/newsfirstlive-kannada/media/post_attachments/wp-content/uploads/2024/06/Delhi-2.jpg)
ಮಹಿಳೆಯೊಬ್ಬರು ಹೆತ್ತ ಮಗಳನ್ನೇ ಮನೆಯಲ್ಲೇ ಹೂತು ಹಾಕಿದ್ದ ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ನಡೆದಿದೆ. ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ತಂದೆ ತಾಹೀರ್​ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
17 ವರ್ಷದ ಪರ್ವೀನಾಳನ್ನು ತಾಯಿ ಅನಿತಾ ಬೇಗಂ ಸಮಾಧಿ ಮಾಡಿದ್ದಳು. ಆದರೆ 10 ತಿಂಗಳ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆದರೆ ಅನಿತಾ ಬೇಗಂ ತನ್ನ ಮಗಳನ್ನು ನಾನು ಕೊಂದಿಲ್ಲ, ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾಳೆ.
ಇದನ್ನೂ ಓದಿ: ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?
ಸೌದಿ ಅರೇಬಿಯಾದಲ್ಲಿರುವ ತಾಹೀರ್ ತನ್ನ ಪತ್ನಿ ಅನಿತಾ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅತ್ತ ಮಗಳ ಜೊತೆಗೆ ಅನಿತಾ ವಾಸಿಸುತ್ತಿದ್ದಳು. ಆದರೆ ಬರು ಬರುತ್ತಾ ದೂರದ ಊರಿನಲ್ಲಿದ್ದ ತಂದೆಗೆ ತನ್ನ ಮಗಳ ಪ್ರತಿಕ್ರಿಯೆ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ​ಕೊನೆಗೆ ತಾಹೀರ್​​ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಜೂನ್​ 7ರಂದು ಪೊಲೀಸರಿಗೆ ಮೇಲ್​ ಮಾಡಿದ್ದರು. ಬಳಿಕ ಪೊಲೀಸರು ಈ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್‌ಗೆ ಬಿಗ್ ಶಾಕ್.. 17 ಆರೋಪಿಗಳ ಮೊಬೈಲ್‌ನಿಂದ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್; ಏನದು?
ಅನೀತಾ ಬೇಗಂ ತನ್ನ ಮಗಳನ್ನು ಮನೆಯಲ್ಲೇ ಸಮಾಧಿ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ. ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಅಂತ ಹೆದರಿ ಇಬ್ಬರ ಸಹಾಯದಿಂದ ಸಮಾಧಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ
ತನಿಖೆ ವೇಳೆ ಅನಿತಾ ಬೇಗಂ, ‘‘ನಾನು ಆಕೆಯನ್ನು ಕೊದಿಲ್ಲ. ಆಕೆ ಬೇರೆಯವರ ಜೊತೆ ಸಂಬಂಧ ಹೊಂದಿದ್ದಳು ಮತ್ತು ಓಡಿ ಹೋಗಲು ಯತ್ನಿಸಿದ್ದಳು. ಅದಕ್ಕೆ ಆಕೆಯನ್ನು ಕೂಡಿ ಹಾಕಿ ಮಲಗಿದೆವು. ಆದರೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’’ ಎಂದು ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us