ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನು?

author-image
Veena Gangani
Updated On
ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನು?
Advertisment
  • ಮನೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ನಡೆದ ದುರಂತ
  • ಸ್ನಾನ ಮಾಡಲು ಹೋದ ಮಗ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ
  • ಮಾಗಡಿ ಪಟ್ಟಣದ ಜ್ಯೋತಿ ನಗರದಲ್ಲಿ ನಡೆದ ದಾರುಣ ಘಟನೆ

ರಾಮನಗರ: ಗ್ಯಾಸ್‌ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಮಾಗಡಿ ಪಟ್ಟಣದ ಜ್ಯೋತಿ ನಗರದಲ್ಲಿ ನಡೆದಿದೆ. ಶೋಭ (38), ದಿಲೀಪ್ (16) ಮೃತ ದುರ್ದೈವಿಗಳು. ಮನೆಯಲ್ಲಿ ಸ್ನಾನ ಮಾಡಲು ಅಂತ ದಿಲೀಪ್ ಹೋಗಿದ್ದ ವೇಳೆ ಗೀಸರ್ ಅನಿಲ ಸೋರಿಕೆಯಾಗಿದೆ.

ಇದನ್ನೂ ಓದಿ:ಬೆಂಗಳೂರು IT ಉದ್ಯೋಗಿಗಳಿಗೆ 14 ಗಂಟೆ ಕೆಲಸ.. ಹೋರಾಟದ ಬಳಿಕ ರಾಜ್ಯ ಸರ್ಕಾರದ ನಿಲುವೇನು?

ಸೋರಿಕೆಯಾದ ಅನಿಲ ಸೇವಿಸಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ನಾನ ಮಾಡಲು ಹೋದ ದಿಲೀಪ್​ ಸಾಕಷ್ಟು ಸಮಯ ಕಳೆದರೂ ಹೊರ ಬಾರದ ಹಿನ್ನೆಲೆಯಲ್ಲಿ ತಾಯಿ ಕೂಡ ಒಳಗಡೆ ಹೋಗಿದ್ದಾಳೆ. ಇದೇ ವೇಳೆ ಗೀಸರ್ ಗ್ಯಾಸ್ ಗಾಳಿ ಸೇವಿಸಿ ತಾಯಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಾಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment