ಆರೆಂಜ್, ಪರ್ಪಲ್ ಕ್ಯಾಪ್ ಎರಡನ್ನೂ ಕಬಳಿಸಿದ RCB ಸ್ಟಾರ್ಸ್​​​​.. ಲಿಸ್ಟ್​ನಲ್ಲಿ ಯಾರ್​​ ಯಾರಿದ್ದಾರೆ?

author-image
Bheemappa
Updated On
ಆರೆಂಜ್, ಪರ್ಪಲ್ ಕ್ಯಾಪ್ ಎರಡನ್ನೂ ಕಬಳಿಸಿದ RCB ಸ್ಟಾರ್ಸ್​​​​.. ಲಿಸ್ಟ್​ನಲ್ಲಿ ಯಾರ್​​ ಯಾರಿದ್ದಾರೆ?
Advertisment
  • ಪರ್ಪಲ್ ಕ್ಯಾಪ್ ಪಡೆದಿರುವ ಆರ್​ಸಿಬಿ ಪೇಸ್​ ಬೌಲರ್ ಯಾರು?
  • ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗೆಲುವು ಪಡೆಯುತ್ತಿದ್ದಂತೆ ಮಹತ್ವದ ಸ್ಥಾನ
  • ಬ್ಯಾಟಿಂಗ್​​ನಲ್ಲಿ ಎರಡನೇ ಸ್ಥಾನ ಪಡೆದಿರುವ ಸ್ಟಾರ್ ಬ್ಯಾಟ್ಸ್​​ಮನ್​?

ಸದ್ಯ ಈಗ ಐಪಿಎಲ್​ ಲೋಕದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ್ದೇ ಮಾತುಗಳು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಪಾಯಿಂಟ್​ ಟೇಬಲ್​ನಲ್ಲಿ ಮಹತ್ವದ ಸ್ಥಾನ ಅಲಂಕರಿಸಿದೆ. ಇದರ ಜೊತೆಗೆ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್​ ಕ್ಯಾಪ್​ಗಳು ಕೂಡ ಆರ್​ಸಿಬಿ ಬಳಿ ಇರೋದು ವಿಶೇಷ ಎನಿಸಿದೆ.

ಅರುಣ್​ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 6 ವಿಕೆಟ್​​ಗಳಿಂದ ಆರ್​ಸಿಬಿ ಗೆದ್ದಿದ್ದೇ ಗೆದ್ದಿದ್ದು ಪಾಯಿಂಟ್​ ಟೇಬಲ್​ನಲ್ಲಿ 14 ಅಂಕಗಳಿಂದ ಟಾಪ್​ನಲ್ಲಿ ಕುಳಿತುಕೊಂಡಿದೆ. ಈಗಾಗಲೇ 10 ಪಂದ್ಯ ಆಡಿರುವ ಆರ್​ಸಿಬಿ ತಂಡ 7 ಪಂದ್ಯಗಳಲ್ಲಿ ಅದ್ಭುತವಾಗಿ ಗೆಲುವು ಸಾಧಿಸಿ, ತವರಿನಲ್ಲಿ ನಡೆದಂತ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ.

ಇದನ್ನೂ ಓದಿ: RCB ಓಪನರ್​ ಫಿಲ್​ ಸಾಲ್ಟ್​ಗೆ ಏನಾಗಿದೆ ಗೊತ್ತಾ.. ಚೆನ್ನೈ ವಿರುದ್ಧ ವಿಸ್ಫೋಟಕ ಬ್ಯಾಟರ್​ ಆಡ್ತಾರಾ?

publive-image

ಅದರಂತೆ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಕೊಹ್ಲಿ ಕಳೆದ 10 ಪಂದ್ಯಗಳಿಂದ 443 ರನ್​ ಗಳಿಸುವ ಮೂಲಕ ಆರೆಂಜ್​ ಕ್ಯಾಪ್ ಪಡೆದಿದ್ದಾರೆ. ಪ್ರತಿ ಬಾರಿಯೂ ಆರೆಂಜ್​ ಕ್ಯಾಪ್ ಟಚ್ ಮಾಡೋ ಏಕೈಕ ಐಪಿಎಲ್ ಪ್ಲೇಯರ್ ಅಂದ್ರೆ ಅದು ವಿರಾಟ್ ಕೊಹ್ಲಿ ಎನ್ನಬಹುದು. ಕೊಹ್ಲಿ ನಂತರದ ಸ್ಥಾನದಲ್ಲಿ ಮುಂಬೈನ ಸೂರ್ಯಕುಮಾರ್ ಇದ್ದು ಇವರು 10 ಪಂದ್ಯಗಳಿಂದ 427 ರನ್​ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿ ಗುಜರಾತ್​ನ ಸಾಯಿ ಸುದರ್ಶನ್ ಇದ್ದು ಇವರು 8 ಮ್ಯಾಚ್​ಗಳಿಂದ 417 ರನ್​ ಕಲೆ ಹಾಕಿದ್ದಾರೆ.

ಇನ್ನು ಐಪಿಎಲ್​ ಬೌಲಿಂಗ್​ನಲ್ಲಿ ಪರ್ಪಲ್​ ಕ್ಯಾಪ್ ಯಾರ ಬಳಿ ಇದೆ ಎಂದರೆ ಅದು ಕೂಡ ಆರ್​ಸಿಬಿ ಬೌಲರ್​ಗೆ ದಕ್ಕಿದೆ. ಆರ್​ಸಿಬಿಯ ಪೇಸ್ ಬೌಲರ್ ಆಗಿರುವ ಜೋಶ್​ ಹ್ಯಾಜಲ್ವುಡ್ ಅವರು 10 ಪಂದ್ಯಗಳಿಂದ 18 ವಿಕೆಟ್ ಕಬಳಿಸೋ ಮೂಲಕ ಪರ್ಪಲ್​ ಕ್ಯಾಪ್​ಗೆ ಮುತ್ತಿಕ್ಕಿದ್ದಾರೆ. ಹ್ಯಾಜಲ್ವುಡ್ ನಂತರ ಗುಜರಾತ್ ಪ್ಲೇಯರ್​ ಕನ್ನಡಿಗ ಪ್ರಸಿದ್ಧ್ ಕೃಷ್ಣ ಇದ್ದು ಇವರು 8 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ್ದಾರೆ. 3ನೇ ಸ್ಥಾನದಲ್ಲಿ ಚೆನ್ನೈನ ನೂರ್ ಅಹ್ಮದ್, 9 ಮ್ಯಾಚ್​ಗಳಿಂದ 14 ವಿಕೆಟ್​ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment