/newsfirstlive-kannada/media/post_attachments/wp-content/uploads/2025/04/Mother-Son-Death2.jpg)
ಚಿತ್ರದುರ್ಗ: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ತಾಯಿ ಹಾಗೂ ಮಗ ಸಾವನ್ನಪ್ಪಿರೋ ಘಟನೆ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿಯಲ್ಲಿ ನಡೆದಿದೆ. ಬೋರಮ್ಮ(25), ಪುತ್ರ ಅಜಯ್ (05) ಮೃತ ದುರ್ದೈವಿಗಳು.
ಇದನ್ನೂ ಓದಿ:ತಂಪೆರೆದ ಮಳೆ, ಭೂಮಿಗೆ ಬಂತು ಜೀವಕಳೆ.. ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗ್ತಿದೆ..?
ಅಜಯ್ಗೆ ಬಾತ್ ರೂಮ್ಗಾಗಿ ಎಳೆದಿದ್ದ ವೈಯರ್ ಸ್ಪರ್ಶಿಸಿದೆ. ಆಗ ಮಗ ಅಜಯ್ಗೆ ವಿದ್ಯುತ್ ಶಾಕ್ ತಪ್ಪಿಸಲು ಹೋಗಿ ತಾಯಿಗೂ ಶಾಕ್ ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಯಿ ಹಾಗೂ ಮಗನ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಚಳ್ಳಕೆರೆ DYSP ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ