/newsfirstlive-kannada/media/post_attachments/wp-content/uploads/2025/01/HINDU-INSCRIPT.jpg)
ಒಂದೊಂದು ಧರ್ಮವೂ ಒಂದೊಂದು ಸಂಕೇತಗಳನ್ನಿಟ್ಟುಕೊಂಡು ಅವುಗಲ ಪ್ರಭಾವಳಿಯಲ್ಲಿಯೇ ತಮ್ಮ ಸಂಪ್ರದಾಯವನ್ನು ನಡೆಸುತ್ತವೆ. ಅದರಲ್ಲೂ ಹಿಂದೂ ಧರ್ಮದಲ್ಲಿಯೇ ಅನೇಕ ಆಧ್ಯಾತ್ಮಿಕ ಸಂಕೇತಗಳಿವೆ. ಅವುಗಳ ಹಿಂದೆ ನೂರಾರು ಕಥೆಗಳಿವೆ. ಶಕ್ತಿಯ ಪರಿಚಯವಿದೆ. ಒಂದೊಂದು ಸಂಕೇತವೂ ಒಂದೊಂದು ಗುರುತುಗಳು ನೂರಾರು ಹಿನ್ನೆಲೆಗಳನ್ನು ಅವುಗಳ ಧನಾತ್ಮಕ ಶಕ್ತಿಯ ಪರಿಚಯವನ್ನು ನೀಡುತ್ತವೆ ಅಂತಹ ಕೆಲವು ಸಂಕೇತಗಳ ಬಗ್ಗೆ ಇಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ
1. ಓಂಕಾರ
ಇದಿಲ್ಲದೇ ಹಿಂದೂ ಧರ್ಮವೇ ಅಪೂರ್ಣ. ಅತ್ಯಂತ ಶಕ್ತಿದಾಯಕ ಶಬ್ದವಿದು ಎಂದು ಪುರಾಣಗಳು ಹೇಳುತ್ತವೆ. ಓಂಕಾರ ಪಠಣೆಯೊಂದೇ ಸರ್ವದೈವಗಳನ್ನು ಓಲೈಸಲು ಸಾಕು ಎಂಬ ನಿಲುವು ಕೂಡ ಇದೆ. ಈ ಜಗತ್ತು ಮೊದಲ ಬಾರಿಗೆ ಉಸಿರು ತೆಗೆದುಕೊಂಡಾಗ ಹೊರಹೊಮ್ಮಿದ ಮೊದಲ ಶಬ್ದ ಓಂಕಾರ ಎಂದು ಹೇಳಲಾಗುತ್ತದೆ. ಧ್ಯಾನಕ್ಕೆ ಕುಳಿತಾಗ ಈ ಒಂದು ಓಂಕಾರದಿಂದಲೇ ದೇಹ ಹಾಗೂ ಮನಸ್ಸಿನಲ್ಲಿ ಅನೇಕ ಧನಾತ್ಮಕ ಶಕ್ತಿಗಳು ಹೊರಹೊಮ್ಮುತ್ತವೆ ಎಂಬ ನಂಬಿಕೆಯಿದೆ. ಮನಸ್ಸಿಗೆ ತುಂಬಾ ಒತ್ತಡ ಎನಿಸಿದಾಗ. ಬದುಕು ಗೊಂದಲಕ್ಕೆ ಬಿದ್ದಾಗ ಕಣ್ಮುಚ್ಚಿ ಶಾಂತ ರೀತಿಯಿಂದ ಓಂಕಾರ ಪಠಣೆ ಮಾಡಿದರೆ ಎಲ್ಲ ಧನಾತ್ಮಕ ಅಂಶಗಳು ನಮ್ಮಿಂದ ಕಳಚಿಬೀಳುತ್ತವೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ:ದೀರ್ಘಾಯುಷಿಗಳಾಗಲು ಏನು ಮಾಡಬೇಕು; ಚೀನಾದ ಈ 124 ವರ್ಷದ ವೃದ್ಧೆ ಹೇಳುತ್ತಾರೆ ಕೇಳಿ
2. ತ್ರಿಶೂಲ
ತ್ರಿಶೂಲ ಭಗವಾನ್ ಶಿವನ ದೈವಿಕ ಆಯುಧ. ಇದು ವಿಶ್ವವನ್ನೇ ಕಾಯುವ ಸಂಕೇತವಾಗಿ ಹಿಂದೂ ಜಗತ್ತು ಗುರುತಿಸುತ್ತದೆ. ನಿರ್ಭಯ ಹಾಗೂ ದುಷ್ಕಶಕ್ತಿಗಳ ನಾಶದ ಸಂಕೇತವಾಗಿ ಇದನ್ನು ಗುರುತಿಸಲಾಗುತ್ತದೆ,. ಇನ್ನು ಕೆಲವು ನಂಬಿಕೆಗಳ ಪ್ರಕಾರ ತ್ರಿಶೂಲದ ಮೂರು ಕೊನೆಗಳು ಶಿವನ ಸಂರಕ್ಷಣೆ ಹಾಗೂ ರೂಪಾಂತರದ ಶಕ್ತಿಯನ್ನು ಬಿಂಬಿಸುತ್ತವೆ ಎಂದು ಕೂಡ ಹೇಳಲಾಗುತ್ತದೆ, ಅದು ಮಾತ್ರವಲ್ಲ ಇದೇ ತ್ರಿಶೂಲದಿಂದಿ ಶಿವನು ಜಗತ್ತಿನ ದುಷ್ಟಶಕ್ತಿಗಳನ್ನು ವಿನಾಶಗೊಳಿಸಿ ಶಿಷ್ಟರ ಉದ್ಧಾರ ಮಾಡುತ್ತಾನೆ ಎಂದು ಕೂಡ ಹೇಳಲಾಗುತ್ತದೆ.
3. ಸ್ವಸ್ತಿಕ್
ಹಿಂದೂ ಸಂಪ್ರದಾಯದ ಸಾಮಾನ್ಯ ಚಿನ್ಹೆಯಿದು ಹೊಸದಾಗಿ ಏನನ್ನೇ ಆರಂಭಿಸಿದರು ಅದು ಸ್ವಸ್ತಿಕ್ ಸಂಕೇತವನ್ನು ಬರೆಯುವ ಮೂಲಕ ಆರಂಭವಾಗುತ್ತದೆ. ಹೊಸ ಕಾರು, ಹೊಸ ಬೈಕ್, ಹೊಸ ಕಂಪ್ಯೂಟರ್ ಕೊಂಡಾಗಲೂ ಕೂಡ ಸ್ವಸ್ತಿಕ್ ಚಿನ್ಹೆಯನ್ನು ಅದರ ಮೇಲೆ ಬರೆದು ನಂತರ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಸ್ವಸ್ತಿಕ್ ಹೊಸತನದ ಆರಂಭದ ಸಂಕೇತವಾಗಿದೆ. ಎಲ್ಲವೂ ಶುಭವಾಗಿ ನೇರವೇರಲಿ ಎಂದು ಈ ಒಂದು ಸಂಕೇತವನ್ನು ಬಳಸಲಾಗುತ್ತದೆ. ಅದು ಮಾತ್ರವಲ್ಲ ಹೊಸದಾಗಿ ಆರಂಭಗೊಂಡ ಯಾವುದೇ ಕಾರ್ಯಗಳಲ್ಲಿಯೂ ಒಂದು ಧನಾತ್ಮಕ ಶಕ್ತಿ ಆವರಿಸಿಕೊಳ್ಳಲಿ ಎಂಬ ಭಾವನೆಯಿಂದ ಸ್ವಸ್ತಿಕ್ ಚಿನ್ಹೆಯನ್ನು ಬಳಸಲಾಗುತ್ತದೆ.
ಇದನ್ನೂ ಓದಿ:ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? ನಮ್ಮ ಪುರಾತನ ಆಹಾರ ಕ್ರಮ ಹೇಗಿತ್ತು?
4. ಶ್ರೀಯಂತ್ರ
ಹಿಂದೂ ಧರ್ಮದ ಮತ್ತೊಂದು ಶಕ್ತಿಶಾಲಿ ಸಂಕೇತವೆಂದರೆ ಅದು ಶ್ರೀಯಂತ್ರ. ಇದು ಸಮೃದ್ಧಿ, ಅದೃಷ್ಟ, ಸಂತೋಷ ಹಾಗೂ ಹಣಕಾಸಿನ ಸ್ಥಿತಿಯಲ್ಲಿನ ಸುಧಾರಣೆಗಾಗಿ ಇದನ್ನು ಬಳಸುತ್ತಾರೆ. ಅದು ಮಾತ್ರವಲ್ಲ ಈ ಶ್ರೀಯಂತ್ರ ಮಹಾಲಕ್ಷ್ಮೀಯ ಮತ್ತೊಂದು ರೂಪ ಎಂದು ಕೂಡ ಹೇಳಲಾಗುತ್ತದೆ. ಇದು ಶಿವಶಕ್ತಿಯ ಒಟ್ಟು ಸ್ವರೂಪದ ಶಕ್ತಿಯ ಸಂಕೇತವೆಂದು ಕೂಡ ಹೇಳಲಾಗುತ್ತದೆ. ಇದನ್ನು ಮನೆ ಹಾಗೂ ಕಚೇರಿಯಲ್ಲಿ ತಂದು ಪ್ರತಿಷ್ಠಾಪಿಸುವುದರಿಂದ ಅನೇಕ ಆಧಾತ್ಮಿಕ ಶಕ್ತಿಗಳ ಪರಿಣಾಮವುಂಟಾಗುತ್ತದೆ.
5. ವಟ ವೃಕ್ಷ
ವಟವೃಕ್ಷ ಅಂದ್ರೆ ಆಲದ ಮರ ಉತ್ತಮ ಆರೋಗ್ಯ ಹಾಗೂ ಸಂಪತ್ತಿನ ಸಂಕೇತವಾಗಿ ಇದು ಹಿಂದೂ ಧರ್ಮದಲ್ಲಿ ಗುರುತಿಸಿಕೊಂಡಿದೆ. ಶತಮಾನಗಳಿಂದಲೂ ದೀರ್ಘಾಯುಷ್ಯಕ್ಕಾಗಿ, ಜ್ಞಾನಕ್ಕಾಗಿ ಹಾಗೂ ಆರೋಗ್ಯಕ್ಕಾಗಿ ಈ ಮರದ ಮುಂದೆ ನಿಂತು ಪ್ರಾರ್ಥಿಸುವ ಪದ್ಧತಿ ನಮ್ಮಲ್ಲಿ ಇದೆ. ಅದರಲ್ಲೂ ಮಕ್ಕಳಾಗದ ಹೆಣ್ಣು ಮಕ್ಕಳು ಸಂತಾನ ಭಾಗ್ಯಕ್ಕಾಗಿಯೂ ಈ ಆಲದ ಮರವನ್ನು ಆರಾಧಿಸುತ್ತಾರೆ. ಮತ್ತೊಂದು ನಂಬಿಕೆಯ ಪ್ರಕಾರ ಶ್ರೀಕೃಷ್ಣನು ಈ ಮರದ ಕೆಳೆಗೆ ಕುಳಿತು ಸದಾಕಾಲ ವಿಶ್ರಾಂತಿ ಪಡೆಯುತ್ತಿದ್ದ ಎಂಬ ಐತಿಹ್ಯವೂ ಇದೆ.
6. ಶಿವಶಕ್ತಿ ನಕ್ಷತ್ರದ ಸಂಕೇತ
ಇದು ಶಿವಶಕ್ತಿಯ ಒಟ್ಟು ಶಕ್ತಿಯ ಸ್ವರೂಪ. ಅರ್ಧನಾರೀಶ್ವರನ ಸಂಕೇತ. ಇದು ಪುರುಷ ಹಾಗೂ ಸ್ತ್ರೀ ಶಕ್ತಿಯ ಒಟ್ಟು ರೂಪವನ್ನು ಪ್ರತಿನಿಧಿಸುತ್ತದೆ.
7. ಶಂಖ
ಶಂಖವನ್ನು ಪರಿಶುದ್ಧತೆಯ ಒಂದು ಸಂಕೇತವನ್ನು, ವಿಜಯದ ಸಂಕೇತವನ್ನು ಹಾಗೂ ಹೊಸ ಆರಂಭದ ಸಂಕೇತವನ್ನು ಪ್ರತಿನಿಧಿಸುತ್ತದೆ. ಭಗವಾನ್ ವಿಷ್ಣುವಿನ ಕೈಯಲ್ಲಿ ಬ್ರಹ್ಮಾಂಡದ ಅತ್ಯಂತ ಸರ್ವಶಕ್ತ ಶಂಖವು ಇದೆ ಎಂಬ ನಂಬಿಕೆಗಳು ನಮ್ಮ ಪುರಾಣಗಳಲ್ಲಿ ಇದೆ. ಇಡೀ ಸೃಷ್ಟಿಯನ್ನೇ ಪರಿಶುದ್ಧಗೊಳಿಸುವ ಶಕ್ತಿ ಈ ಶಂಖದಲ್ಲಿ ಇದೆ ಅದಕ್ಕೆ ದೊಡ್ಡ ನಿದರ್ಶನ ಶ್ರೀಕೃಷ್ಣನ ಕೈಯಲ್ಲಿದ್ದ ಪಾಂಚಜನ್ಯ ಶಂಖ. ಈ ಶಂಖನಾದದಿಂದಲೇ ಸೃಷ್ಟಿಯ ಎಲ್ಲಾ ದುಷ್ಟಶಕ್ತಿಗಳ ನಾಶವಾಗಿದ್ದು ಎಂಬ ಬಗ್ಗೆ ಮಹಾಭಾರತ ಹಾಗೂ ಪುರಾಣಗಳಲ್ಲಿ ಉಲ್ಲೇಖವಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ