Advertisment

ಯಾರಿಗುಂಟು ಯಾರಿಗಿಲ್ಲ.. ಒಂದೇ ಸೀರಿಯಲ್​ನಲ್ಲಿ ತಾಯಿ, ಮಗ, ಮಗಳು ಜಬರ್ದಸ್ತ್​ ನಟನೆ

author-image
Veena Gangani
Updated On
ಯಾರಿಗುಂಟು ಯಾರಿಗಿಲ್ಲ.. ಒಂದೇ ಸೀರಿಯಲ್​ನಲ್ಲಿ ತಾಯಿ, ಮಗ, ಮಗಳು ಜಬರ್ದಸ್ತ್​ ನಟನೆ
Advertisment
  • ರೇಟಿಂಗ್​ ರೇಸ್​ನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್​ದೇ ಫುಲ್​ ಹವಾ
  • ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಈ ಸೀರಿಯಲ್​​
  • ಒಂದೇ ಸೀರಿಯಲ್​ನಲ್ಲಿ ಇಡೀ ಕುಟುಂಬ ನಟನೆ.. ಯಾರದು..?

ಜಬರ್ದಸ್ತ್​ ಮನರಂಜನೆಯ ಸಂಪೂರ್ಣ ಪ್ಯಾಕೇಜ್ ಆಗಿದೆ ಲಕ್ಷ್ಮೀ ನಿವಾಸ. ರೇಟಿಂಗ್​ ರೇಸ್​ನಲ್ಲಿ ಲಕ್ಷ್ಮೀ ನಿವಾಸದ್ದೇ ಫುಲ್​ ಹವಾ. ಲಕ್ಷ್ಮೀ ನಿವಾಸದ ದೊಡ್ಡ ತಾರಬಳಗಕ್ಕೆ ಹೊಸ ಕಲಾವಿದರು ಸೇರ್ಪಡೆಯಾಗಿದ್ದಾರೆ. ಇಲ್ಲೊಂದು ವಿಶೇಷವಾದ ಸಮಾಚಾರ ಇದೆ. ತಪ್ಪೇ ಮಾಡದೇ ಜೈಲು ಸೇರಿರೋ ಮಾತು ಬಾರದ ವೆಂಕಿ ಸದ್ಯ ರಿಲೀಸ್​ ಆಗಿದ್ದಾನೆ. ಇತ್ತ ಚೆಲುವಿ ಫುಲ್​ ಖುಷ್​ ಆಗಿದ್ದಾರೆ. ಇನ್ನೂ, ಇದೇ ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಒಂದೇ ಕುಟುಂಬದ ಮೂವರು ನಟಿಸುತ್ತಿದ್ದಾರೆ.

Advertisment

publive-image

ಹೌದು, ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ ಹಾಗೂ ಮಗಳು ಅಭಿನಯಿಸುತ್ತಿದ್ದಾರೆ. ಚೆಲುವಿಯ ಕಣ್ಣು ಕಾಣದ ತಾಯಿ ಪಾತ್ರ ಮಾಡ್ತಿರೋದು ಬೇರೆ ಯಾರು ಅಲ್ಲ ಸಿದ್ದೇಗೌಡ್ರು ಅಂದ್ರೇ ಧನಂಜಯ್​ ಅವರ ಸ್ವಂತ ತಾಯಿ. ಹಿರಿಯ ನಟಿ ಅನ್ನಪೂರ್ಣ. ವರ್ಷಗಳಿಂದ ಇಂಡಸ್ಟ್ರಿಯಲ್ಲಿರೋ ಕಲಾವಿದೆ ಆಗಿದ್ದಾರೆ ಅನ್ನಪೂರ್ಣ ಅವರು. ನೂರಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ

publive-image

ನಟಿ ಅನ್ನಪೂರ್ಣ ಅವರಿಗೆ ಇಬ್ಬರೂ ಮಕ್ಕಳಿದ್ದಾರೆ. ಮಗಳು ಮಹಾಲಕ್ಷ್ಮೀ ಮಾಡಲ್​, ನಟಿ ಕೂಡ ಹೌದು. ಮಗ ಧನಂಜಯ್ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ​ ಸಿದ್ದೇಗೌಡ್ರು ಪಾತ್ರದ ಮೂಲಕ ಸದ್ಯ ಮಗನ ಇನ್ನಿಂಗ್ಸ್​ ಶುರುವಾಗಿದೆ. ಇದೀಗ ಈ ಜಾಗಕ್ಕೆ ನಟಿ ಅನ್ನಪೂರ್ಣ ಅವರ ಮಗಳು ಲಕ್ಷ್ಮೀ ನಿವಾಸ ಸೀರಿಯಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

Advertisment

publive-image

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದಾರೆ. ವೀಕ್ಷಕರಿಗೆ ವಿಶ್ವ ಹಾಗೂ ತನು ಪಾತ್ರ ತುಂಬ ಇಷ್ಟ ಆಗಿತ್ತು. ಮುದ್ದು ಮುದ್ದಾಗಿ ವಿಶ್ವ.. ವಿಶ್ವ ಅಂತ ಓಡಾಡಿಕೊಂಡಿದ್ದ ಚಲುವೆ ತನು ಏಕಾಏಕಿ ಸೀರಿಯಲ್​ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್​ ಕೊಟ್ಟಿದ್ದಾರೆ. ನಟಿ ತನು ಪಾತ್ರಧಾರಿ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ನಟಿ ಮಹಾಲಕ್ಷ್ಮೀ ಬೇರೆ ಯಾರು ಅಲ್ಲ, ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಿದ್ದೇಗೌಡರ ಪಾತ್ರದಲ್ಲಿ ನಟಿಸುತ್ತಿರೋದು ನಟ ಧನಂಜಯ್ ಅವರ ತಂಗಿಯಾಗಿದ್ದಾರೆ.

publive-image

ನಟಿ ಮಹಾಲಕ್ಷ್ಮೀ ಈಗಾಗಲೇ ಕುಬುಸ, ಥಗ್ಸ್‌ ಆಫ್‌ ರಾಮಘಡ, ಸ್ವಪ್ನ ಮಂಟಪ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಧನಂಜಯ ಅವರ ನಿಜವಾದ ಅಮ್ಮ ಚೆಲುವು ತಾಯಿಯಾಗಿ ನಟಿಸುತ್ತಿದ್ದಾರೆ. ಈಗ ತನು ಜಾಗಕ್ಕೆ ಅವರ ನಿಜವಾದ ತಂಗಿ ಎಂಟ್ರಿ ಕೊಟ್ಟಿದ್ದಾರೆ. ಖುಷಿಯ ವಿಚಾರ ಏನೆಂದರೆ ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ-ಮಗಳು ನಟಿಸುತ್ತಿರೋದು. ಈ ವಿಚಾರ ಸೀರಿಯಲ್ ವೀಕ್ಷಕರಿಗೂ ಖುಷಿ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment