/newsfirstlive-kannada/media/post_attachments/wp-content/uploads/2025/01/SHIVANNA-1.jpg)
ನಿನ್ನೆ ರಾತ್ರಿ ವ್ಯಕ್ತಿಯೊಬ್ಬ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರ ಜೀವ ತೆಗೆದಿದ್ದಾನೆ ಎಂದು ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಕೌಟುಂಬಿಕ ವಿಚಾರ ಗಲಾಟೆ ಮಾಡಿ ನಾಲ್ವರ ಬದುಕನ್ನು ಅಂತ್ಯಗೊಳಿಸಿದ್ದಾನೆ. ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಐವರ ಮಣಿಕಟ್ಟಿನಲ್ಲಿ ಕೊಯ್ದಿರುವ ಗಾಯ ಪತ್ತೆಯಾಗಿದೆ. ಜೊತೆಗೆ ಇವರು ಧರಿಸಿದ್ದ ಬಟ್ಟೆಗಳೆಲ್ಲ ರಕ್ತಸಿಕ್ತಗೊಂಡಿವೆ . ಬಂಧಿತ ಆರೋಪಿ ಯನ್ನು ತನಿಖೆಗೆ ಒಳಪಡಿಸಿದ್ದೇವೆ. ಆಹಾರದಲ್ಲಿ ವಿಷವನ್ನು ನೀಡಿ ಅಪರಾಧ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಕೆಲವರನ್ನು ಕತ್ತು ಹಿಸುಕಿ ಅಪರಾಧ ಮಾಡಿದೆ. ಇನ್ನು ಕೆಲವರನ್ನು ಬ್ಲೇಡ್​ನಿಂದ ಕೊಯ್ದಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಅಪರಾಧ ಮಾಡಿದ ಬಳಿಕ ವಿಡಿಯೋ ಮಾಡಿಕೊಂಡಿರೋದಾಗಿ ತಿಳಿಸಿದ್ದಾನೆ. ಇವರ ಆಸ್ತಿ ಮೇಲೆ ನೆರೆಹೊರೆಯವರ ಕಣ್ಣು ಬಿದ್ದಿತ್ತು. ಅದಕ್ಕಾಗಿ ಸಹೋದರಿಯರನ್ನು ಹೈದರಾಬಾದ್​​ಗೆ ಮಾರಾಟ ಮಾಡಲು ಪ್ಲಾನ್ ಮಾಡಲಾಗಿತ್ತು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ಗಂಭೀರ್ ಬುಡಕ್ಕೆ ಬಂದ ಬಿಸಿಸಿಐ.. ಮಹತ್ವದ ನಿರ್ಧಾರಕ್ಕೆ ಬಂದ ಬಿಗ್​ಬಾಸ್​..!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೃತ್ಯಕ್ಕೂ ಮೊದಲು ಆರೋಪಿ ಕುಟುಂಬಸ್ಥರಿಗೆ ಮದ್ಯ ನೀಡಿದ್ದಾನೆ. ಈ ಪ್ರಕರಣದಲ್ಲಿ ಆರೋಪಿ ಅರ್ಷದ್ ತಂದೆಯನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಆತನಿಗಾಗಿ ಹುಟುಕಾಟ ನಡೆಸಿದ್ದೇವೆ. ಇವರ ಕುಟುಂಬ ಆಗ್ರದಲ್ಲಿ ವಾಸವಿತ್ತು. ಡಿಸೆಂಬರ್ 30 ರಂದು ಉತ್ತರ ಪ್ರದೇಶಕ್ಕೆ ಬಂದು ರೆಸ್ಟೋರೆಂಟ್​ನಲ್ಲಿ ವಾಸ್ತವ್ಯ ಹೂಡಿತ್ತು. ಅರ್ಷದ್ ತಾಯಿ ಹೆಸರು ಅಸ್ಮಾ, 9, 16, 18 ಹಾಗೂ 19 ವರ್ಷದ ಸಹೋದರಿಯರ ಜೀವಕ್ಕೆ ಕುತ್ತು ತಂದಿದ್ದಾನೆ. ಈತನಿಗೆ ಕೇವಲ 23 ವರ್ಷ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಪ್ರೀತಿಯ ಶುಭಾಶಯ ಹೇಳಿದ ಶಿವಣ್ಣ; ಕ್ಯಾನ್ಸರ್​ ವಿರುದ್ಧ ಗೆದ್ದ ಹೋರಾಟದ ಬಗ್ಗೆ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us