/newsfirstlive-kannada/media/post_attachments/wp-content/uploads/2025/06/CBL-DEATH.jpg)
ಚಿಕ್ಕಬಳ್ಳಾಪುರ: ಇಬ್ಬರು ಹೆಣ್ಮಕ್ಕಳನ್ನು ಕೆರೆಗೆ ಹಾಕಿ ತಾನೂ ಸಾವಿಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಂಗಧಾಮ ಕೆರೆಯಲ್ಲಿ ನಡೆದಿದೆ.
ತಾಯಿ ಲಾವಣ್ಯ (30), ಮಗಳು ನಿಹಾರಿಕಾ (9) ಹಾಗೂ ನೇಹಾ (6) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಚಿಕ್ಕಬಳ್ಳಾಪುರ ತಾಲೂಕಿನ ಬೋದಗಾನಹಳ್ಳಿ ಗ್ರಾಮದವರು.
ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ‘ಸರಿಗಮಪ ಸೀಸನ್ 21’.. ಬೀದರ್ನ ಶಿವಾನಿಗೆ ಒಲಿದ ವಿನ್ನರ್ ಪಟ್ಟ; ರನ್ನರ್ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ