ವಿಷ ಸೇವಿಸಿ ಸಾವಿಗೆ ಶರಣಾದ ಅಮ್ಮ, ತಮ್ಮ, ಮಗ.. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?

author-image
AS Harshith
Updated On
ವಿಷ ಸೇವಿಸಿ ಸಾವಿಗೆ ಶರಣಾದ ಅಮ್ಮ, ತಮ್ಮ, ಮಗ.. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?
Advertisment
  • ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ಮೂವರು
  • ವಿಷ ಸೇವಿಸಿ ಬದುಕು ಮುಗಿಸಿದ ಅಮ್ಮ, ತಮ್ಮ ಮತ್ತು ಮಗ
  • ಫೋನ್​ ಕರೆ ಸ್ವೀಕರಿಸದಾಗ ಸಂಬಂಧಿಕರಿಗೆ ಬಂತು ಅನುಮಾನ

ಶಿವಮೊಗ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ವಿಷ ಸೇವಿಸಿ, ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಲ್ಲಿನ ಕ್ಲಾರ್ಕ್ ಪೇಟೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಭುವನೇಶ್ವರಿ, ಮಾರುತಿ, ಹಾಗೂ ದರ್ಶನ್ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಶಿವಮೊಗ್ಗದ ಒಟಿ ರಸ್ತೆಯ ವಿಜಯ ಗ್ಯಾರೇಜ್ ಬಳಿಯ ಮನೆಯಲ್ಲಿ ಮೂವರು ವಿಷ ಸೇವಿಸಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆ ಸಂಬಂಧಿಗಳು ಮನೆಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಹಿಳೆಯರು ಗಂಭೀರ; ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರು

ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭುವನೇಶ್ವರಿ ಜೊತೆಗೆ ಅವರ ತಮ್ಮ ಮಾರುತಿ ಹಾಗೂ ಪುತ್ರ ದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ

ಸ್ಥಳಕ್ಕೆ ದೊಡ್ಡಪೇಟೆ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment