/newsfirstlive-kannada/media/post_attachments/wp-content/uploads/2025/07/BNG_MOTHER_DOUGHTER.jpg)
ಬೆಂಗಳೂರು: ಭೀಮನ ಅಮಾವಾಸ್ಯೆ ಎಲ್ಲರಿಗೂ ಶ್ರೇಷ್ಠವಾದದ್ದು. ಅದರಲ್ಲಿ ವಿವಾಹಿತ ಮಹಿಳೆಯರು ಗಂಡನ ದೀರ್ಘಾಯಷ್ಯ ಕೋರಿ ಶಿವ ಮತ್ತು ಪಾರ್ವತಿನ ಪೂಜಿಸುತ್ತಾರೆ. ಇಂತಹ ದಿನದಂದೇ ಗಂಡ, ಹೆಂಡತಿ ಜಗಳವಾಡಿದ್ದು ಈ ಗಲಾಟೆಯಲ್ಲಿ ತನ್ನ ಮಗಳ ಕತ್ತು ಹಿಸುಕಿ ತಾಯಿಯೇ ಜೀವ ತೆಗೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆ.ಜಿ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಜಿ ಲಕ್ಕೇನಹಳ್ಳಿ ಗ್ರಾಮದ ನಿವಾಸಿ ಜಯರಾಮ್ (34), ಮಹಾಲಕ್ಷ್ಮಿ (28) ದಂಪತಿ. ಇವರ ಮಗು ಸಿರಿ (5) ಜೀವ ಬಿಟ್ಟಿದೆ. ತಾಯಿ ಮಹಾಲಕ್ಷ್ಮಿ ಕತ್ತು ಹಿಸುಕಿ ಸಿರಿಯ ಜೀವ ತೆಗೆದಿದ್ದಾರೆ. ಇಷ್ಟೇ ಅಲ್ಲದೇ ತಾನು ಕೂಡ ಜೀವ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಮನೆಯವರು ಡೋರ್ ಒಡೆದು ಒಳಗೆ ಹೋಗಿ ಆಕೆಯನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಯರಾಮ್ ಹಾಗೂ ಮಹಾಲಕ್ಷ್ಮಿ ಇಬ್ಬರೂ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗುವಿದೆ. 2 ವರ್ಷದಿಂದ ಕೆಲಸವಿಲ್ಲದೆ ಕುಡಿತಕ್ಕೆ ದಾಸನಾಗಿದ್ದ ಪತಿ, ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದನು. ಹೀಗಾಗಿ ಮನೆಯಲ್ಲಿ ಹಾಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ
ಅದೇ ರೀತಿ ನಿನ್ನೆ ಇಬ್ಬರ ನಡುವೆ ಜಗಳ ನಡೆದಿದ್ದು ಗಲಾಟೆ ತಾರಕಕ್ಕೇರಿದೆ. ಈ ವೇಳೆ ಕೋಣೆಗೆ ಹೋಗಿ ಮಹಾಲಕ್ಷ್ಮಿ ಬಾಗಿಲು ಹಾಕಿಕೊಂಡಿದ್ದಾರೆ. ಜೊತೆಗೆ ಮಗುವನ್ನು ಒಳಗೆ ಕರೆದುಕೊಂಡು ಹೋಗಿದ್ದು ಮಗುವಿನ ಕತ್ತು ಹಿಸುಕಿ ಜೀವ ತೆಗೆದಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾಳೆ. ಆದರೆ ಕೂಡಲೇ ಮನೆಯವರು ಡೋರ್ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಹಾಲಕ್ಷ್ಮಿಯನ್ನ ರಕ್ಷಣೆ ಮಾಡಿದ್ದಾರೆ.
ಬಳಿಕ ಮಹಿಳೆಯನ್ನ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ಡಾ. ವೆಂಕಟೇಶ್ ಪ್ರಸನ್ನ, ಸಿಪಿಐ ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆಕೆಯ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ