ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ತಾಯಿ ಮಕ್ಕಳು.. ಆಮೇಲೆ ಆಗಿದ್ದೇನು?

author-image
Gopal Kulkarni
Updated On
ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ತಾಯಿ ಮಕ್ಕಳು.. ಆಮೇಲೆ ಆಗಿದ್ದೇನು?
Advertisment
  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ನಾಲೆಗೆ ಬಿದ್ದ ತಾಯಿ, ಮಕ್ಕಳು
  • ಮಂಡ್ಯ ಜಿಲ್ಲೆಯ ವಿ.ಸಿ ನಾಲೆಯಲ್ಲಿ ಘಟನೆ, ತಾಯಿಯ ರಕ್ಷಣೆ
  • ಘಟನೆಯಲ್ಲಿ ತಾಯಿಯ ರಕ್ಷಣೆ, ಇಬ್ಬರು ಮಕ್ಕಳು ಮಾತ್ರ ನಾಪತ್ತೆ

ಮೈಸೂರು ಒಡೆಯರು ಕಾವೇರಿ ನದಿಗೆ ಜಲಾಶಯ ನಿರ್ಮಾಣ ಮಾಡಿ ಮಂಡ್ಯ ಜಿಲ್ಲೆಯ ರೈತರಿಗೆ ಕೃಷಿ ಬೆಳೆಗೆ ಅನುಕೂಲ ಮಾಡಿಕೊಡಲೆಂದು ಕಾಲುವೆಗಳನ್ನು ನಿರ್ಮಿಸಿದ್ದಾರೆ.. ಆದ್ರೆ ಕೆಲವು ನಾಲೆಯ ಬಳಿ ಹುಚ್ಚಾಟ ಆಡಲು ಹೋಗಿ ತಮ್ಮ ಜೀವಕ್ಕೆ ಕುತ್ತು ತಂದು ಕೊಳ್ತಿದ್ದಾರೆ.

ಬನಘಟ್ಟ ಸಮೀಪದ ವಿಸಿ ನಾಲೆಯ ಬಳಿ ಇಬ್ಬರು ಮಕ್ಕಳು ಮತ್ತು ತಾಯಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಮೊದಲು 8 ವರ್ಷದ ಮಗು ನೀರಿನ ಸೆಳೆತಕ್ಕೆ ಸಿಲುಕಿದ್ದಾಳೆ. ತಾಯಿಯು ಮಗಳನ್ನು ರಕ್ಷಿಸಲು ಮುಂದಾಗ 2 ವರ್ಷದ ಕಿಶನ್​ ಕೂಡ ನೀರಿ ಬಿದ್ದಿದ್ದಾನೆ. ಇನ್ನು ಮಕ್ಕಳನ್ನು ರಕ್ಷಿಸಲು ಯತ್ನಿಸಿದಾ ಆಯತಪ್ಪಿ ತಾಯಿ ಕೂಡ ನೀರಿಗೆ ಬಿದ್ದಿದ್ದಾಳೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಇದನ್ನು ನೋಡಿ, ನಾಲೆಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ:ಗಂಗಾ ಸ್ನಾನದಿಂದ ಬಡತನಕ್ಕೆ ಮುಕ್ತಿ ಸಿಗಲ್ಲ ಎಂದ ಖರ್ಗೆ; ಬಿಜೆಪಿ ನಾಯಕರು ನಿಗಿನಿಗಿ ಕೆಂಡ..!

ದುರಂತದ ಸಂಗತಿಯಂದ್ರೆ, ಸ್ಥಳೀಯರು ಮಹಿಳೆಯನ್ನ ರಕ್ಷಿಸಿದ್ದಾರೆ. ಆದ್ರೆ ಇಬ್ಬರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ನೀರಿನ ಹರಿವು ಹೆಚ್ಚಿದ್ದ ಕಾರಣ, ಇಬ್ಬರು ಮಕ್ಕಳು ನೀರಿನಲ್ಲಿ ನಾಪತ್ತೆ ಆಗಿದ್ದಾರೆ.. ಕತ್ತಲಾದ ಪರಿಣಾಮ ನಾಳೆಯೂ ಮಕ್ಕಳಿಗಾಗಿ ಶೋಧ ಕಾರ್ಯ ನಡೆಯಲಿದೆ.  ಸೆಲ್ಪಿ ಹುಚ್ಚು ತಾಯಿ ಮತ್ತು ಇಬ್ಬರು ಮಕ್ಕಳ ಜೀವಕ್ಕೆ ಕಂಠಕವಾಗಿದ್ದು. ಮಕ್ಕಳು ಸುರಕ್ಷಿತವಾಗಿ ಬರೆಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment