತಿಯವರೆಗೂ ಕಲೆಯನ್ನು ಮೀಸಲಿಡಲಾಗಿದೆ. ಪ್ರಪಂಚದಲ್ಲಿ ಅನೇಕ ಮಹಿಳೆಯರು ತಮ್ಮ ಸೌಂದರ್ಯರಾಶಿಯಿಂದಲೇ ಜನಪ್ರಿತೆಯನ್ನು ಪಡೆದಿದ್ದಾರೆ. ಅದರಲ್ಲಿ ಮೋನಾಲಿಸಾ, ಡಯಾನಾ ಹೀಗೆ ಹಲವರು. ಭಾರತದಲ್ಲಿಯೂ ಒಬ್ಬ ಮಹಾರಾಣಿ ಇದೇ ರೀತಿ ತಮ್ಮ ಸೌಂದರ್ಯ ರಾಶಿಯಿಂದಲೇ ಗುರುತಿಸಿಕೊಂಡಿದ್ದರು. ಅವರ ಸ್ಟೈಲ್​ನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಕಾಪಿ ಮಾಡಲು ಹೋಗಿ ಎಡವಿದ್ದರು. ಹಾಗಿದ್ರೆ ಯಾರು ಮಹಾರಾಣಿ?

publive-image

ಜೈಪುರದ ಮಹಾರಾಣಿ ಗಾಯಿತ್ರಿ ದೇವಿಯವರನ್ನು ಭಾರತದ ಅತ್ಯಂತ ಸುಂದರ ಮಹಾರಾಣಿ ಎಂದು ಗುರುತಿಸಲಾಗುತ್ತದೆ. ಇಂದಿಗೂ ಕೂಡ ಅವರ ಸೊಬಗು, ಮೈಮಾಟ ಹಾಗೂ ರೂಪವನ್ನು ಮೀರಿಸು ಯಾರಿಂದಲೂ ಆಗಿಲ್ಲ ಎಂದೇ ಹೇಳಲಾಗುತ್ತದೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಇವರನ್ನು ಕಾಪಿ ಮಾಡಲು ಹೋಗಿ ಸೋತು ಹೋಗಿದ್ದರು.

publive-image

ಹಾಗಂತ ಮಹಾರಾಣಿ ಗಾಯಿತ್ರಿ ದೇವಿ ವಿಪರೀತ ಅನಿಸುವಷ್ಟು ಮೇಕಪ್​ ಆಗಲಿ ಬೇಕಾಬಿಟ್ಟಿ ಆಭರಣಗಳನ್ನಾಗಲಿ ಧರಿಸುತ್ತಿರಲಿಲ್ಲ. ಅವರು ಅತ್ಯಂತ ಸರಳ ವಿರಳ ಸುಂದರಿ. ಅದರಲ್ಲೂ ಅವರು ಉಡುತ್ತಿದ್ದ ಚಿಫಾನ್ ಸಾರಿ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಕೊಡುತ್ತಿತ್ತು. ಇವರಿಂದಲೇ ಈ ಒಂದು ಸೀರೆ ಭಾರೀ ಪ್ರಸಿದ್ಧಿಯನ್ನು ಪಡೆಯಿತು.

publive-image

ಈ ಹಿಂದೆ ಮಹಾರಾಣಿ ಗಾಯಿತ್ರಿ ದೇವಿ ಕುರಿತು ಬಯೋಪಿಕ್ ಸಿನಿಮಾ ಮಾಡಲು ಬಾಲಿವುಡ್​ನಲ್ಲಿ ನಿರ್ಧರಿಸಲಾಗಿತ್ತು. ಗಾಯಿತ್ರಿ ದೇವಿ ಪಾತ್ರದಲ್ಲಿ ಮಿಂಚಲು ಐಶ್ವರ್ಯ ರೈ ಸಜ್ಜಾಗಿದ್ದರೂ ಕೂಡ. ಐಶ್ ಮಹಾರಾಣಿ ಗಾಯಿತ್ರಿ ದೇವಿಯ ಪಾತ್ರದಲ್ಲಿ ಅದ್ಭುತವಾಗಿ ಕಂಡಿದ್ದರು ಕೂಡ ಕಾರಣಾಂತರಗಳಿಂದ ಆ ಸಿನಿಮಾ ತೆರೆ ಕಾಣಲಿಲ್ಲ.

ಇದನ್ನೂ ಓದಿ: ವಿಶ್ವದಲ್ಲೇ ಅತ್ಯಂತ ದುಬಾರಿ ನೀರಿನ ಬಾಟಲ್ ಕಣ್ರೀ ಇದು.. ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!

ಗಾಯಿತ್ರಿ ದೇವಿಯವರ ಹಳೆಯ ಫೋಟೋ ನೋಡಿದಾಗ ನಮಗೆ ಸ್ಪಷ್ಟವಾಗುತ್ತದೆ. ಅತ್ಯಂತ ಸರಳ ಸಾರಿಯಲ್ಲಿ, ಸರಳ ಕೇಶ ವಿನ್ಯಾಸದ ಮೂಲಕ ಸಿಂಪಲಿ ಸೂಪರ್ಬ್ ಎನ್ನುವ ರೀತಿಯಲ್ಲಿ ಕಾಣುತ್ತಾರೆ. ಒಂದು ಬಿಂದಿ ಲಿಪ್ಸ್​ಟಿಕ್, ಐಷಾರಾಮಿ ಎನಿಸುವಂತ ಒಂದಿಷ್ಟು ಆಭರಣ ಅದರಲ್ಲೂ ನೆಕ್​ಲೇಸ್ ಅವರಿಗೆ ಅತ್ಯಂತ ಪ್ರಿಯ. ಅವುಗಳನ್ನು ಧರಿಸಿಕೊಂಡು ನಿಂತಿರುವ ಫೋಟೋ ನೋಡಿದರೆ ಎಂತವರ ಎದೆಯಲ್ಲೂ ಸಣ್ಣದಾಗಿ ತಂಬೂರಿ ಮೀಟಿದಂತೆ ಆಗುತ್ತದೆ.

ಅದ್ಭುತವಾದ ಸಾರಿ, ಅದಕ್ಕೆ ತಕ್ಕಂತ ಬ್ಲೌಸ್, ಡೈಮಂಡ್ ಜ್ಯುವೆಲರಿ, ಹಣೆ ಮೇಲೆ ಬಿಂದಿ  ಇಷ್ಟಿದ್ದರೆ ಮಹಾರಾಣಿ ಗಾಯಿತ್ರಿ ದೇವಿ ರತಿದೇವಿ ಸೌಂದರ್ಯಕ್ಕೆ ಸವತಿಯಂತೆ ಕಾಣುತ್ತಿದ್ದರು. ಅಂದಿನಿಂದ ಇಂದಿನವರೆಗೂ ಭಾರತ ಕಂಡ ಅತ್ಯಂತ ಸುಂದರ ರಾಣಿ ಅಂದ್ರೆ ಅದು ಮಹಾರಾಣೀ ಗಾಯಿತ್ರಿ ದೇವಿ ಎಂದೇ ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment