ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಸಾಧನೆ; ಮಗಳು ಡಿಸ್ಟಿಂಕ್ಷನ್, ತಾಯಿಗೆ ಬಂದ ಮಾರ್ಕ್ಸ್‌ ಎಷ್ಟು?

author-image
admin
ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಸಾಧನೆ; ಮಗಳು ಡಿಸ್ಟಿಂಕ್ಷನ್, ತಾಯಿಗೆ ಬಂದ ಮಾರ್ಕ್ಸ್‌ ಎಷ್ಟು?
Advertisment
  • 25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ್ದ ತಾಯಿ ಬೇಬಿರಾಣಿ
  • ಈ ಬಾರಿ ಮಗಳ ಒತ್ತಾಯಕ್ಕೆ ಮಣಿದು ಪಿಯು ಪರೀಕ್ಷೆ ಬರೆದಿದ್ದು ಪಾಸ್
  • ಇಂದು ಬಂದ ಫಲಿತಾಂಶದಲ್ಲಿ ತಾಯಿ ಮಗಳು ಇಬ್ಬರೂ ಅಮೋಘ ಸಾಧನೆ

ಕೊಡಗು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಈ ಬಾರಿ 6 ಲಕ್ಷದ 81 ಸಾವಿರದ 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5 ಲಕ್ಷದ 52 ಸಾವಿರದ 690 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಕೊಡಗಿನ ತಾಯಿ ಮಗಳು ಉತ್ತೀರ್ಣರಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಕೊಡಗು ಜಿಲ್ಲೆ ಚೆಟ್ಟಳ್ಳಿಯ ತಾಯಿ ಬೇಬಿರಾಣಿ ಹಾಗೂ ಮಗಳು ರಿನಿಶಾ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆದ್ದಿದ್ದರು. ಮಗಳು ರಿನಿಶಾ 600ಕ್ಕೆ 570 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ.

ಇದನ್ನೂ ಓದಿ: PUC Result: ವಿಜ್ಞಾನ​ ವಿಭಾಗದಲ್ಲಿ ವಿದ್ಯಾಲಕ್ಷ್ಮಿ ಟಾಪರ್.. 1 ಲಕ್ಷ ರೂಪಾಯಿ ಬಹುಮಾನ ಕೊಟ್ಟಿದ್ದು ಯಾರು?

ತಾಯಿ, ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು. ಮಗಳು ರಿನಿಶಾ ಗೋಣಿಕೊಪ್ಪದ ಪಿಯು ಕಾಲೇಜಿನಲ್ಲಿ ಓದಿದ್ದರು. ತಾಯಿ ಬೇಬಿರಾಣಿ ನೆಲ್ಲಿಹುದಿಕೇರಿ ಕಾಲೇಜು ಸೇರಿದ್ದರು. ಇಂದು ಬಂದ ಫಲಿತಾಂಶದಲ್ಲಿ ತಾಯಿ ಮಗಳು ಇಬ್ಬರೂ ಪಾಸ್ ಆಗಿದ್ದಾರೆ.

25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ್ದ ತಾಯಿ ಬೇಬಿರಾಣಿ, ಈ ಬಾರಿ ಮಗಳ ಒತ್ತಾಯಕ್ಕೆ ಮಣಿದು ಪಿಯು ಪರೀಕ್ಷೆ ಬರೆದಿದ್ದರು. ತಾಯಿ ಬೇಬಿರಾಣಿ 600ಕ್ಕೆ 388 ಅಂಕ ಪಡೆದು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ. ಬೇಬಿರಾಣಿ ಅವರು ಕನ್ನಡದಲ್ಲಿ 93, ಇಂಗ್ಲೀಷ್ 58, ಇತಿಹಾಸ 73, ಅರ್ಥಶಾಸ್ತ್ರ 35, ಸಮಾಜಶಾಸ್ತ್ರ 72, ರಾಜಕೀಯ ಶಾಸ್ತ್ರದಲ್ಲಿ 57 ಅಂಕ ಗಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment