/newsfirstlive-kannada/media/post_attachments/wp-content/uploads/2025/07/DELHI-1.jpg)
ಜನನಿಬಿಡ ದಕ್ಷಿಣ ದೆಹಲಿಯ ಲಜಪತ್ ನಗರದಲ್ಲಿ ತಾಯಿ, ಮಗನ ಬರ್ಬರವಾಗಿ ಮುಗಿಸಲಾಗಿದೆ. ಕಳೆದ ರಾತ್ರಿ ಮನೆಗೆಲಸದವನಿಂದಲೇ ಈ ಕೃತ್ಯ ನಡೆದಿದೆ. ಮನೆ ಕೆಲಸದ ವಿಷಯಕ್ಕೆ ಬೈದ್ದಿದ್ದಕ್ಕೆ ಸಿಟ್ಟಾಗಿ ಅಪರಾಧ ನಡೆಸಿದ್ದಾನೆ. ರುಚಿಕಾ ಶೈವಾನಿ, 14 ವರ್ಷದ ಮಗ ಕ್ರಿಶ್ನನ್ನು ಮನೆ ಕೆಲಸಕ್ಕೆ ಇದ್ದ ಮುಖೇಶ್ ಸಾಯಿಸಿದ್ದಾನೆ. ರುಚಿಕಾ ಪತಿ ಕುಲದೀಪ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಗೂಡ್ಸ್ ವಾಹನ ಬಾವಿಗೆ ಬಿದ್ದು ಇಬ್ಬರು ಬಲಿ; ಮಗನ ಸುದ್ದಿ ತಿಳಿದು ತಾಯಿಗೆ ಹೃದಯಾಘಾತ
ಲಜಪತ್ ನಗರ ಮಾರ್ಕೆಟ್ನಲ್ಲಿ ಕುಲದೀಪ್, ರುಚಿಕಾ ದಂಪತಿ ಬಟ್ಟೆ ಅಂಗಡಿ ಹೊಂದಿದ್ದರು. ಕುಲದೀಪ್- ರುಚಿಕಾ ಮನೆಯಲ್ಲಿ ಮನೆ ಕೆಲಸ, ಕಾರ್ ಡ್ರೈವರ್ ಆಗಿ ಮುಖೇಶ್ ಕೆಲಸ ಮಾಡುತ್ತಿದ್ದ. ಕೃತ್ಯ ನಡೆಸಿದ ಬಳಿಕ ಸಿಟಿ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಮುಖೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಏರಿಯಾದ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ, ಹೆಚ್ಚಿನ ತನಿಖೆಯನ್ನು ಲಜಪತ್ ನಗರ ಪೊಲೀಸರು ನಡೆಸುತ್ತಿದ್ದಾರೆ. ಬಿಹಾರ ರಾಜ್ಯದ ಮುಖೇಶ್ ದೆಹಲಿಯಲ್ಲಿ ಮನೆ ಕೆಲಸ, ಕಾರ್ ಡ್ರೈವಿಂಗ್, ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಲಜಪತ್ ನಗರ ಪಕ್ಕದ ಅಮರ್ ಕಾಲೋನಿಯಲ್ಲಿ ವಾಸವಿದ್ದ. ಮನೆ ಕೆಲಸದ ವಿಷಯಕ್ಕೆ ಬೈದ್ದಿದ್ದಕ್ಕಾಗಿ ಕೋಪಗೊಂಡು ಕುತ್ತಿಗೆ ಸೀಳಿದ್ದಾನೆ.
ಇದನ್ನೂ ಓದಿ: Ramayana Teaser: 5000 ವರ್ಷಗಳಿಂದ ಆರಾಧಿಸ್ತಿರುವ ರಾಮ-ರಾವಣರ ಅಮರಕತೆಯೇ.. ರಾಮಾಯಣ..!
ಕಳೆದ ರಾತ್ರಿ ಕುಲದೀಪ್ ಮನೆಗೆ ಬಂದಾಗ, ಮನೆಯ ಬಾಗಿಲ, ಮೆಟ್ಟಿಲು ಬಳಿ ರಕ್ತದ ಕಲೆಗಳು ಕಂಡಿವೆ. ಪತ್ನಿ ರುಚಿಕಾ ಕಣ್ಣಿಗೆ ಕಂಡಿಲ್ಲ. ಮನೆಯ ಬಾಗಿಲು ಹಾಕಿತ್ತು. ತಕ್ಷಣವೇ ಕುಲದೀಪ್ ತನ್ನ ಪತ್ನಿ , ಮಗ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಕಂಟ್ರೋಲ್ ರೂಮುಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ, ಮನೆಯ ಹಾಲ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರುಚಿಕಾ ಶವ ಪತ್ತೆಯಾಗಿದೆ. 14 ವರ್ಷದ ಕ್ರಿಶ್ ಶವ ಬಾತ್ ರೂಮುನಲ್ಲಿ ಪತ್ತೆಯಾಗಿದೆ. ಪಾರ್ಥೀವ ಶರೀರಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಫೋರೆನ್ಸಿಕ್ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: 1,00,000 ಉದ್ಯೋಗಿಗಳನ್ನ ಮನೆಗೆ ಕಳುಹಿಸಿದ ಟೆಕ್ ಕಂಪನಿಗಳು.. ಇನ್ನೂ 3 ವರ್ಷ ಇದೇ ಕತೆ -ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ