ಕೆನಡಾ ಟ್ರುಡೋ ಸರ್ಕಾರದ ನರಿ ಬುದ್ಧಿ ಮತ್ತೆ ಬಯಲಿಗೆ.. ದೇವಸ್ಥಾನದಲ್ಲಿ ಗಲಾಟೆ ಮಾಡಿದ್ದ ಖಲಿಸ್ತಾನಿಗೆ ಆಗಿದ್ದೇನು?

author-image
Gopal Kulkarni
Updated On
ಕೆನಡಾ ಟ್ರುಡೋ ಸರ್ಕಾರದ ನರಿ ಬುದ್ಧಿ ಮತ್ತೆ ಬಯಲಿಗೆ.. ದೇವಸ್ಥಾನದಲ್ಲಿ ಗಲಾಟೆ ಮಾಡಿದ್ದ ಖಲಿಸ್ತಾನಿಗೆ ಆಗಿದ್ದೇನು?
Advertisment
  • ದೇವಸ್ಥಾನದಲ್ಲಿ ಗಲಾಟೆ ಮಾಡಿದ್ದ ಖಲಿಸ್ತಾನಿ ಬೆಂಬಲಿಗನಿಗೆ ಲಾಕ್​
  • ಖಲಿಸ್ತಾನಿಗಳ ವಿರುದ್ಧ ಹಿಂದೂ-ಸಿಖ್ ಕಾರ್ಯಕರ್ತರ ಹೋರಾಟ
  • ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಶ್​ ದಲ್ಲಾ ಪೊಲೀಸ್ ವಶಕ್ಕೆ

ಖಲಿಸ್ತಾನಿಗಳಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ತಾನು ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡ್ತಿಲ್ಲ ಅಂತ ಹೇಳುವ ಕೆನಡಾದ ಟ್ರುಡೋ ಸರ್ಕಾರದ ನರಿ ಬುದ್ಧಿ ಮತ್ತೆ ಬಯಲಾಗಿದೆ. ದೇವಸ್ಥಾನಕ್ಕೆ ನುಗ್ಗಿ ಗಲಾಟೆ ಮಾಡಿದ್ದ ಖಲಿಸ್ತಾನಿ ಬೆಂಬಲಿಗನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಖಲಿಸ್ತಾನಿ ಉಗ್ರನೊಬ್ಬ ಕೂಡ ಲಾಕ್ ಆಗಿದ್ದು ಕೆನಡಾದ ಅಸಲಿಯತ್ತ ಬಯಲಾಗಿದೆ.

ದೇವಸ್ಥಾನದಲ್ಲಿ ಗಲಾಟೆ ಮಾಡಿದ್ದ ಖಲಿಸ್ತಾನಿ ಬೆಂಬಲಿಗನಿಗೆ ಲಾಕ್​
ಇತ್ತೀಚೆಗೆ ಕೆನಡಾದಲ್ಲಿ ಈ ಖಲಿಸ್ತಾನಿ ಬೆಂಬಲಿಗರ ಉಪಟಳ ಮೀತಿಮೀರ್ತಿದೆ. ಮೊನ್ನೆ ನವೆಂಬರ್​ 3ರಂದು ಬ್ರಾಂಪ್ಟನ್​ನ ಹಿಂದೂ ಸಭಾ ದೇವಸ್ಥಾನದ ಆವರಣದೊಳಗೆ ನುಗ್ಗಿ ಭಾರೀ ಗಲಾಟೆ ಮಾಡಿದ್ರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೆನಡಾ ಪ್ರಧಾನಿ ಟ್ರುಡೋ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಈ ಬೆನ್ನಲ್ಲೇ ಖಲಿಸ್ತಾನಿ ಬೆಂಬಲಿಗನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಂದ್ರಜಿತ್ ಗೋಸಲ್ ಎಂಬಾತನನ್ನು ಅರೆಸ್ಟ್​ ಮಾಡಲಾಗಿದೆ. ಈತ ಕೆನಡಾದಲ್ಲಿ ಸಿಖ್​ ಫಾರ್ ಜಸ್ಟಿಸ್ ಸಂಘಟನೆಯ ಸಂಯೋಜಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ನೋ ಸೆ*ಕ್ಸ್​​ ನೋ ಮ್ಯಾರೇಜ್​​ ಎಂದ ಮಹಿಳೆಯರು; ಇದಕ್ಕೂ ಟ್ರಂಪ್​ಗೂ ಏನ್​ ಸಂಬಂಧ?

publive-image

ಖಲಿಸ್ತಾನಿಗಳ ವಿರುದ್ಧ ಹಿಂದೂ-ಸಿಖ್ ಕಾರ್ಯಕರ್ತರ ಹೋರಾಟ
ಇನ್ನು ಕೆನಡಾದಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಬೆಂಬಲಿಗರು ನಡೆಸಿದ ದಾಳಿ ವಿರೋಧಿಸಿ ಹಿಂದೂ ಮತ್ತು ಸಿಖ್ ಕಾರ್ಯಕರ್ತರು ದೆಹಲಿಯ ಕೆನಡಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೆನಡಾದ ರಾಯಭಾರ ಕಚೇರಿ ಎದುರು ಭದ್ರತೆ ಹೆಚ್ಚಿಸಲಾಗಿತ್ತು. ಆದರೂ ಹಿಂದೂ ಸಿಖ್ ಗ್ಲೋಬಲ್ ಫೋರಂನ ಹಲವು ಕಾರ್ಯಕರ್ತರು, ಪೊಲೀಸ್ ಬ್ಯಾರಿಕೇಡ್‌ಗಳನ್ನು ಕೆಡವಿ ಹಾಕಿದ್ದಾರೆ. ಹಿಂದೂಗಳು ಮತ್ತು ಸಿಖ್ಖರು ಒಗ್ಗಟ್ಟಾಗಿದ್ದಾರೆ ಎಂದು ಘೋಷಣೆ ಕೂಗಿದ್ರು.

ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಶದೀಪ್ ದಲ್ಲಾ ಪೊಲೀಸ್ ವಶಕ್ಕೆ
ಇಷ್ಟೆಲ್ಲ ಬೆಳವಣಿಗೆಗಳ ಬೆನ್ನಲ್ಲೇ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ, ಮತ್ತೊಬ್ಬ ಖಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಅಲಿಯಾಸ್​ ಅರ್ಶ್ ದಲ್ಲಾನನ್ನು ಕೆನಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಹಾಗೂ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ ಸಹಾಯಕ ಅರ್ಶ್ ದಲ್ಲಾನನ್ನ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನಡೆದ ಶೂಟೌಟ್ ಸಂಬಂಧ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಶದೀಪ್ ದಲ್ಲಾನ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೈಸುಟ್ಟುಕೊಂಡ ಕೆನಡ ಇದೀಗ ಮತ್ತೊಂದು ಮುಖಭಂಗ ಅನುಭವಿಸಿದೆ.
ಇನ್ನು ಭಾರತ ನೀಡಿದ ಉಗ್ರರ ಪಟ್ಟಿಯಲ್ಲಿ ಅರ್ಶದೀಪ್ ದಲ್ಲಾ ಮೋಸ್ಟ್ ವಾಂಟೆಡ್. ಈತನನ್ನು ವಶಕ್ಕೆ ಪಡೆಯುವ ಮೂಲಕ ಭಾರತದ ಹಲವು ಮೋಸ್ಟ್ ವಾಂಟೆಡ್ ಉಗ್ರರಿಗೆ ಕೆನಡಾ ಆಶ್ರಯ ನೀಡುತ್ತಿದೆ ಅನ್ನೋದು ಸಾಬೀತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment