/newsfirstlive-kannada/media/post_attachments/wp-content/uploads/2024/04/VIRAT_KOHLI-9.jpg)
ಟಿ20 ಗೇಮ್​.. ಇದು ಹೇಳಿ ಕೇಳಿ ಬ್ಯಾಟರ್​ಗಳ ಗೇಮ್. ಇಲ್ಲಿ ಬ್ಯಾಟ್​ ಎಂಬ ಮಂತ್ರ ದಂಡದಲ್ಲಿ ಸಿಕ್ಸರ್​ ಹೊಡೆಯೋರಿಗೆ ಬೆಲೆ ಜಾಸ್ತಿ. ಆದ್ರೆ, ಇದೇ ಸಿಕ್ಸರ್​ಗಳು ಕೆಲ ತಂಡಗಳ ಅಘಾತಕ್ಕೆ ಕಾರಣವಾಗಿದೆ. ಅದ್ಯಾಕೆ ಅಂತೀರಾ ಇಲ್ಲಿದೆ ಬಿಗ್ ಅಪ್​ಡೇಟ್.
ಐಪಿಎಲ್​ ಅಂದ್ರೆನೇ ರೋಚಕ ಮ್ಯಾಚ್​​ಗಳ ಹಬ್ಬದೂಟ. ಒಂದಕ್ಕಿಂತ ಇನ್ನೊಂದು ಸೂಪರ್ ಅನ್ನೋ ಮ್ಯಾಚ್​ಗಳಿಗೆ ಸಾಕ್ಷಿಯಾಗುತ್ತೆ. ವಾವ್ ಎನಿಸುವಂತ ಬ್ಯಾಟಿಂಗ್, ಈ ವೇಳೆ ಸಿಡಿಯೋ ಸಿಕ್ಸರ್​​ಗಳು ಫ್ಯಾನ್ಸ್​ಗೆ ಸಖತ್ ಕಿಕ್ ನೀಡುತ್ತೆ. ಗ್ಯಾಲರಿಯಲ್ಲಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಆದ್ರೆ, ಬೌಲರ್​ ವಿಚಾರಕ್ಕೆ ಬಂದ್ರೆ, ವೆರಿ ವೆರಿ ಬ್ಯಾಡ್. ಇದಕ್ಕೆ ಕಾರಣ ಪ್ರಸಕ್ತ ಆವೃತ್ತಿಯಲ್ಲಿ ಸಿಡಿದ ಸಿಕ್ಸರ್​ಗಳು. ಐಪಿಎಲ್ ಸೀಸನ್​​-17ರಲ್ಲಿ ಇದುವರೆಗೆ 27 ಪಂದ್ಯಗಳು ಮುಕ್ತಾಯಗೊಂಡಿವೆ. 88 ಮಂದಿ ಬ್ಯಾಟರ್​​​ಗಳಿಂದ ಬರೋಬ್ಬರಿ 446 ಸಿಕ್ಸರ್​ಗಳು ಸಿಡಿದಿವೆ. ಆದ್ರೆ, ಇದೇ ಸಿಕ್ಸರ್​ಗಳು ತಂಡಗಳ ಸಂಕಷ್ಟಕ್ಕೆ ಕಾರಣವಾಗಿದೆ. ಹೀಗಾದ್ರು ನಾನಾ.. ನೀನಾ ಎಂಬಂತೆ ಸಿಕ್ಸರ್ ಬಿಟ್ಟುಕೊಡ್ತಿವೆ.
ಇದನ್ನೂ ಓದಿ:ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಇದೇನಾ ಕಾರಣ..?
/newsfirstlive-kannada/media/post_attachments/wp-content/uploads/2024/04/RCB-KOHLI-2.jpg)
ಸಿಕ್ಸರ್ ಹೊಡೆಸಿಕೊಳ್ಳೋದ್ರಲ್ಲಿ RCBಯೇ ಫಸ್ಟ್.. ಹ್ಯಾಟ್ರಿಕ್ ವರ್ಷ ​
ಆರ್​ಸಿಬಿ ಯಾವ ವಿಚಾರವನ್ನ ಚಾಚು ತಪ್ಪದೇ ಪಾಲಿಸುತ್ತೋ ಇಲ್ವೋ, ಆದ್ರೆ, ಈ ಸಿಕ್ಸರ್​ಗಳನ್ನ ಬಿಟ್ಟುಕೊಡೊದನ್ನ ಮಾತ್ರ, ಪ್ರತಿ ವರ್ಷವೂ ಪಾಲಿಸುತ್ತೆ. ಯಾಕಂದ್ರೆ, 2022, 2023ರಲ್ಲಿ ಗರಿಷ್ಠ ಸಿಕ್ಸರ್​ ಬಿಟ್ಟುಕೊಟ್ಟ ಅಪಖ್ಯಾತಿ ಹೊಂದಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಈ ಸೀಸನ್​​ನಲ್ಲೂ ನಾನೇ ಫಸ್ಟ್ ಅಂತಿದೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಪ್ರಸಕ್ತ ಟೂರ್ನಿಯಲ್ಲಿ ಅರ್ಧದಷ್ಟು ಪಂದ್ಯಗಳನ್ನ ಆಡುವ ಮುಂಚೆಯೇ ಸಿಕ್ಸರ್​ ಬಿಟ್ಟುಕೊಡುವ ರೇಸ್​ನಲ್ಲಿ ಮುಂದಿದೆ. ಇತರೆ ತಂಡಗಳಿಗೂ ಆರ್​ಸಿಬಿಗೂ ಅಜಗಜಾಂತರ ವ್ಯತ್ಯಾಸವೇ ಇದೆ. ಬೌಲರ್​​​ಗಳು ನೀಡಿರುವ ಈ ಸಿಕ್ಸರ್​ಗಳಿಂದಲೇ ಆರ್​ಸಿಬಿ, ಅಂಕಪಟ್ಟಿಯಲ್ಲಿ ಲಾಸ್ಟ್​ಗೆ ಕುಸಿದಿದೆ.
ಸಿಕ್ಸರ್​ ನೀಡಿದ ಟಾಪ್​-5 ಟೀಮ್ಸ್..!
ಪ್ರಸಕ್ತ ಐಪಿಎಲ್​ನಲ್ಲಿ 6 ಪಂದ್ಯಗಳನ್ನಾಡಿರಯವ ಆರ್​ಸಿಬಿ, ಬರೋಬ್ಬರಿ 65 ಸಿಕ್ಸರ್​ ಬಿಟ್ಟುಕೊಟ್ಟಿದ್ರೆ. ಸನ್ ರೈಸರ್ಸ್ ಹೈದ್ರಾಬಾದ್​ 5 ಪಂದ್ಯಗಳಿಂದ 54 ಸಿಕ್ಸರ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ 5 ಪಂದ್ಯಗಳಿಂದ ಕ್ರಮವಾಗಿ 53, 47 ಸಿಕ್ಸರ್ ಬಿಟ್ಟುಕೊಟ್ಟಿದ್ರೆ. ಗುಜರಾತ್ ಟೈಟನ್ಸ್ 6 ಪಂದ್ಯಗಳಿಂದ 46 ಸಿಕ್ಸರ್​ಗಳನ್ನ ಮಾತ್ರವೇ ನೀಡಿದೆ.
/newsfirstlive-kannada/media/post_attachments/wp-content/uploads/2024/03/srh-vs-mi.jpg)
ಯಾವ ತಂಡ ಎಷ್ಟು ಸಿಕ್ಸರ್ ನೀಡಿದೆ..?
ಕೊಲ್ಕತ್ತಾ ನೈಟ್ ರೈಡರ್ಸ್​ 4 ಪಂದ್ಯಗಳಿಂದ 41 ಸಿಕ್ಸರ್​ ಬಿಟ್ಟುಕೊಟ್ಟಿದ್ರೆ. ಲಕ್ನೋ, ಪಂಜಾಬ್ 5 ಪಂದ್ಯಗಳಿಂದ ಕ್ರಮವಾಗಿ 41, 38 ಸಿಕ್ಸ್​ ಬಿಟ್ಟುಕೊಟ್ಟಿದೆ. ಇನ್ನು ಚೆನ್ನೈ 5 ಪಂದ್ಯಗಳಿಂದ 30 ಸಿಕ್ಸರ್ ನೀಡಿದ್ರೆ, ರಾಜಸ್ಥಾನ್ ರಾಯಲ್ಸ್​ ಕೇವಲ 29 ಸಿಕ್ಸರ್​ ನೀಡಿದೆ.
ಸಿಕ್ಸರ್​ ಬಿಟ್ಟುಕೊಡದವರು ಅಂಕಪಟ್ಟಿಯಲ್ಲಿ ಟಾಪ್​..!
ಒಂದ್ಕಡೆ ಸಿಕ್ಸರ್​ ಬಿಟ್ಟವರು ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿಯುತ್ತಿದ್ರೆ. ಇತ್ತ ಸಿಕ್ಸರ್​ಗಳಿಗೆ ಕಡಿವಾಣ ಹಾಕಿರುವ ತಂಡಗಳು, ಪಾಯಿಂಟ್​​ ಟೇಬಲ್​ನಲ್ಲಿ ಅಗ್ರಜರಾಗಿ ಮೆರೆಯುತ್ತಿವೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ರಾಜಸ್ಥಾನ್ ರಾಯಲ್ಸ್. ಅತಿ ಕಡಿಮೆ ಸಿಕ್ಸರ್ ಬಿಟ್ಟುಕೊಟ್ಟಿರುವ ಈ ತಂಡ, ಅಂಕಪಟ್ಟಿಯಲ್ಲಿ ನಂಬರ್​​.1 ಸ್ಥಾನದಲ್ಲಿದೆ. ಇದು ಸಹಜವಾಗೇ ಆರ್​ಸಿಬಿ, ಹಿನ್ನಡೆಗೆ ಬೌಲರ್​ಗಳೇ ಕಾರಣ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಬೌಲರ್​ಗಳ ದುಬಾರಿ ಆಟಕ್ಕೆ ಈಗಾಗಲೇ ಬೆಲೆ ತೆತ್ತಿರುವ ಆರ್​ಸಿಬಿ ಪುಟಿದೇಳಬೇಕಾದ್ರೆ, ಬೌಲರ್​ಗಳ ಫಾರ್ಮ್​ ಬಹುಮುಖ್ಯವಾಗಿದೆ. ಇನ್ನಾದ್ರು ಸ್ಟ್ರಾಂಗ್​ ಕಮ್​ಬ್ಯಾಕ್ ಮಾಡ್ತಾರಾ ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us