ತನ್ನ ಚಟಕ್ಕಾಗಿ ಅಮ್ಮನ ಮಾಂಗಲ್ಯ ಸರದ ಮೇಲೆ ಪುತ್ರನ ಕಣ್ಣು.. ಹೆತ್ತ ತಾಯಿಗೇ ಚೂರಿ ಚುಚ್ಚಿಬಿಟ್ಟ ಪಾಪಿ

author-image
Ganesh
Updated On
ತನ್ನ ಚಟಕ್ಕಾಗಿ ಅಮ್ಮನ ಮಾಂಗಲ್ಯ ಸರದ ಮೇಲೆ ಪುತ್ರನ ಕಣ್ಣು.. ಹೆತ್ತ ತಾಯಿಗೇ ಚೂರಿ ಚುಚ್ಚಿಬಿಟ್ಟ ಪಾಪಿ
Advertisment
  • ಮುದ್ದಿನ ಮಗ ಎಂದು ಹಣ ನೀಡ್ತಿದ್ದ ತಾಯಿ
  • ಅಮ್ಮ ಕೊಟ್ಟ ಹಣದಲ್ಲಿ ಈತ ಮಾಡ್ತಿದ್ದ ದರ್ಬಾರ್
  • ಪೊಲೀಸರಿಂದ ಆರೋಪಿಯ ಬಂಧನ, ತೀವ್ರ ತನಿಖೆ

ಬೆಂಗಳೂರು: ಪಾಪಿ ಮಗನೊಬ್ಬ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತಾ ತಾಯಿಗೆ ಚಾಕು ಇರಿದು ಆಕೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ಕೊಂಡು ಹೋದ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಟಕ್ಕಾಗಿ ಅಮ್ಮನ ತಾಳಿ ಮೇಲೆ ಕಣ್ಣು

ರಾಹುಲ್ ಅಲಿಯಾಸ್ ಕಲರ್ಸ್ ಚಿನ್ನದ ಸರ ದೋಚಿದ ಪಾಪಿ. ಕುಡಿತದ ಚಟಕ್ಕೆ ಬಿದ್ದಿದ್ದ ರಾಹುಲ್, ಅಮ್ಮನಿಂದ ಆಗಾಗ ಹಣ ಪಡೆಯುತ್ತಿದ್ದ. ತಾಯಿ ಜಯಲಕ್ಷ್ಮಿ ಕೂಲಿ ಕೆಲಸ ಮಾಡಿ ಮಗನ ಖರ್ಚಿಗೆ ಅಂತಾ ಒಂದಷ್ಟು ಹಣವನ್ನು ನೀಡುತ್ತಿದ್ದಳು. ಅಮ್ಮ ನೀಡುತ್ತಿದ್ದ ಹಣದಲ್ಲಿ ಕುಡಿಯಲು ಶುರುಮಾಡಿದ್ದ. ಮಗ ಕುಡಿತದ ಚಟಕ್ಕೆ ಬಿದ್ದಿದ್ದಾನೆ ಅಂತಾ ತಿಳಿದ ಅಮ್ಮ, ಕಳೆದ ಎರಡ್ಮೂರು ದಿನಗಳಿಂದ ಖರ್ಚಿಗೆ ಹಣ ಕೊಟ್ಟಿರಲಿಲ್ಲ.

ಇದನ್ನೂ ಓದಿ: Ganguly Car Accident : ಭೀಕರ ಅಪಘಾತದಿಂದ ದಾದಾ ಕೂದಲೆಳೆ ಅಂತರದಲ್ಲಿ ಪಾರು

ಅಮಲಿನ ದಾಸನಾಗಿದ್ದ ರಾಹುಲ್, ಅಮ್ಮನ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ವಿಜಯಲಕ್ಷ್ಮಿ ಬಳಿ ಹಣ ಇರಲಿಲ್ಲ. ಇದೇ ವಿಚಾರಕ್ಕೆ ಗಲಾಟೆ ತೆಗೆದ ರಾಹುಲ್, ಹಣ ಇಲ್ಲ ಅಂದ್ರೆ ಕೊರಳಲ್ಲಿ ಇರುವ ತಾಳಿ ಸರ ಕೊಡು ಎಂದಿದ್ದಾನೆ.

ಇದೇ ಗಲಾಟೆಯಲ್ಲಿ ತಾಯಿಗೆ ಚಾಕು ಇರಿದು ತಾಳಿ ಸರ ಕಿತ್ಕೊಂಡು ಪರಾರಿ ಆಗಿದ್ದಾನೆ. ಗಾಯಗೊಂಡ ವಿಜಯಲಕ್ಷ್ಮಿಯ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಆಕೆಯ ನಿವಾಸಕ್ಕೆ ದೌಡಾಯಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆ ಯತ್ನ ಪ್ರಕರಣದ ಅಡಿಯಲ್ಲಿ ಜ್ಞಾನಭಾರತೀ ಠಾಣೆ ಪೊಲೀಸರು ಆರೋಪಿಯನ್ನ ಬಂದಿಸಿದ್ದಾರೆ.

ಇದನ್ನೂ ಓದಿ: Champions Trophy; ಭಾರತ ಶುಭಾರಂಭ, ಗಿಲ್​ ಸೆಂಚುರಿ.. ಕನ್ನಡಿಗನ ವಿನ್ನಿಂಗ್ ಶಾಟ್ ಹೇಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment