/newsfirstlive-kannada/media/post_attachments/wp-content/uploads/2025/07/ELEPHANT-1.jpg)
ಮೂಕ ಪ್ರಾಣಿಗಳು ಅತೀ ಬುದ್ದಿವಂತರು, ತಮ್ಮವರಿಗಾಗಿ ಎತಂಹ ತ್ಯಾಗಕ್ಕೂ ಸಿದ್ದವಾಗಿರ್ತವೇ, ಬಾಯಿ ಬರದಿದ್ದರು ಪ್ರೀತಿಗೆ ಕೊರತೆ ಇಲ್ಲಾ ಅನ್ನೋದಕ್ಕೆ ಇದೇ ಘಟನೆ ಸಾಕ್ಷಿ. ಕಳೆದುಕೊಂಡ ಕಂದನನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ಸವೆಸಿದ ಕಾಡಾನೆಯ ದಂತ ಕಥೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ
ಇದು ಚಿಕ್ಕಮಗಳೂರು.. ಹಸಿರನ್ನೇ ಹೊದ್ದ ನಾಡು.. ಸುತ್ತಲು ಕಾಫಿ ಘಮ.. ವನ್ಯಜೀವಿಗಳ ತವರು ಮನೆ.. ಆನೆಗಳ ಹಿಂಡಿನ ದಂಡು ದಾಂಧಲೆ ಸಹಜ.. ಕಾಡನೆ ಮಾನವ ಸಂಘರ್ಷಗಳಿಗೆ ಮೀತಿ ಮೀರಿದೆ.. ಆದ್ರೆ, ಇಲ್ಲಿ ಪ್ರಾಣಿಗಳ ಬೆರಗಿನ ಲೋಕ.. ಮನ ಮರಗುವ ಕಥೆಗಳು ಬೆಟ್ಟದಷ್ಟು..
ಮೃತಪಟ್ಟ ಮುದ್ದು ಮರಿಗಾಗಿ 150ಕಿ.ಮೀ ಕ್ರಮಿಸಿದ ಕಾಡನೆ!
ಹಲವರಿಗೆ ಈ ಕಾಡನೆಗಳ ಉಪಟಳವೇ ಶತ್ರು.. ಹಿಂಡಿ ಹಾಕಿದ ಪ್ರಾಣಕ್ಕೆ ಕುಟುಂಬಸ್ಥರು ಹಿಡಿ ಶಾಪ ಹಾಕದ ದಿನವೇ ಇಲ್ಲ.. ಇದರ ನಡುವೆ ತನ್ನ ಮರಿಯನ್ನ ಕಳೆದುಕೊಂಡ ಕಾಡನೆಯೊಂದರ ಯಾತನೇ ಕಂಡು ಕಟುಕರು ಸಹ ಮರುಗುವಂತಾಗಿದೆ..
ಇದನ್ನೂ ಓದಿ: Baba Vanga: ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ.. ಎಲ್ಲರಿಗೂ ಅಚ್ಚರಿ.. ಏನದು?
ಅಂದ್ಹಾಗೆ ಈ ಹೆಣ್ಣಾನೆ ಕ್ರಮಿಸಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 150ಕ್ಕೂ ಅಧಿಕ ಕಿಲೋ ಮೀಟರ್ ಅಂದ್ರೆ ನೀವು ನಂಬ್ಲೇಬೇಕು.. ಪಕ್ಕದ ಜಿಲ್ಲೆ ಕೊಡಗಿನ ಪಾಲಿಬೆಟ್ಟದಿಂದ ಮರಿಯನ್ನ ತಾಯಾನೆ ಹುಡುಕಿ ಬಂದಿದೆ.. ಕೆಲ ದಿನದ ಹಿಂದೆ ತನ್ನ ಮರಿ ಸಾವನ್ನಪಿತ್ತು. ಇದೇ ವೇದನೆಯಲ್ಲಿ ಅಲೆದಾಡ್ತಿದ್ದ ಹೆಣ್ಣಾನೆಯನ್ನ ನಿನ್ನೆ ಪಾಲಿಬೆಟ್ಡದಿಂದ ಅರಣ್ಯಕ್ಕೆ ಅಟ್ಟಿಸಿದ್ದಾರೆ.. ಅಲ್ಲಿಂದ ಹೆಜ್ಜೆ ಇಡಲು ಆರಂಭಿಸಿದ ಈ ಹೆತ್ತಮ್ಮ ತಲುಪಿದ್ದು ಮೂಡಿಗೆರೆ ಹಾಸನದ ಗಡಿ ಭಾಗದ ಎಸ್ಟೇಟ್ಗೆ.
ಕೊಡಗಿನಿಂದ ಆಗಮಿಸಿದೆ ಅನ್ನೋದನ್ನ ಆನೆ ಕೊರಳಲ್ಲಿರುವ ರೇಡಿಯೊ ಕಾಲರ್ ಮುಖಾಂತರ ತಿಳಿದು ಬಂದಿದೆ.. ಅಲ್ಲದೇ ಆನೆ ಚಲನವಲದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಆದ್ರೆ ಬರುವ ಮಾರ್ಗದಲ್ಲಿ ಯಾರಿಗೂ ಉಪದ್ರವ ಮಾಡದ ಮೂಕ ತಾಯಿ, ತಿಂಗಳ ಹಿಂದೆ ಮೃತಪಟ್ಟ ಮರಿಗಾಗಿ ಈಗಲೂ ರೊಧಿಸ್ತಿರೋದು ಎಂಥವರ ಕರುಳು ಹಿಂಡುವಂತಿದೆ.
ಇದನ್ನೂ ಓದಿ: 5 ಸ್ಥಳಗಳಲ್ಲೂ ಸಿಗಲಿಲ್ಲ ಕಳೇಬರ.. SIT ಹೆಲ್ಪ್ಲೈನ್ ರಿಲೀಸ್, ಮುಂದಿನ ತನಿಖೆ ತೀವ್ರ ಕುತೂಹಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ